ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆಯಾಗುವುದಕ್ಕಿಂತ ಕೆಲವೇ ನಿಮಿಷಗಳ ಮೊದಲು ಬ್ರಿಟಿಷ್ ಸುದ್ದಿಪತ್ರಿಕೆಯೊಂದಕ್ಕೆ ಅನಾಮಧೇಯ ಕರೆಯೊಂದನ್ನು ಮಾಡಲಾಗಿತ್ತು ಮತ್ತು ಕೆನಡಿ ಹತ್ಯೆಯ ಬಗ್ಗೆ ಸುಳಿವು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಲಂಡನ್(ಅ.28): ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆಯಾಗುವುದಕ್ಕಿಂತ ಕೆಲವೇ ನಿಮಿಷಗಳ ಮೊದಲು ಬ್ರಿಟಿಷ್ ಸುದ್ದಿಪತ್ರಿಕೆಯೊಂದಕ್ಕೆ ಅನಾಮಧೇಯ ಕರೆಯೊಂದನ್ನು ಮಾಡಲಾಗಿತ್ತು ಮತ್ತು ಕೆನಡಿ ಹತ್ಯೆಯ ಬಗ್ಗೆ ಸುಳಿವು ನೀಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಕೆನಡಿ ಕುರಿತ ರಹಸ್ಯ ದಾಖಲೆಗಳನ್ನು ಒಳಗೊಂಡ 2800ಕ್ಕೂ ಹೆಚ್ಚು ದಾಖಲೆಗಳನ್ನು ಅಮೆರಿಕ ಶುಕ್ರವಾರ ಬಿಡುಗಡೆ ಮಾಡಿದ್ದು ಅದರಲ್ಲಿ ಈ ಮಾಹಿತಿ ಇದೆ. 1963 ನ.22ರಂದು ಕೆನಡಿ ಟೆಕ್ಸಾಸ್‌'ನ ಡಲ್ಲಾಸ್'ನಲ್ಲಿ ಹತ್ಯೆಯಾದ ದಿನ ಕೇಂಬ್ರಿಜ್ಡ್ ನ್ಯೂಸ್ ಕರೆಯೊಂದು ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ, ದೊಡ್ಡ ಸುದ್ದಿಯೊಂದಕ್ಕಾಗಿ ನೀವು ಕೂಡಲೇ ಲಂಡನ್‌'ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಗೆ ಫೋನ್ ಮಾಡಿ ಎಂದು ತಿಳಿಸಿದ್ದ. ಹತ್ಯೆಗೂ ಸುಮಾರು 25 ನಿಮಿಷಗಳ ಮೊದಲು ಈ ಕರೆ ಮಾಡಲಾಗಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯಾದ ಎಫ್ ಬಿಐ ತನ್ನ ರಹಸ್ಯ ಮೆಮೋದಲ್ಲಿ ದಾಖಲಿಸಿತ್ತು. ಆದರೆ ಇದು ಹುಸಿ ಕರೆಯೋ ಅಥವಾ ನಿಜವಾಗಿಯೂ ಹತ್ಯೆ ಸಂಬಂಧಿಸಿದ್ದೋ ಎಂದು ಗೊತ್ತಿಲ್ಲ ಎಂದು ಎಫ್'ಬಿಐ ಹೇಳಿದೆ.