ಬೈ ಎಲೆಕ್ಸನ್'​ಗೆ ಬೈ ಬೈ ಹೇಳುವಷ್ಟರಲ್ಲಿಯೇ ಸಿಎಂಗೆ ಮತ್ತೊಂದು ತಲೆ ನೋವು ಶುರುವಾಗಲಿದೆ. ಅದೂ ಸಂಪುಟ ಪುನರಚನೆ ಕುರಿತು. ಉಪಚುನಾವಣೆ ಬಳಿಕ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಮುಂದಾಗಲಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣೆಯನ್ನು ಎಐಸಿಸಿ ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಬಿಟ್ಟುಕೊಡಬಾರದು ಎನ್ನುವ ತೀರ್ಮಾನಕ್ಕೆ ಬಂದಿದೆ. ಆದ್ದರಿಂದ ಪಕ್ಷದಲ್ಲಿ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ.

ಈಗಾಗಲೇ ರಾಸಲೀಲೆ ಪ್ರಕರಣದಲ್ಲಿ ಹೆಚ್ ವೈ ಮೇಟಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದರೆ, ಮಹದೇವ ಪ್ರಸಾದ್ ನಿಧನದಿಂದಾಗಿ ಮತ್ತೊಂದು ಸ್ಥಾನ ಖಾಲಿಯಾಗಿದೆ. ಒಟ್ಟು ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಬೈ ಎಲೆಕ್ಸನ್ ಬಳಿಕ ಈ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಜೊತೆಗೆ ಕೆಲವರನ್ನ ಕೈಬಿಟ್ಟು ಮಿಕ್ಕ ಕೆಲವರಿಗೆ ಅವಕಾಶ ನೀಡುವ ಚಿಂತನೆ ಮುಖ್ಯಮಂತ್ರಿ ಸಿದ್ದರಾಮಯ್ಯರದ್ದಾಗಿದೆ. ಇದಕ್ಕಾಗಿ ಈಗಾಗಲೇ ಲಾಬಿ ಶುರುವಾಗಿದೆ.

ಬೈ ಎಲೆಕ್ಸನ್ ಪ್ರಚಾರದ ವೇಳೆ ಗೀತಾ ಮಹದೇವ್ ಪ್ರಸಾದರನ್ನ ಗೆಲ್ಲಿಸಿದರೆ ಮಂತ್ರಿಯಾಗುತ್ತಾರೆ ಎನ್ನುವ ಮಾತನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇಬ್ಬರು ಹೇಳಿದ್ದಾರೆ. ಅಂದ್ರೆ ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗೋದು ಪಕ್ಕಾ. ಹಾಗಾದ್ರೆ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡುತ್ತಾರೋ ಅಥವಾ ಪುನರಚನೆ ಮಾಡುತ್ತಾರೋ ಎನ್ನುವ ಪ್ರಶ್ನೆಗೆ ಪುನರಚನೆ ಸಾಧ್ಯತೆಯೇ ಹೆಚ್ಚಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಸಚಿವಸ್ಥಾನದಆಕಾಂಕ್ಷಿಗಳು

-ಕೆ.ಎನ್.ರಾಜಣ್ಣ, ಹೆಚ್.ಎಂ. ರೇವಣ್ಣ, ವಿ.ಎಸ್.ಉಗ್ರಪ್ಪ,

-ಎಸ್.ಟಿ.ಸೋಮಶೇಖರ್, ನರೇಂದ್ರಸ್ವಾಮಿ, ಕೆ.ಸಿ.ಕೊಂಡಯ್ಯ,

-ಆರ್.ಬಿ.ತಿಮ್ಮಾಪುರ, ಮೋಟಮ್ಮ, ರಾಜಶೇಖರ್ ಪಾಟೀಲ್ ಹುಮ್ನಾಬಾದ್,

-ಮಾಲಿಕಯ್ಯ ಗುತ್ತೇದಾರ್, ಎಸ್.ಆರ್.ಪಾಟೀಲ್

ಸಂಪುಟದಿಂದಹೊರಹೋಗುವಸಾಂಭಾವ್ಯರು

-ಉಮಾಶ್ರೀ,

-ಯು.ಟಿ.ಖಾದರ್,

-ಎಂ.ಬಿ.ಪಾಟೀಲ್

ಚುನಾವಣಾ ವರ್ಷವಾದುದರಿಂದ ಬಹಳ ಎಚ್ಚರಿಕೆ ನಡೆ ಇಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳನ್ನ ಮತ್ತು ಸಂಪುಟದಿಂದ ಹೊರಹೋಗುವರನ್ನು ಸಮಾಧಾನ ಪಡಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಆದರೆ ಇದೆಲ್ಲವೂ ಉಪಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ಎನ್ನಲಾಗಿದೆ.

ಇನ್ನು, ಏಐಸಿಸಿ ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕಾರಣದಿಂದಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಕೆಲ ಮಹತ್ವದ ಬದಲಾವಣೆಗೆ ಚಿಂತನೆ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಸಚಿವರಿಗೆ ವಲಯವಾರು ಜವಾಬ್ದಾರಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಯ ಬದಲಾವಣೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.