ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಸಾಕಷ್ಟುಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತಕ್ಷಣದ ನಿರ್ಧಾರ ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯದ ಇತರ ನಾಯಕರೊಂದಿಗೂ ಸಮಾಲೋಚನೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಬದಲಾವಣೆ ವಿಚಾರ ಮುಂದೂಡಿಕೆ ಕಂಡಿದೆ.

ಬೆಂಗಳೂರು(ಏ.16): ಉಪ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈ-ಪವರ್‌ ನೀಡಲು ಹೈಕಮಾಂಡ್‌ ಕೂಡ ಮುಂದಾಗಿದೆ. ಆದರೆ, ಇದಕ್ಕೆ ರಾಜ್ಯದ ಇತರ ನಾಯಕರ ಜೊತೆ ಚರ್ಚಿಸಬೇಕು ಎಂಬ ಷರತ್ತು ಕೂಡ ಅನ್ವಯವಾಗಿದೆ!
ಉಪ ಚುನಾವಣೆ ಫಲಿತಾಂಶದ ವಿವರ ನೀಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಡಗೂಡಿ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ತಿನ 3 ಸದಸ್ಯರ ನಾಮಕರಣ ಹಾಗೂ ಸಚಿವ ಸಂಪುಟದಲ್ಲಿ ಖಾಲಿ ಉಳಿದಿರುವ ಎರಡು ಸ್ಥಾನಗಳ ಭರ್ತಿಗೆ ಸಂಬಂಧಿಸಿದಂತೆ ಪೂರ್ಣ ಫ್ರೀ ಹ್ಯಾಂಡ್‌ ಸಿಕ್ಕಿದೆ.
ಆದರೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಸಾಕಷ್ಟುಸಂಕೀರ್ಣವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ತಕ್ಷಣದ ನಿರ್ಧಾರ ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯದ ಇತರ ನಾಯಕರೊಂದಿಗೂ ಸಮಾಲೋಚನೆ ನಡೆಯಬೇಕಿರುವ ಹಿನ್ನೆಲೆಯಲ್ಲಿ ಬದಲಾವಣೆ ವಿಚಾರ ಮುಂದೂಡಿಕೆ ಕಂಡಿದೆ.

ಹೀಗಾಗಿ ಸದ್ಯಕ್ಕೆ ಪರಮೇಶ್ವರ್‌ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ವಾಸ್ತವವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಜೆಂಡಾದಲ್ಲಿ ಪ್ರಮುಖವಾಗಿದ್ದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಚರ್ಚೆಗೆ ಬಂದಿಲ್ಲ. ಬದಲಾಗಿ, ಈ ಭೇಟಿಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಉಸ್ತುವಾರಿ ದಿಗ್ವಿಜಯಸಿಂಗ್‌ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರನ್ನು ಏಕಾಂಗಿಯಾಗಿ ಭೇಟಿ ಮಾಡಿ ಸುಮಾರು ಸಮಯ ಮಾತುಕತೆ ನಡೆಸಿದ್ದು, ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಗತ್ಯವನ್ನು ಬಲವಾಗಿ ಮಂಡಿಸಿದ್ದಾರೆ.

 ಜತೆಗೆ, ಈ ಹುದ್ದೆಯ ಆಕಾಂಕ್ಷಿಯಾ ಗಿರುವ ಡಿ.ಕೆ.ಶಿವಕುಮಾರ್‌ ಅವರನ್ನು ಪರಿಗಣಿಸುವುದಕ್ಕೆ ವಿರೋಧ ವ್ಯಕ್ತಪಡಿ ಸಿದ್ದಾರೆ ಎಂದು ಹೇಳಲಾಗಿದೆ. ಪರಮೇಶ್ವರ್‌ ಅವರನ್ನು ಬದಲಾ ಯಿಸುವಾಗ ಈ ಹುದ್ದೆಯನ್ನು ದಲಿತರಿಗೆ ನೀಡಬೇಕು, ಅಂದರೆ ಮಹದೇವಪ್ಪ ಅವರನ್ನು ಪರಿಗಣಿಸ ಬೇಕು. ಅದು ಸಾಧ್ಯವಾಗದೆ ಮೇಲ್ವ ರ್ಗಕ್ಕೆ ನೀಡಬೇಕು ಎಂದರೆ ಲಿಂಗಾ ಯತರಿಗೆ ನೀಡಬೇಕು ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ.

 ಈ ಹಂತದಲ್ಲಿ ಬಹುಕಾಲದಿಂದ ತಮ್ಮ ಬತ್ತಳಿಕೆಯಲ್ಲಿದ್ದ ಎಸ್‌.ಆರ್‌. ಪಾಟೀಲ್‌ ರ ಹೆಸರನ್ನು ಕೈಬಿಟ್ಟು, ಸಂಪನ್ಮೂಲ ಕ್ರೋಡೀಕರಣ ಸಾಮರ್ಥ್ಯ ಹೊಂದಿರುವ ಎಂ.ಬಿ. ಪಾಟೀಲ್‌ ಅವರನ್ನು ಸೂಚಿಸಿದ್ದಾರೆ ಎಂದು ದೆಹಲಿಯ ಮೂಲಗಳು ಹೇಳುತ್ತವೆ. ಆದರೆ, ಈ ವಿಚಾರ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್‌ ಫರ್ನಾಂಡಿಸ್‌ ಅವರ ಸಮ್ಮುಖದಲ್ಲಿ ಚರ್ಚೆಯಾಗಬೇಕಿದೆ. ಈ ಪ್ರಕ್ರಿಯೆ ಸುದೀರ್ಘವಾಗುವ ಸಾಧ್ಯತೆಯಿರುವುದ ರಿಂದ ಸದ್ಯಕ್ಕೆ ಪರಮೇಶ್ವರ್‌ ಮುಂದುವರೆಯಲಿ ಎಂಬ ನಿಲುವಿಗೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಂಎಲ್‌ಸಿ ನೇಮಕ ಹಾಗೂ ಸಚಿವ ಸಂಪುಟದಲ್ಲಿನ ಖಾಲಿ ಸ್ಥಾನ ತುಂಬುವ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಸಂಪೂರ್ಣ ಫ್ರೀ ಹ್ಯಾಂಡ್‌ ನೀಡಿದೆ.