Asianet Suvarna News Asianet Suvarna News

ಸೌಮ್ಯಾ ರೆಡ್ಡಿ ಔಟ್‌, ಲಕ್ಷ್ಮೀ ಹೆಬ್ಬಾಳ್ಕರ್‌ ಇನ್‌

ನಿಗಮ- ಮಂಡಳಿ ಅಧ್ಯಕ್ಷರ 18 ಜನರ ಪಟ್ಟಿಯಲ್ಲಿ ಸ್ಥಾನ ಪಡೆ​ದಿರದಿದ್ದ ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಶಾಸ​ಕಿ ಲಕ್ಷ್ಮೀ ಹೆಬ್ಬಾ​ಳ​ಕ​ರ್‌ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇ​ಗೌಡ ಅವರು ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಥಾನ ಪಡೆ​ದಿ​ದ್ದಾರೆ. 

Cabinet Expansion Soumya Reddy out Lakshmi Hebbalkar in
Author
Bengaluru, First Published Dec 23, 2018, 8:04 AM IST

ಬೆಂಗ​ಳೂರು :  ಹೈಕ​ಮಾಂಡ್‌ ಸೂಚನೆ ಮೇರೆಗೆ ನಿಗಮ- ಮಂಡಳಿ ಹಾಗೂ ಸಂಸ​ದೀಯ ಕಾರ್ಯ​ದ​ರ್ಶಿ​ಗಳ ಪಟ್ಟಿ​ಯಲ್ಲಿ ಕೆಲ​ವೊಂದು ಬದ​ಲಾ​ವ​ಣೆ​ಯನ್ನು ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕತ್ವ, ಶುಕ್ರ​ವಾರ ಅಧಿ​ಕೃತ ಪಟ್ಟಿ​ಯನ್ನು ಪ್ರಕ​ಟಿ​ಸಿದ್ದು, 18 ನಿಗಮ ಮಂಡ​ಳಿ​ಗಳ ಬದ​ಲಾಗಿ 19 ನಿಗಮ-ಮಂಡ​ಳಿ​ಗ​ಳಿಗೆ ಮತ್ತು 7 ಸಂಸ​ದೀಯ ಕಾರ್ಯ​ದ​ರ್ಶಿ​ಗಳ ಬದ​ಲಾಗಿ 9 ಸಂಸ​ದೀಯ ಕಾರ್ಯ​ದ​ರ್ಶಿ​ ಹುದ್ದೆಗಳಿಗೆ ನೇಮಕ ಮಾಡಲು ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಅವ​ರಿಗೆ ಶಿಫಾ​ರಸು ಮಾಡಿ​ದೆ.

ಕಾಂಗ್ರೆಸ್‌ ಮೂಲ​ಗಳು ಶುಕ್ರ​ವಾರ ಮಾಧ್ಯ​ಮ​ಗ​ಳಿಗೆ ಬಿಡು​ಗಡೆ ಮಾಡಿದ್ದ ನಿಗಮ- ಮಂಡಳಿ ಅಧ್ಯಕ್ಷರ 18 ಜನರ ಪಟ್ಟಿಯಲ್ಲಿ ಸ್ಥಾನ ಪಡೆ​ದಿರದಿದ್ದ ಬೆಳ​ಗಾವಿ ಗ್ರಾಮೀಣ ಕ್ಷೇತ್ರದ ಶಾಸ​ಕಿ ಲಕ್ಷ್ಮೀ ಹೆಬ್ಬಾ​ಳ​ಕ​ರ್‌ ಹಾಗೂ ಶೃಂಗೇರಿ ಶಾಸಕ ಟಿ.ಡಿ.ರಾಜೇ​ಗೌಡ ಅವರು ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಥಾನ ಪಡೆ​ದಿ​ದ್ದಾರೆ. ಲಕ್ಷ್ಮೀ ಹೆಬ್ಬಾ​ಳ​ಕರ್‌ ಅವ​ರಿಗೆ ಮಹ​ತ್ವದ ಮೈಸೂರು ಮಿನ​ರ​ಲ್ಸ್‌ ಲಿಮಿ​ಟೆಡ್‌ ಮಂಡಳಿ ದೊರ​ಕಿ​ದ್ದರೆ, ರಾಜೇ​ಗೌಡ ಅವರು ಮಲೆ​ನಾಡು ಪ್ರದೇಶ ಅಭಿ​ವೃದ್ಧಿ ಪ್ರಾಧಿ​ಕಾ​ರದ ಅಧ್ಯಕ್ಷ ಸ್ಥಾನ​ವನ್ನು ಪಡೆ​ದಿ​ದ್ದಾರೆ.

ಆದರೆ, ಶಾಸ​ಕ​ರಾದ ಪ್ರಸಾದ್‌ ಅಬ್ಬಯ್ಯ ಹಾಗೂ ಪಕ್ಷೇ​ತರ ನಾಗೇಶ್‌ ಅವರು ಪಟ್ಟಿ​ಯಿಂದ ಹೊರಬಿದ್ದಿ​ದ್ದಾರೆ. ಇನ್ನು, ತಮ್ಮ ತಂದೆ ರಾಮ​ಲಿಂಗಾ​ರೆಡ್ಡಿ ಅವ​ರಿಗೆ ಸಚಿವ ಸ್ಥಾನ ನೀಡ​ಲಿಲ್ಲ ಎಂದು ಸಂಸ​ದೀಯ ಕಾರ್ಯ​ದರ್ಶಿ ಹುದ್ದೆ​ಯನ್ನು ತಿರ​ಸ್ಕ​ರಿ​ಸಿದ ಜಯ​ನ​ಗರ ಶಾಸ​ಕಿ ಸೌಮ್ಯಾ ರೆಡ್ಡಿ ಅವ​ರನ್ನು ಸಂಸ​ದೀಯ ಕಾರ್ಯ​ದ​ರ್ಶಿ​ಗಳ ಅಂತಿಮ ಪಟ್ಟಿ​ಯಿಂದ ಕೈಬಿಡಲಾ​ಗಿ​ದೆ. ಸೌಮ್ಯಾ ರೆಡ್ಡಿ ಬದ​ಲಾಗಿ ವಿಧಾ​ನ​ಪ​ರಿ​ಷತ್‌ ಸದಸ್ಯ ಎ.ಅಬ್ದುಲ್‌ ಜಬ್ಬಾರ್‌ ಸ್ಥಾನ ಗಿಟ್ಟಿ​ಸಿ​ದ್ದಾರೆ. ಇವ​ರ​ಲ್ಲದೆ, ಹೊಸ​ದಾಗಿ ವಿಧಾನ ಪರಿ​ಷತ್‌ ಸದಸ್ಯ ಎಂ.ಎ.ಗೋಪಾ​ಲ​ಸ್ವಾಮಿ ಮತ್ತು ಲಿಂಗ​ಸು​ಗೂರು ಶಾಸ​ಕ ದುರ್ಗಪ್ಪ ಹಲ​ಗೇರಿ ಸಂಸ​ದೀಯ ಕಾರ್ಯ​ದರ್ಶಿ ಹುದ್ದೆ​ಯನ್ನು ಗಿಟ್ಟಿ​ಸಿ​ದ್ದಾರೆ.

9 ಮಂದಿ ಸಂಸ​ದೀಯ ಕಾರ್ಯ​ದ​ರ್ಶಿ​ಗಳ ಪೈಕಿ ನಾಲ್ಕು ಮಂದಿ ವಿಧಾ​ನ​ಪ​ರಿ​ಷತ್‌ ಸದ​ಸ್ಯರು ಹಾಗೂ ಐದು ಮಂದಿ ವಿಧಾ​ನ​ಸ​ಭೆಯ ಸದಸ್ಯರು.

ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಅವರು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ನಿಗಮ- ಮಂಡಳಿ ಹಾಗೂ ಇತರೆ ಸ್ಥಾನ​ಗಳ ಪಟ್ಟಿಯನ್ನು ಶಿಫಾರಸು ಮಾಡಿದ್ದಾರೆ.

Follow Us:
Download App:
  • android
  • ios