ನವದೆಹಲಿ (ಸೆ.05): ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ  ಸಭೆಯಲ್ಲಿ 2014 ರ ಎಚ್ ಐವಿ ಮಸೂದೆ ತಿದ್ದುಪಡಿಗೆ ಅನುಮೋದನೆ ನೀಡಲಾಯಿತು.

ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ಈ ಮಸೂದೆಯನ್ನು ರೂಪಿಸಲಾಗಿತ್ತು. ಎಚ್ ಐವಿ/ಏಡ್ಸ್ ರೋಗಿಗಳು ಆ್ಯಂಟಿ ರೆಟ್ರೋವೈರಲ್ ಟ್ರೀಟ್’ಮೆಂಟನ್ನು ಪಡೆಯುವುದು ಅವರ ಕಾನೂನುಬದ್ಧ ಹಕ್ಕಾನ್ನಾಗಿಸುವುದು ಈ ಮಸೂದೆಯ ಉದ್ದೇಶವಾಗಿತ್ತು.

ಈ ಮಸೂದೆಯಡಿಯಲ್ಲಿ ಆ್ಯಂಟಿ ರೆಟ್ರೋವೈರಲ್ ಥೆರಪಿಯನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಒದಗಿಸಲಿದೆ. ಜೊತೆಗೆ ಎಚ್ ಐವಿ ರೋಗಿಗಳಿಗೆ ಯಾವುದೇ ತಾರತಮ್ಯ ಮಾಡಬಾರದೆಂದು,

ಎಚ್ ಐವಿ ಸಂಬಂಧಿತ ಎಲ್ಲಾ ಪರೀಕ್ಷೆಗಳ ಮಾಹಿತಿಯನ್ನು ಗೌಪ್ಯವಾಗಿಡಬೇಕೆಂದು ಮಸೂದೆಯಲ್ಲಿ ಹೇಳಲಾಗಿದೆ.