Asianet Suvarna News Asianet Suvarna News

ದರ ಪರಿಷ್ಕರಣೆ ಮೊದಲ ದಿನವೇ ಕ್ಯಾಬ್ ಗ್ರಾಹಕರು ಕುಸಿತ

ಬೆಂಗಳೂರು ನಗರದಲ್ಲಿ ಸಂಚರಿಸುವ ಆ್ಯಪ್ ಆಧರಿತ ಟ್ಯಾಕ್ಸಿಗಳ ದರ ಪರಿಷ್ಕರಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರೂ ಪ್ರಮುಖ ಟ್ಯಾಕ್ಸಿ ಸೇವಾ ಕಂಪನಿಗಳಾದ ಓಲಾ ಹಾಗೂ ಉಬರ್ ಟ್ಯಾಕ್ಸಿಗಳಲ್ಲಿ ನೂತನ ದರ ಜಾರಿಯಾಗಿಲ್ಲ.

Cab Passengers decreased

ಬೆಂಗಳೂರು (ಜ.12): ಬೆಂಗಳೂರು ನಗರದಲ್ಲಿ ಸಂಚರಿಸುವ ಆ್ಯಪ್ ಆಧರಿತ ಟ್ಯಾಕ್ಸಿಗಳ ದರ ಪರಿಷ್ಕರಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರೂ ಪ್ರಮುಖ ಟ್ಯಾಕ್ಸಿ ಸೇವಾ ಕಂಪನಿಗಳಾದ ಓಲಾ ಹಾಗೂ ಉಬರ್ ಟ್ಯಾಕ್ಸಿಗಳಲ್ಲಿ ನೂತನ ದರ ಜಾರಿಯಾಗಿಲ್ಲ.

ಜನವರಿ 9ರಿಂದ ಅನ್ವಯವಾಗುವಂತೆ ದರ ಪರಿಷ್ಕರಿಸಲಾಗಿದೆ. ಎರಡು ದಿನ ಕಳೆದರೂ ಈ ಕಂಪನಿಗಳು ಹಿಂದಿನ ದರದಲ್ಲಿಯೇ ಸೇವೆ ಮುಂದುವರಿಸಿವೆ. ಮೊದಲಿನ ಎಸಿ ಹಾಗೂ ನಾನ್ ಎಸಿ ವರ್ಗೀಕರಣ ತೆಗೆದು ವಾಹನಗಳ ಮೌಲ್ಯದ ಆಧರಿಸಿ 4 ವರ್ಗ ಮಾಡಿ, ಮೊದಲ 4 ಕಿ.ಮೀಗೆ ಕನಿಷ್ಠ ದರ 44ರಿಂದ 80 ರು. ಹಾಗೂ ನಂತರ ಪ್ರತಿ ಕಿ.ಮೀಗೆ 11 ರು.ನಿಂದ 45ರು. ನಿಗದಿಗೊಳಿಸಲಾಗಿದೆ.

ಈ ಹೊಸ ದರ ಅನುಸರಿಸಲು ಆ್ಯಪ್ ಆಧಾರಿತ ಕಂಪನಿಗಳು ಕೆಲ ಬದಲಾವಣೆ ಮಾಡಬೇಕು. ಹಾಗಾಗಿ ಇನ್ನು ಒಂದೆರೆಡು ದಿನ ಹಿಡಿಯಬಹುದು ಎಂದು ಕ್ಯಾಬ್ ಮಾಲೀಕರ ಸಂಘದ ಸದಸ್ಯರೊಬ್ಬರು ತಿಳಿಸಿದರು. ನೂತನ ದರ ಹೊರ ಬಿದ್ದ ಬಳಿಕ ಆ್ಯಪ್ ಆಧರಿತ ಟ್ಯಾಕ್ಸಿಗಳಿಗೆ ಗ್ರಾಹಕರ ಸಂಖ್ಯೆ ಕುಸಿತವಾಗಿದೆ.

ಗುರುವಾರ ಶೇ.25ರಿಂದ 30ರಷ್ಟು ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ಒಂದು ಟ್ಯಾಕ್ಸಿಗೆ ದಿನಕ್ಕೆ ಕನಿಷ್ಠ 10ರಿಂದ 12 ಟ್ರಿಪ್‌ಗಳು ಇರುತ್ತಿತ್ತು. ಆದರೆ, ಇಂದು 4ರಿಂದ 5 ಟ್ರಿಪ್ ಮಾತ್ರ ಸಿಕ್ಕಿದೆ. ದರ ಏರಿಕೆ ವಿಚಾರದಿಂದ ಗ್ರಾಹಕರು ಟ್ಯಾಕ್ಸಿಗಳತ್ತ ಆಸಕ್ತಿ ಕಳೆದುಕೊಂಡಂತೆ ತೋರುತ್ತದೆ. ಇದು ಹೀಗೆಯೇ ಮುಂದುವರಿದರೆ ಚಾಲಕರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದರೂ ಇನ್ನು ಒಂದೆರೆಡು ದಿನದ ಬಳಿಕ ಈ ದರ ಪರಿಷ್ಕರಣೆ ಪರಿಣಾಮ ಸ್ಪಷ್ಟವಾಗಿ ಕಾಣಿಸು ತ್ತದೆ ಎಂದು ಓಲಾ ಮತ್ತು ಉಬರ್ ಚಾಲಕರ ಸಂಘಟನೆ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದರು.

Follow Us:
Download App:
  • android
  • ios