Asianet Suvarna News Asianet Suvarna News

ಮಂಗಳೂರು: ಯಾವ ಕಾರಣಕ್ಕೆ ಗುಂಡು ಹಾರಿಸಬೇಕಾಯಿತು? ಹರ್ಷಾ ವಿವರಣೆ

ಪೌರತ್ವ ಮಸೂದೆ ವಿರುದ್ಧ ಪ್ರತಿಭಟನೆ/ ಮಂಗಳೂರಿನಲ್ಲಿ ಹಿಂಸಾಚಾರ/ ವಿವರ ನೀಡಿದ ಪೊಲೀಸ್ ಆಯುಕ್ತ/ ಯಾವ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದೆವು?/ ಸದ್ಯ ಮಂಗಳೂರಿನಲ್ಲಿ ಕರ್ಫ್ಯೂ ಜಾರಿ

CAA Protests Mangaluru Police commissioner DR PS Harsha Reaction
Author
Bengaluru, First Published Dec 19, 2019, 8:20 PM IST

ಮಂಗಳೂರು(ಡಿ. 19)  ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ವಿವರ ನೀಡಿದ್ದಾರೆ.

ಮಧ್ಯಾಹ್ನ 2 ಗಂಟೆಯ ನಂತರ ಗುಂಪು ಸೇರಿ‌ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಲಾಠಿಚಾರ್ಜ್ ನಡೆಸಿ ನಮ್ಮ ಪೊಲೀಸರು ಗುಂಪು ಚದುರಿಸಿದೆವು. ಬಳಿಕ ಮತ್ತಷ್ಟು ಗುಂಪು ನುಗ್ಗಿ ಬಂದಾಗ ಡಿಸಿ ಕಚೇರಿ ಬಳಿ ಅಶ್ರುವಾಯು ಪ್ರಯೋಗ ಮಾಡಬೇಕಾಯಿತು. ಆಗಲೂ ಜಗ್ಗದೇ ಗುಂಪುಗುಂಪಾಗಿ ಪೊಲೀಸರ ಮೇಲೆಯೇ ದಾಳಿಗೆ ಪ್ರತಿಭಟನಾಕಾರರು ಮುಂದಾದರು ಎಂದು ವಿವರ ನೀಡಿದ್ದಾರೆ.

ಮಂಗಳೂರು: ಶಾಲಾ-ಕಾಲೇಜುಗಳಿಗೆ ರಜಾ

ಸ್ಟೇಟ್ ಬ್ಯಾಂಕ್, ಬಂದರ್, ರಾವ್ ಅಂಡ್ ರಾವ್ ಸರ್ಕಲ್ ಬಳಿ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಅಲ್ಲದೇ ಆ ಬಳಿಕ ಬಂದರು ಠಾಣೆಗೆ ನೂರಾರು ಜನರ ತಂಡ ನುಗ್ಗಲು ಯತ್ನಿಸಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮತ್ತು ಪೊಲೀಸರ ಮೇಲೆ ದಾಳಿ ಮಾಡುವ ಉದ್ದೇಶದಿಂದ ನುಗ್ಗಿಬಂದಿದ್ದಾರೆ. ಆಗ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ.  ಇದಕ್ಕೂ ಜಗ್ಗದೇ ಕೆಲವರು ಪೊಲೀಸರ ಮೇಲೆ ನಿರಂತರ ಕಲ್ಲು ತೂರಿದರು. ಆಗ ಅನಿವಾರ್ಯವಾಗಿ ಪೊಲೀಸರು ಕಾನೂನಿನ ಅಡಿಯಲ್ಲಿ ಬಲಪ್ರಯೋಗ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

 

Follow Us:
Download App:
  • android
  • ios