Asianet Suvarna News Asianet Suvarna News

ಹಸಿದ, ಹಳಸಿದ ರಾಜ್ಯ ಮೈತ್ರಿ ಸರಕಾರ: ಸಿ.ಟಿ.ರವಿ ವ್ಯಂಗ್ಯ

ಬೆಂಗಳೂರು, ಬೀದರ್, ಬೆಳಗಾವಿ, ಬಿಜಾಪುರ ಮತ್ತು ಬಳ್ಳಾರಿ..'ಬಿ' ಹೆಸರಿನ ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದರಿಂದ ಸರಕಾರ ರಚಿಸಲು ಹಿನ್ನಡೆಯಾಯಿತು, ಎಂದು ಹೇಳಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ರಾಜ್ಯದ ಮೈತ್ರಿ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲವೆಂದು ಭವಿಷ್ಯ ನುಡಿದಿದ್ದಾರೆ.

C T Ravi criticizes Congress JDS government of Karnataka

ಬಳ್ಳಾರಿ: 'ನಾಯಿ ಹಸಿದಿತ್ತು. ಅನ್ನ ಹಳಸಿತ್ತು. ಇದು ಹಳಸಿದ ಹಸಿದ ಸರಕಾರ. ತಾಂತ್ರಿಕವಾಗಿ ಅಧಿಕಾರದಲ್ಲಿದೆ. ಆದರೆ, ನೈತಿಕವಾಗಿ ಸರ್ಕಾರ ನಡೆಸಲು ಉಭಯ ಪಕ್ಷಗಳಿಗೂ ಯೋಗ್ಯತೆ ಇಲ್ಲ,' ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

'ಲಿವ್ ಇನ್ ಟುಗೆದರ್ ಸರಕಾರವಿದು. ಅರೆಂಜ್ಡ್ ಮ್ಯಾರೇಜೇ ಹೆಚ್ಚು ದಿನ ಉಳಿಯದ ಈ ಕಾಲದಲ್ಲಿ ಸಹ ಜೀವನ ಉಳಿಯುತ್ತಾ? ಸಚಿವ ಸಂಪುಟ ರಚನೆ ವೇಳೆ ಸರಕಾರ ಬೀಳಲಿದೆ,' ಎಂದು ಭವಿಷ್ಯ ನುಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಬಿ.ಶ್ರೀನಿವಾಸ್ ಪರ ಪ್ರಚಾರ ನಡೆಸುತ್ತಿರುವ ಚಿಕ್ಕಮಗಳೂರು ಶಾಸಕ ರವಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಬಳ್ಳಾರಿ, ಬೀದರ್, ಬೆಳಗಾವಿ ಹಾಗೂ ಬೀಜಾಪುರ ಜಿಲ್ಲೆಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದರಿಂದ ಸರಕಾರ ರಚಿಸುವಲ್ಲಿ ಹಿನ್ನೆಡೆಯಾಯಿತು,' ಎಂದು ಬೇಸರ ವ್ಯಕ್ತಪಡಿಸಿದರು.

 'ಕೇಂದ್ರ ಸರಕಾರದ ನಾಲ್ಕು ವರ್ಷಗಳ ಸಾಧನೆ ಬಗ್ಗೆ ತೃಪ್ತಿ ಇದೆ. ಮೋದಿ ಜನರಿಗೆ ಹತ್ತಿರವಾಗಿ, ಪ್ರಧಾನ ಸೇವಕರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ,' ಎಂದು ಜಿಎಸ್‌ಟಿ ಹಾಗೂ ನೋಟು ಅಮಾನ್ಯಕರಣದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
 

"

Follow Us:
Download App:
  • android
  • ios