ಬೆಂಗಳೂರು(ಸೆ.26): ಮನೆಕಳ್ಳತನ, ದರೋಡೆಯಂತ ಕೃತ್ಯಗಳು ಬೆಂಗಳೂರು ನಗರದಲ್ಲಿ ಆಗಾಗ್ಗೆ ನಡೆಯುವುದು ಸಾಮಾನ್ಯ. ಆದರೆ ಇತ್ತೀಚ್ಚೆಗೆ ಮನೆಯಲ್ಲಿ ನಿಲ್ಲಿಸಿದ್ದ ಸೈಕಲ್'​​​​ನ್ನೇ ಟಾರ್ಗೆಟ್​​​​ ಮಾಡಿ ಸೈಕಲ್​​'ಗಳನ್ನು ದೋಚುವಂತಹ ಘಟನೆಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಕಳೆದ ತಿಂಗಳಷ್ಟೆ ಬೆಂಗಳೂರಿನ ಮೂಡಲಪಾಳ್ಯದ ಸರ್ಕಲ್'​​ನಲ್ಲಿ ಖದೀಮರ ತಂಡವೊಂದು ಸೈಕಲ್'​​ನ್ನ ಕದ್ದು ಪರಾರಿಯಾಗಿತ್ತು, ಇದೀಗ ಅಂತಹದ್ದೇ ಒಂದು ಘಟನೆ ನಗರದ ಹಲಸೂರಿನ ಜೌಳುಪಾಳ್ಯದಲ್ಲಿ ನಡೆದಿದೆ.

ಕಳೆದ 20 ನೇ ತಾರೀಖು ಸುರೇಶ್​​​​ ಎಂಬುವವರಿಗೆ ಸೇರಿದ 15 ಸಾವಿರ ಬೆಲೆ ಬಾಳುವ ಸೈಕಲ್'​​ನ್ನು ಕದ್ದು ಪರಾರಿಯಾಗಿದೆ. ರಮೇಶ್​​ ಎಂಬುವವರಿಗೆ ಸೇರಿದ ಬಿಲ್ಡಿಂಗ್​​'ನ ಕೌಂಪೌಡ್​​​​​​'ನಲ್ಲಿ ಸುರೇಶ್​​​​​​​ ಎಂದಿನಂತೆ ತಮ್ಮ ಸೈಕಲ್​'ನ್ನು ನಿಲ್ಲಿಸಿದ್ದರು. ಇದನ್ನೇ ನೋಡಿಕೊಂಡಿದ್ದ ಖದೀಮರ ತಂಡವೊಂದು ಮುಂಜಾನೆ 5.30 ರ ಸಮಯಕ್ಕೆ ಬೈಕ್'​ನಲ್ಲಿ ಬಂದು ಕೌಂಪೌಡ್​​​​​​'ನಲ್ಲಿ ನಿಲ್ಲಿಸಿದ್ದ ಸೈಕಲ್​'​ನ್ನು ಕದ್ದು ಪರಾರಿಯಾಗಿದ್ದಾರೆ.​​​

ಈ ಖರ್ತಾನಾಕ್​​​​ ಕಳ್ಳರ ಕೈಚಳಕ ಅಷ್ಟಕ್ಕೆ ನಿಂತಿಲ್ಲ ಪಕ್ಕದ ರಸ್ತೆಯಲ್ಲಿದ್ದ ಇನ್ನೊಂದು ಮನೆಯಲ್ಲಿ ನಿಲ್ಲಿಸಿದ್ದ ಸೈಕಲ್'ನ್ನೂ ಕದ್ದು ಎಸ್ಕೇಪ್​ ಆಗಿದ್ದಾರೆ. ಈ ಖದೀಮರ ಈ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ದೃಶ್ಯವಾಳಿಗಳು ಸುವರ್ಣ ನ್ಯೂಸ್​'ಗೆ ಲಭ್ಯವಾಗಿದೆ.