ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಮೋದಿ- ಅಮಿತ್ ಶಾ ಜೋಡಿ ಇದೀಗ ಮತ್ತೊಂದು ರಾಜ್ಯದ ಮೇಲೆ ಕಣ್ಣಿಟ್ಟಿದೆ. ಈ ಸಂಬಂಧ ಕಾರ್ಯತಂತ್ರ ರೂಪಿಸಿದೆ. ಅಂದುಕೊಂಡಂತೆ ಆದರೆ ಮುಂದಿನ ತಿಂಗಳಲ್ಲಿ ಆ ರಾಜ್ಯ ಎನ್‌ಡಿಎ ತೆಕ್ಕೆ ಪಾಲಾಗಲಿದೆ. ಯಾವುದು ಆ ರಾಜ್ಯ ಅಂತೀರಾ? ಇಲ್ಲಿದೆ ವಿವರ

ನವದೆಹಲಿ(ಆ.01): ಬಿಹಾರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಮೋದಿ- ಅಮಿತ್ ಶಾ ಜೋಡಿ ಇದೀಗ ಮತ್ತೊಂದು ರಾಜ್ಯದ ಮೇಲೆ ಕಣ್ಣಿಟ್ಟಿದೆ. ಈ ಸಂಬಂಧ ಕಾರ್ಯತಂತ್ರ ರೂಪಿಸಿದೆ. ಅಂದುಕೊಂಡಂತೆ ಆದರೆ ಮುಂದಿನ ತಿಂಗಳಲ್ಲಿ ಆ ರಾಜ್ಯ ಎನ್‌ಡಿಎ ತೆಕ್ಕೆ ಪಾಲಾಗಲಿದೆ. ಯಾವುದು ಆ ರಾಜ್ಯ ಅಂತೀರಾ? ಇಲ್ಲಿದೆ ವಿವರ

ಪ್ರಧಾನಿ ನರೇಂದ್ರ ಮೋದಿ-ಅಮಿತ್ ಶಾ ಜೋಡಿ ರಾಜಕೀಯ ತಂತ್ರಗಳಿಂದ ಒಂದೊಂದೇ ರಾಜ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಬರ್ತಿದೆ. ಬಿಹಾರ ರಾಜ್ಯದಲ್ಲಿ ಆರ್​ಜೆಡಿ ಜೊತೆಗಿನ ಮೈತ್ರಿ ಮುರಿದು ಜೆಡಿಯು ಪಕ್ಷವನ್ನು ಎನ್.ಡಿಎ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಜೋಡಿ ಕಣ್ಣು ಇದೀಗ ತಮಿಳುನಾಡಿನ ಮೇಲೆ ಬಿದ್ದಿದೆ.

ಮೋದಿ- ಅಮಿತಾ ಶಾ ತೆಕ್ಕೆಗೆ ತಮಿಳುನಾಡು..?

ದೇಶಾದ್ಯಂತ ಕೇಸರಿ ಕಹಳೆ ಮೊಳಗಿಸಲು ಬಿಜೆಪಿ ಮಹಾ ಪ್ಲಾನ್ ಮಾಡಿದೆ. ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ಎಐಎಡಿಎಂಕೆ ಎರಡು ಬಣಗಳಾಗಿವೆ. ಇದನ್ನೇ ಬಂಡವಾಳ ಮಾಡ್ಕೊಂಡು ತಮಿಳುನಾಡನ್ನು ಎನ್‌ಡಿಎ ತೆಕ್ಕೆಗೆ ತೆಗೆದುಕೊಳ್ಳಲು ಮೋದಿ-ಅಮಿತಾ ಶಾ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಶೀಘ್ರದಲ್ಲೇ ಎನ್​ಡಿಎ ಅಂಗಪಕ್ಷವಾಗುತ್ತಾ ಎಐಎಡಿಎಂಕೆ..?

ಇನ್ನು ಎಐಎಡಿಎಂಕೆ ಪಕ್ಷವನ್ನ ಎನ್​ಡಿಎ ಅಂಗಪಕ್ಷವನ್ನಾಗಿ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿರುವ ಮೋದಿ - ಅಮಿತ್ ಶಾ ಜೋಡಿ, ಭರ್ಜರಿಯಾಗಿಯೇ ಕಾರ್ಯತಂತ್ರ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಪಳನಿಸ್ವಾಮಿ ಮತ್ತು ಪನ್ನೀರ್​ ಸೆಲ್ವಂ ಬಣಗಳ ಜೊತೆ ಚರ್ಚಿಸಿದೆ. ಎಐಎಡಿಎಂಕೆಯ ಪ್ರಮುಖ ಸಂಸದರಿಗೆ ಕೇಂದ್ರ ಸಚಿವ ಸ್ಥಾನ9ದ ಆಮಿಷವೊಡ್ಡಿದೆ ಎನ್ನಲಾಗ್ತಿದೆ. ಎಐಎಡಿಎಂಕೆ ಪಕ್ಷ ಎನ್​ಡಿಎ ಮಿತ್ರಕೂಟಕ್ಕೆ ಸೇರ್ಪಡೆಯಾಗುವ ಬಗ್ಗೆ ಆಗಸ್ಟ್ 3 ನೇ ವಾರದಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ ದೇಶದ 18 ರಾಜ್ಯಗಳಲ್ಲಿ ಅಧಿಕಾರ ಹಿಡಿದಿರೋ ಬಿಜೆಪಿ ಮಿತ್ರಕೂಟ, ತಮಿಳುನಾಡಿನಲ್ಲೂ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಾ ಕಾದು ನೋಡಬೇಕು.