ಹಿಂದೆ ರಾಜ್ಯದಲ್ಲಿ ದಲಿತ ಸಿಎಂ ಕೂಗು ಬಂದಾಗ ದಲಿತ ಸಿಎಂ ಮಾಡಲು ಹೊರಟ ಪರಮೇಶ್ವರ್​ ಜೊತೆಗೆ 5 ಜನ ಎಂಎಲ್​ಎ ಕರೆತರಲು ಆಗಲಿಲ್ಲ. ಈಗ 25 ಜನ ಬಿಜೆಪಿ ಶಾಸಕರನ್ನು ಕರೆತರುವರೇ ಎಂದು ಪ್ರಸಾದ್​ ಪರಮೇಶ್ವರ್​ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.

ಮೈಸೂರು (ಮಾ.19): ನಂಜನಗೂಡು ಉಪ ಚುನಾವಣೆ​ ಸಮರ ಜೋರಾಗತೊಡಗಿದ್ದು, ಆರೋಪ ಪ್ರತ್ಯಾರೋಪಗಳು ಜೋರಾಗಿಯೇ ನಡೆದಿವೆ.

ಬಿಜೆಪಿಯ 25 ಶಾಸಕರು ಕಾಂಗ್ರೆಸ್​ ಸೇರಲಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​ ಹೇಳಿಕೆಯನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ಪ್ರಸಾದ್​ ಲೇವಡಿ ಮಾಡಿದ್ದಾರೆ.

ಹಿಂದೆ ರಾಜ್ಯದಲ್ಲಿ ದಲಿತ ಸಿಎಂ ಕೂಗು ಬಂದಾಗ ದಲಿತ ಸಿಎಂ ಮಾಡಲು ಹೊರಟ ಪರಮೇಶ್ವರ್​ ಜೊತೆಗೆ 5 ಜನ ಎಂಎಲ್​ಎ ಕರೆತರಲು ಆಗಲಿಲ್ಲ. ಈಗ 25 ಜನ ಬಿಜೆಪಿ ಶಾಸಕರನ್ನು ಕರೆತರುವರೇ ಎಂದು ಪ್ರಸಾದ್​ ಪರಮೇಶ್ವರ್​ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.

ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಕೂಡ ಪರಮೇಶ್ವರ್​ ಆ ರೀತಿ ಹೇಳಿವವರಲ್ಲ. ಯಾವ ಕಾರಣಕ್ಕೆ ಬರುತ್ತಾರೆ ಎಂಬುದನ್ನು ಅವರನ್ನೇ ಕೇಳಿಕೊಳ್ಳಿ ಎಂದರು. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಅಂದಿದ್ದಾರೆ.

ಬಿಜೆಪಿಗೆ ನಿರೀಕ್ಷೆಗೆ ಮೀರಿ ಬೆಂಬಲ: ಯಡಿಯೂರಪ್ಪ

ನಂಜನಗೂಡು ಹಾಗೂ ಗುಂಡ್ಲುಪೇಟೆ ುಪ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆಗೆ ಮೀರಿ ಬೆಂಬಲ ಸಿಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ಸರ್ಕಾರದ ಸಚಿವ ಸಂಪುಟದ ಎಷ್ಟೇ ಸದಸ್ಯರು ಚುನಾವಣೆ ಪ್ರಚಾರಕ್ಕೆ ಬಂದರೂ ನಾವು ಹೆದರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.

ನಾಳೆ ನಾಮಪತ್ರ ಸಲ್ಲಿಕೆಯಾದ ನಂತರ ಬಿಜೆಪಿಯಿಂದ ಕೂಡ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್, ಈಶ್ವರಪ್ಪ, ಸೇರಿದಂತೆ ನಾಯಕರ ದಂಡೇ ಪ್ರಚಾರದಲ್ಲಿ ತೊಡಗಲಿದೆ ಎಂದಿದ್ದಾರೆ.

ಇದೇ ವೇಳೆ ಐಟಿ ದಾಳಿ​ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಎಷ್ಟು ಜನ ಶ್ರೀಮಂತರಿದ್ದಾರೆ ಎಂಬುದನ್ನು ಅವರೇ ಪಟ್ಟಿ ಮಾಡಿ ರೇಡ್​ ಮಾಡಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿಗಳಿಗೆ ಜನರ ಕಷ್ಟ ಬೇಕಾಗಿಲ್ಲ. ಚುನಾವಣೆಯಲ್ಲಿ ಅಧಿಕಾರ ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಎಸ್​ವೈ ಹೇಳಿದ್ದಾರೆ.