ಜಪಾನ್‌, ಜರ್ಮನಿ, ಬ್ರಿಟನ್‌ ಹಾಗೂ ಫ್ರಾನ್ಸ್‌ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಸರ್ಕಾರಿ ಸಂಸ್ಥೆಯೊಂದು ಭವಿಷ್ಯ ನುಡಿದಿದೆ. ಅಮೆರಿಕ ಈಗಿನಂತೆ ಮೊದಲ ಸ್ಥಾನದಲ್ಲೇ ಮುಂದುವ ರಿಯಲಿದ್ದು, ಚೀನಾ 2ನೇ ಸ್ಥಾನ ಅಲಂಕರಿಸಲಿದೆ ಎಂದು ಹೇಳಿದೆ.

ವಾಷಿಂಗ್ಟನ್‌(ಎ.29): ಜಪಾನ್‌, ಜರ್ಮನಿ, ಬ್ರಿಟನ್‌ ಹಾಗೂ ಫ್ರಾನ್ಸ್‌ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ 2030ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಸರ್ಕಾರಿ ಸಂಸ್ಥೆಯೊಂದು ಭವಿಷ್ಯ ನುಡಿದಿದೆ. ಅಮೆರಿಕ ಈಗಿನಂತೆ ಮೊದಲ ಸ್ಥಾನದಲ್ಲೇ ಮುಂದುವ ರಿಯಲಿದ್ದು, ಚೀನಾ 2ನೇ ಸ್ಥಾನ ಅಲಂಕರಿಸಲಿದೆ ಎಂದು ಹೇಳಿದೆ.

ವಾರ್ಷಿಕ ಶೇ.7.4ರ ಪ್ರಗತಿ ದರದೊಂದಿಗೆ ಭಾರತದ ಆರ್ಥಿಕತೆ 2030ರೊಳಗೆ 440 ಲಕ್ಷ ಕೋಟಿ ರು.ಗೆ ಏರಲಿದೆ. ತನ್ಮೂಲಕ ಜಪಾನ್‌ (409 ಲಕ್ಷ ಕೋಟಿ ರು.) ಹಾಗೂ ಜರ್ಮನಿ (281 ಲಕ್ಷ ಕೋಟಿ ರು.)ಯನ್ನು ಹಿಂದಿಕ್ಕಲಿದೆ ಎಂದು ಅಮೆರಿಕದ ಕೃಷಿ ಆರ್ಥಿಕ ಸಂಶೋಧನಾ ಸೇವೆಗಳ ಇಲಾಖೆ ಅಂದಾಜಿಸಿದೆ.

ಭಾರತದ ಬೆಳವಣಿಗೆ ದರವು ಮುಂದಿನ 15 ವರ್ಷಗಳಲ್ಲಿ ಬ್ರಿಟನ್‌ (231 ಲಕ್ಷ ಕೋಟಿ ರು.) ಹಾಗೂ ಫ್ರಾನ್ಸ್‌ (221 ಲಕ್ಷ ಕೋಟಿ ರು.)ಗಿಂತ ಹೆಚ್ಚೂಕಡಿಮೆ ದುಪ್ಪಟ್ಟು ಇರಲಿದೆ ಎಂದು ಹೇಳಿದೆ. 2015-16ನೇ ಸಾಲಿನಲ್ಲಿ ಭಾರತದ ಆರ್ಥಿಕತೆ 137 ಲಕ್ಷ ಕೋಟಿ ರು. ಇತ್ತು.

ಅಮೆರಿಕ ಪ್ರಥಮ ಸ್ಥಾನದಲ್ಲೇ ಮುಂದುವರಿಯಲಿದೆ. 2030ರ ವೇಳೆಗೆ ಆ ದೇಶದ ಆರ್ಥಿಕ ಶಕ್ತಿ 1600 ಲಕ್ಷ ಕೋಟಿ ರು.ಗೆ ಏರಲಿದೆ. 1091 ಕೋಟಿ ರು. ಜಿಡಿಪಿ ಹೊಂದಿರುವ ಅಮೆರಿಕ ಶೇ.2.1ರ ಪ್ರಗತಿ ದರವನ್ನು ಕಾಯ್ದುಕೊಳ್ಳಲಿದೆ.

ಶೇ.5.4ರ ಪ್ರಗತಿಯೊಂದಿಗೆ ಚೀನಾದ ಆರ್ಥಿಕತೆ 2030ರೊಳಗೆ 1235 ಕೋಟಿ ರು.ಗೆ ಏರಿಕೆಯಾಗಲಿದೆ. ಸದ್ಯ ಅದು ಅದು 600 ಲಕ್ಷ ಕೋಟಿ ರು. ಹೊಂದಿದೆ ಎಂದು ತಿಳಿಸಿದೆ.

ಆರ್ಥಕ ಅಸಮಾನತೆಯಲ್ಲಿ ಭಾರತ ನಂ. 2: ವಿಶ್ವಸಂಸ್ಥೆ ವರದಿ

 ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಕಳವಳ ವ್ಯಕ್ತಪಡಿಸಿದೆ. ದೇಶದಲ್ಲಿ ಶೇ.53ರಷ್ಟುಸಂಪತ್ತು ಶೇ.1ರಷ್ಟುಶ್ರೀಮಂತರ ಬಳಿಯೇ ಇದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ಮೂಲಕ ಆರ್ಥಿಕ ಅಸಮಾ ನತೆಯಲ್ಲಿ, ಮೊದಲ ಸ್ಥಾನಿ ರಷ್ಯಾ ನಂತರದ ಸ್ಥಾನವನ್ನು ಭಾರತ ಪಡೆದಿದೆ ಎಂದು ‘ಉತ್ತಮ ವ್ಯವಹಾರ, ಉತ್ತಮ ವಿಶ್ವ' ವರದಿಯಲ್ಲಿ ವಿಶ್ವಸಂಸ್ಥೆ ಉಲ್ಲೇಖಿಸಿದೆ. ಸಮರ್ಥನೀಯ ವ್ಯಾಪಾರ ಮಾದರಿ ಮೂಲಕ ಭಾರತ ದಲ್ಲಿ 7.2 ಕೋಟಿ ಉದ್ಯೋಗಗಳನ್ನು 2030ರ ವೇಳೆಗೆ ಸೃಷ್ಟಿಸಲು ಸಾಧ್ಯವಿದೆ ಎಂದೂ ವರದಿ ಹೇಳಿದೆ.

ಭಾರತದಲ್ಲಿ ಆರ್ಥಿಕ ಅಸಮಾನತೆ ಕಡಮೆಯಾಗಬೇಕೆಂದರೆ ಕೃಷಿ ಆಧರಿತ ಉದ್ದಿಮೆಗಳು ಸ್ಥಾಪನೆಯಾಗಬೇಕು. ಕೃಷಿ ಕ್ಷೇತ್ರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಾಮೀಣರಿಗೆ ಉತ್ತಮ ವೈದ್ಯಕೀಯ ಮೂಲಭೂತ ಸೌಲಭ್ಯ ದೊರೆಯಬೇಕು ಎಂದೂ ಅದು ಸಲಹೆ ನೀಡಿದೆ.