ಹೊಸ ಸಿಮ್ ಕಾರ್ಡ್‌ ಪಡೆಯುವ ಆಧಾರ್ ಬೇಕಿಲ್ಲ

Buying a new SIM card? Use a Virtual ID instead of Aadhaar number
Highlights

ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಡ್ಡಾಯವೇನಿಲ್ಲ ಎಂದು ಸರಕಾರ ಮತ್ತು ಸುಪ್ರೀಂ ಕೋರ್ಟ್ ಹೇಳಿದ್ದರೂ ಇನ್ನು ಮುಂದೆ ಸಿಮ್ ಪಡೆದುಕೊಳ್ಳುವ ಪ್ರತಿ ಗ್ರಾಹಕನಿಂದ ವರ್ಚುವಲ್ ಐಡಿ ಆಧಾರದಲ್ಲಿ ಆಧಾರ್ ಕೆವೈಸಿ ಪಡೆದುಕೊಳ್ಳುವಂತೆ ಟೆಲಿಕಾಂ ಇಲಾಖೆ  ಹೇಳಿದೆ. ಇನ್ನುಇ ರೀ-ವೇರಿಫಿಕೇಶನ್ ಸಂದರ್ಭದಲ್ಲಿಯೂ ಇದೇ ಮಾರ್ಗ ಅನುಸರಿಸುವಂತೆ ತಿಳಿಸಿದೆ.  ಹೆಚ್ಚಿನ ಮಾಹಿತಿ ಮುಂದಿದೆ..

ದೆಹಲಿ, ಜೂನ್, 14: ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಡ್ಡಾಯವೇನಿಲ್ಲ ಎಂದು ಸರಕಾರ ಮತ್ತು ಸುಪ್ರೀಂ ಕೋರ್ಟ್ ಹೇಳಿದ್ದರೂ ಇನ್ನು ಮುಂದೆ ಸಿಮ್ ಪಡೆದುಕೊಳ್ಳುವ ಪ್ರತಿ ಗ್ರಾಹಕನಿಂದ ವರ್ಚುವಲ್ ಐಡಿ ಆಧಾರದಲ್ಲಿ ಆಧಾರ್ ಕೆವೈಸಿ ಪಡೆದುಕೊಳ್ಳುವಂತೆ ಟೆಲಿಕಾಂ ಇಲಾಖೆ  ಹೇಳಿದೆ. ಇನ್ನುಇ ರೀ-ವೇರಿಫಿಕೇಶನ್ ಸಂದರ್ಭದಲ್ಲಿಯೂ ಇದೇ ಮಾರ್ಗ ಅನುಸರಿಸುವಂತೆ ತಿಳಿಸಿದೆ.  ಹಾಗಾಗಿ ಜುಲೈ 1 ರೊಳಗೆ ಟೆಲಿಕಾಂ ಕಂಪನಿಗಳು ಆದೇಶದ ಪಾಲೆನೆಗೆ ಕೆಲ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ.

ಏನಿದು ವರ್ಚುವಲ್ ಐಡಿ?
ಆಧಾರ್ ಕಾರ್ಡ್ ನಲ್ಲಿ ನಮೂದಾಗಿರಿರವ 16 ಅಂಕಿಗಳು ವರ್ಚುವಲ್ ಐಡಿ ಎಂದು ಕರೆಸಿಕೊಳ್ಳುತ್ತವೆ. ಇದರ ಆಧಾರದಲ್ಲಿಯೇ ಸಿಮ್ ನೀಡುವ ಕೆಲಸ ಆಗಲಿದ್ದು ನಿಮ್ಮ ಹಿಂದಿನ ಮೊಬೈಲ್ ಸಂಖ್ಯೆ ಆಧಾರ್ ನೊಂದಿಗೆ ಲಿಂಕ್ ಆಗಿರಬೇಕಾದ್ದು ಅವಶ್ಯಕ. ಹಾಗಾಗಿ ಆಧಾರ್ ಕಾರ್ಡ್ ನಿಡಬೇಕಾದ ಅಗತ್ಯ ಇರುವುದಿಲ್ಲ. 

ಜಿಯೋವನ್ನೂ ಮೀರಿಸುವ ಭರ್ಜರಿಯಾದ ಆಫರ್ ನೀಡಿದ ಬಿಎಸ್ಎನ್ಎಲ್

ಎನಿದು ಲಿಮಿಟೆಡ್ ಕೆವೈಸಿ
ಥರ್ಡ್ ಪಾರ್ಟಿಗೆ ಅಂದರೆ ಟೆಲಿಕಾಂ ಏಜೆನ್ಸಿಗೆ ಎಷ್ಟು ಬೇಕು ಅಷ್ಟು ಮಾಹಿಯತಿಯನ್ನು ಮಾತ್ರ ಹಂಚಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ಹೆಸರು ವಿಳಾಸ ಮತ್ತು ಲಿಂಗ ಕುರಿತಾದ ವಿಚಾರಗಳನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದ್ದು ಆಧಾರ್ ನಂಬರ್ ಹಂಚಿಕೆಯಾಗುವುದಿಲ್ಲ ಎಂದು ಟೆಲಿಕಾಂ ಇಲಾಖೆ ತಿಳಿಸಿದೆ. ವಿದೇಶಿಯರಿಗೆ ಸಿಮ್ ಪಡೆದುಕೊಳ್ಳುವಾಗ ಕೆಲ ರಿಯಾಯತಿಗಳನ್ನು ಗೊತ್ತು ಮಾಡಲಾಗಿದೆ.

ವ್ಯಕ್ತಿಯ ಗುರುತಿಗೆ ಒಂದು ಅಂದರೆ ಆಧಾರ್ ಕಾರ್ಡ್ ವ್ಯಕ್ತಿಯ ವಿಳಾಸ ದೃಢೀಕರಣಕ್ಕೆ ಇನ್ನೊಂದು ದಾಖಲೆಯನ್ನು ಪಡೆದುಕೊಳ್ಳುವ ವ್ಯವಸ್ಥೆ ಬರಲಿದೆ. ಹಾಗಾಗಿ ಇನ್ನು ಮುಂದೆ ಸಿಮ್ ಪಡೆದುಕೊಳ್ಳುವಾಗ ಸರಿಯಾದ ದಾಖಲೆ ನೀಡುವುದರೊಂದಿಗೆ ಎರಡು ಪಾಸ್ಪೋರ್ಟ್ ಫೋಟೋ ನೀಡಬೇಕಾಗುತ್ತದೆ.

ಆಧಾರ್ ಜತೆಗೆ ವಿಳಾಸ ದರಢೀಕರಣಕ್ಕಾಗಿ ಪಾಸ್ ಪೋರ್ಟ್, ಪಾನ್ ಕಾರ್ಡ್, ವಾಹನ ಪರವಾನಗಿ, ಮತದಾರರ ಗುರುತಿನ ಚೀಟಿ,  ಆದಾಯ ತೆರಿಹಗೆ ಪಾವತಿ ಕಾರ್ಡ್ ಸೆರಿದಂತೆ ಇನ್ನಿತರ ದಾಖಲೆಗಳನ್ನು ಜತೆಗೆ ಒಯ್ಯಬೇಕಾಗುತ್ತದೆ.

loader