ನವದೆಹಲಿ[ಆ.27]: ಜನೌಷಧಿ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಸ್ಯಾನಿಟರಿ ನ್ಯಾಪ್‌ಕಿನ್‌ ಬೆಲೆಯನ್ನು ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಈ ವರೆಗೆ ಪ್ರತಿ ನ್ಯಾಪ್‌ಕಿನ್‌ ಅನ್ನು 2.50 ರು.ಗೆ ಮಾರಲಾಗುತ್ತಿತ್ತು.

'ರಾಜ್ಯಕ್ಕೆ ಹೊಸ 300 ಜನೌಷಧಿ ಕೇಂದ್ರ'

ಮಣ್ಣಿನಲ್ಲಿ ಸಲೀಸಾಗಿ ಕರಗಬಲ್ಲ ನ್ಯಾಪ್‌ಕಿನ್‌ ‘ಸುವಿಧಾ’ವನ್ನು ಇನ್ಮುಂದೆ ಜನೌಷಧಿ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಅಂದರೆ ಕೇವಲ ಒಂದು ರು.ಗೆ ಖರೀದಿಸಬಹುದು.

ಮಹಿಳೆಯರಿಗೆ ಸಿಹಿ ಸುದ್ದಿ : ಇನ್ಮುಂದೆ ಕೈಗೆಟುಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್

ಮಾರುಕಟ್ಟೆಯಲ್ಲಿ 4 ನ್ಯಾಪ್‌ಕಿನ್‌ಗಳು ಇರುವ ಒಂದು ಪ್ಯಾಕ್‌ನ ಬೆಲೆ 10 ರು. ಆಗಿದ್ದು, ಮಂಗಳವಾರದಿಂದ ಈ ಪ್ಯಾಕ್‌ನ ಬೆಲೆ 4 ರು. ಆಗಲಿದೆ.