ಮಹಿಳೆಯರಿಗೆ ಸಿಹಿ ಸುದ್ದಿ : ಇನ್ಮುಂದೆ ಕೈಗೆಟುಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್

Jan Aushadhi stores to sell sanitary pads
Highlights

ಮಹಿಳೆಯರು ಮುಟ್ಟಿನ ದಿನಗಳಲ್ಲಿ ಬಳಸುವ ಸ್ಯಾನಿಟರಿ ನ್ಯಾಪ್‌ ಕಿನ್  ಅನ್ನು ಅಗ್ಗದ ದರದಲ್ಲಿ ಪೂರೈಸುವ ಯೋಜನೆಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ. 
 

ನವದೆಹಲಿ:ಮಹಿಳೆಯರು ಮುಟ್ಟಿನ ದಿನಗಳಲ್ಲಿ ಬಳಸುವ ಸ್ಯಾನಿಟರಿ ನ್ಯಾಪ್‌ ಕಿನ್  ಅನ್ನು ಅಗ್ಗದ ದರದಲ್ಲಿ ಪೂರೈಸುವ ಯೋಜನೆಗೆ ಕೇಂದ್ರ ಸರ್ಕಾರ ಸೋಮವಾರ ಚಾಲನೆ ನೀಡಿದೆ. 

ಇದರನ್ವಯ ಇನ್ನು ಮುಂದೆ ಅಗ್ಗದ ದರದಲ್ಲಿ ಔಷಧ ವಿತರಿಸುವ ಜನೌಷಧ ಕೇಂದ್ರಗಳಲ್ಲಿ ಕೇವಲ 2.50 ರು.ಗೆ ಒಂದು ಸ್ಯಾನಿಟರಿ ನ್ಯಾಪಕಿನ್‌ ಮಾರಾಟ ಮಾಡಲಾಗುವುದು.

ದೇಶಾದ್ಯಂತ ಇರುವ 3600 ಜನೌಷಧಿ ಕೇಂದ್ರಗಳಲ್ಲಿ ಇವು ಲಭ್ಯವಾಗಲಿವೆ. ಖಾಸಗಿ ಕಂಪನಿಗಳ ನ್ಯಾಪ್‌ ಕನ್‌ ದರ ಒಂದಕ್ಕೆ 8 ರು.ವರೆಗೂ ಇದೆ. ಅನೇಕ ದಿನಗಳ ಹಿಂದೆಯೇ ಈ ಬಗ್ಗೆ ಕೇಂದ್ರ ಸರ್ಕಾರ ತೀರ್ಮಾನವೊಂದನ್ನು ಕೈಗೊಂಡಿದ್ದು, ಇದೀಗ ಅಧಿಕೃತವಾಗಿ ಈ ಯೋಜನೆಗೆ ಚಾಲನೆ  ನೀಡಲಾಗಿದೆ. 

loader