ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಶಾಸಕ ಅಬ್ದುಲ್ ಮಜೀದ್ ಲರ್ಮಿ ಇದೀಗ ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಕಾಶ್ಮೀರ (ಡಿ.23): ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಶಾಸಕ ಅಬ್ದುಲ್ ಮಜೀದ್ ಲರ್ಮಿ ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಹಿಜ್ಬುಲ್ ಮುಜಾಹಿದ್ದಿನ್ ಉಗ್ರ ಬುರ್ಹಾನ್ ವಾನಿ ಸೇರಿದಂತೆ ಕಾಶ್ಮೀರದಲ್ಲಿ ಹತರಾದ ಉಗ್ರರೆಲ್ಲರೂ ಹುತಾತ್ಮರು ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಒಂದು ವಿಚಾರವನ್ನು ಇರಿಸಿಕೊಂಡು ಹೋರಾಟ ಮಾಡಿ ಅವರೆಲ್ಲಾ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರೆಲ್ಲರೂ ಹುತಾತ್ಮರು ಎಂದಿದ್ದಾರೆ.
ಶಾಸಕ ಲರ್ಮಿಯ ಉಗ್ರರು ಹುತಾತ್ಮರು ಎನ್ನುವ ಹೇಳಿಕೆಗೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಉಗ್ರ ಬುರ್ಹಾನ್ ವಾನಿ ಭಾರತೀಯ ಸೇನಾ ಪಡೆಯ ಮೇಲೆ ನಡೆದ ಅನೇಕ ದಾಳಿಗಳಲ್ಲಿ ಭಾಗಿಯಾಗಿದ್ದು, ಕಳೆದ ವರ್ಷ ಜುಲೈ ತಿಂಗಳಲ್ಲಿ ಭದ್ರತಾ ಪಡೆಗಳಿಂದ ಆತ ಎನ್'ಕೌಂಟರ್ ಆಗಿದ್ದ.
