ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಸುನೀಲ್ ಅರೋರ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು,  ಸಿಎಜಿಯಾಗಿ ರಾಜೀವ್ ಮೆಹರ್ಷಿ ನೇಮಕಗೊಂಡಿದ್ದಾರೆ.

ನವದೆಹಲಿ (ಆ.31): ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಾಜಿ ಐಎಎಸ್ ಅಧಿಕಾರಿ ಸುನೀಲ್ ಅರೋರ ಮುಖ್ಯ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದು, ಸಿಎಜಿಯಾಗಿ ರಾಜೀವ್ ಮೆಹರ್ಷಿ ನೇಮಕಗೊಂಡಿದ್ದಾರೆ.

ಜುಲೈನಲ್ಲಿ ನಾಸಿಂ ಜೈದಿ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಸುನೀಲ್ ಅರೋರ ನೇಮಕಗೊಂಡಿದ್ದಾರೆ. ಓಂ ಪ್ರಕಾಶ್ ರಾವತ್ ಮತ್ತು ಅಚಲ್ ಕುಮಾರ್ ಜೋತಿ ಸಹ ಚುನಾವಣಾಧಿಕಾರಿಯಾಗಿ ಸುನೀಲ್ ಅರೋರಾಗೆ ಸಹಕಾರ ನೀಡಲಿದ್ದಾರೆ. ಸುನೀಲ್ ಅರೋರರವರು ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದವರು.

ಸಿಎಜಿಯಾಗಿ ನೇಮಕಗೊಂಡಿರುವ ರಾಜೀವ್ ಮೆಹರ್ಷಿ ಗೃಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.