ಕರ್ನಾಟಕ ಬಂದ್ : ಸಾರ್ವಜನಿಕರೇ ಎಚ್ಚರ ಈ ಸೇವೆಗಳನ್ನು ನಂಬಿಕೊಳ್ಳಬೇಡಿ..

First Published 25, Jan 2018, 7:59 AM IST
Bundh Effect On People
Highlights

ಇಂದು ಕರ್ನಾಟಕದಾದ್ಯಂತ ಮಹದಾಯಿಗಾಗಿ ಬಂದ್ ನಡೆಸಲಾಗುತ್ತಿದೆ.  ಈ ನಿಟ್ಟಿನಲ್ಲಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.  

ಬೆಂಗಳೂರು (ಜ.25): ಇಂದು ಕರ್ನಾಟಕದಾದ್ಯಂತ ಮಹದಾಯಿಗಾಗಿ ಬಂದ್ ನಡೆಸಲಾಗುತ್ತಿದೆ.  ಈ ನಿಟ್ಟಿನಲ್ಲಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.  

BMTC, ವೋಲ್ವೋ ಬಸ್​ಗಳ ಸಂಚಾರವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಏರ್​ಪೋರ್ಟ್​ಗೆ ತೆರಳುತ್ತಿರುವ ಬಸ್​ಗಳ ಸಂಚಾರ ಸ್ಥಗಿತವಾಗಿದೆ. ಬಿಎಂಟಿಸಿ ಬಸ್’ಗಳಿಲ್ಲದೇ​ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಮಹದಾಯಿ ಹೋರಾಟಕ್ಕೆ ಮಾಲ್’ಗಳೂ ಕೂಡ ಬೆಂಬಲ ಸೂಚಿಸಿವೆ - ಮಂತ್ರಿ ಮಾಲ್’ನ್ನೂ ಕೂಡ ಬಂದ್ ಮಾಡಲಾಗಿದೆ. ಮಂತ್ರಿ ಮಾಲ್ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಐಟಿ, ಬಿಟಿ ಕಂಪನಿಗಳಿಗೂ ಕೂಡ ಬಂದ್ ಬಿಸಿ ತಟ್ಟಿದ್ದು, ಮಾನ್ಯತಾ ಟೆಕ್ ಪಾರ್ಕ್’ನಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದೆ. ಭದ್ರತೆ ದೃಷ್ಟಿಯಿಂದ ಮಾನ್ಯತಾ ಟೆಕ್ ಪಾರ್ಕ್ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ.

ಎಂದಿನಂತೆ ಬಿಎಂಟಿಸಿ ನೌಕರರು ಕೆಲಸಕ್ಕೆ ಹಾಜರಾದರೂ ಕೂಡ ಅಧಿಕಾರಿಗಳು ಬಸ್’ಗಳನ್ನು ನೀಡುತ್ತಿಲ್ಲ. ಇನ್ನು ಕೆಎಸ್ಆರ್’ಟಿಸಿಯಿಂದಲೂ ಕೂಡ ಬಂದ್’ಗೆ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಬಸ್’ಗಳ ಸಂಚಾರವಿಲ್ಲವೆಂದು ಪ್ರಯಾಣಿಕರಿಗೆ ಹೇಳುತ್ತಿದ್ದಾರೆ.

ಆದರೆ ಬಂದ್ ನಡೆದರೂ ಕೂಡ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ರೀತಿಯಾದ ವ್ಯತ್ಯಯವಾಗುವುದಿಲ್ಲ.

 

loader