ಇದರ ಜೊತೆಗೆ ವ್ಯಾಪಾರಿಗಳಿಗಾಗಿ ಜಿಯೋ ಡಿಜಿಟಲ್ ಮನಿ ಟ್ರಾನ್ಸ್`ಫರ್ ಸಲ್ಯೂಶನ್ ಅನ್ನ ಪರಿಚಯಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ್ ವ್ಯಾಪಾರಸ್ಥರು ಹಣ ಪಾವತಿಸಬಹುದು ಮತ್ತು ಹಣವನ್ನ ಪಡೆಯಬಹುದಾಗಿದೆ. ಕಳೆದ 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ ಎಂದಿದ್ದಾರೆ.

ಮುಂಬೈ(ಡಿ.01): ಜಿಯೋ ನೆಟ್ವರ್ಕ್ ಬಳಕೆದಾರರಿಗೆ ಮತ್ತೊಮ್ಮೆ ಬಂಪರ್ ಹೊಡೆದಿದೆ. ಜಿಯೋದ ವೆಲ್ ಕಂ ಆಫರ್ ಉಚಿತ ಸೇವೆಯನ್ನ 2017ರ, ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ಜಿಯೋ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.

ಹೊಸ ಜಿಯೋ ಸಿಮ್ ಖರೀದಿದಾರರಿಗೂ ಬಂಪರ್​ ಆಫರ್ ನೀಡಲಾಗಿದ್ದು, ಜನವರಿ 1 ರಿಂದ ಮಾರ್ಚ್ 31ರವರೆಗೆ ಉಚಿತ ಸೇವೆ ಒದಗಿಸುವ ನ್ಯೂ ಇಯರ್​​ ವೆಲ್​​​ ಕಮ್​ ಆಫರ್ ನೀಡಲಾಗಿದೆ.

ಇದರ ಜೊತೆಗೆ ವ್ಯಾಪಾರಿಗಳಿಗಾಗಿ ಜಿಯೋ ಡಿಜಿಟಲ್ ಮನಿ ಟ್ರಾನ್ಸ್`ಫರ್ ಸಲ್ಯೂಶನ್ ಅನ್ನ ಪರಿಚಯಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ್ ವ್ಯಾಪಾರಸ್ಥರು ಹಣ ಪಾವತಿಸಬಹುದು ಮತ್ತು ಹಣವನ್ನ ಪಡೆಯಬಹುದಾಗಿದೆ. ಕಳೆದ 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ ಎಂದಿದ್ದಾರೆ.

ಮುಖೇಶ್ ಹೇಳಿದ್ದು..

- 3 ತಿಂಗಳಲ್ಲಿ ಜಿಯೋ ಫೇಸ್ಬುಕ್, ವಾಟ್ಸಾಪ್ ಮತ್ತು ಸ್ಕೈಪ್`ಗಳನ್ನ ಮೀರಿ ಬೆಳೆದಿದೆ

- 50 ಮಿಲಿಯನ್ ದಾಟಿದ ಬಳೆಕೆದಾರರ ಸಂಖ್ಯೆ

- ವೇಗವಾಗಿ ಬೆಳೆಯುತ್ತಿರುವ ಸಂಸ್ಥೆ ಜಿಯೋ

- ಜಿಯೋ ಇಂಟರ್ನೆಟ್`ಗೆ ಬಲಿಷ್ಠ ನೆಟ್ವರ್ಕ್ ಸೃಷ್ಟಿಸಿದೆ