ಸುನಂದಮ್ಮ ಕಳೆದ ಸೋಮವಾರ ತಮ್ಮ ಎರಡು ಎಮ್ಮೆಗಳನ್ನ ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದಾಗ ಎಮ್ಮೆಗಳು ತಪ್ಪಿಸಿಕೊಂಡು ಹೊಗಿದ್ದವು. ಕುಟುಂಬಸ್ಥರು 2 ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲೆಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ.
ಕಳೆದ ಸೋಮವಾರ ಗ್ರಾಮದಿಂದ ತಪ್ಪಿಸಿಕೊಂಡು ಹೊಗಿದ್ದು ಎಮ್ಮೆಗಳು ಫೇಸ್'ಬುಕ್ ಮುಖಾಂತರ ಪತ್ತೆಯಾಗಿರೂ ಅಪರೂಪದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಈಸ್ತೂರು ಗ್ರಾಮದಲ್ಲಿ ನಡೆದಿದೆ.
ಈಸ್ತೂರು ಗ್ರಾಮದ ನಿವಾಸಿಗಳಾದ ನಾರಾಯಣಸ್ವಾಮಿ ಮತ್ತು ಸುನಂದಮ್ಮ ಎಂಬುವರು ಕಳೆದ ಹಲವು ವರ್ಷಗಳಿಂದ ಎಮ್ಮೆ ಮೇಯಿಸುತ್ತಾ ಜೀವನ ಸಾಗಿಸುತ್ತಿದ್ದರು. ಸುನಂದಮ್ಮ ಕಳೆದ ಸೋಮವಾರ ತಮ್ಮ ಎರಡು ಎಮ್ಮೆಗಳನ್ನ ಮೇಯಿಸಲು ಗ್ರಾಮದ ಹೊರವಲಯಕ್ಕೆ ಹೋಗಿದ್ದಾಗ ಎಮ್ಮೆಗಳು ತಪ್ಪಿಸಿಕೊಂಡು ಹೊಗಿದ್ದವು. ಕುಟುಂಬಸ್ಥರು 2 ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳಲೆಲ್ಲ ಹುಡುಕಾಡಿದರೂ ಸಿಕ್ಕಿರಲಿಲ್ಲ.
ಈ ವೇಳೆ ಈಸ್ತೂರಿನಿಂದ 12 ಕಿಲೋ ಮೀಟರ್ ದೂರದಲ್ಲಿರುವ ಕೊಂಡ್ರಹಳ್ಳಿಯಲ್ಲಿ ಇದೇ ಎಮ್ಮೆಗಳು ರಸ್ತೆಯಲ್ಲಿ ಅಡ್ಡದಿಡ್ಡಿ ಹೋಡಾಡುತ್ತಿದ್ದವು. ಅದೇ ವೇಳೆ ಗ್ರಾಮದ ಯುವಕ ಮೋಹನ್ ಎಮ್ಮೆಗಳನ್ನು ಕಟ್ಟಿಹಾಕಿ ಇವು ಯಾರದು ಎಂದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಚಾರಿಸಿದ್ದಾನೆ. ಆದರೆ ಎಲ್ಲೂ ಎಮ್ಮೆಗಳ ಮಾಲೀಕರು ಪತ್ತೆಯಾಗದ ಕಾರಣ ಫೋಟೊ ತೆಗೆದು ಫೇಸ್'ಬುಕ್'ನಲ್ಲಿ ಪೋಸ್ಟ್ ಮಾಡಿದ್ದಾನೆ.
ಫೇಸ್'ಬುಕ್'ನಲ್ಲಿ ನೋಡಿದ ಮಾಲೀಕ ನಾರಾಯಣ ಸ್ವಾಮಿ ಅವರ ತಮ್ಮನ ಮಗ ನಾಗೇಶ್ ಮೋಹನ್ ಅವರಿಗೆ ಕರೆ ಮಾಡಿ ಎಮ್ಮೆಗಳನ್ನು ಮರಳಿ ಕರೆತರುವಲ್ಲಿ ಸಹಾಯಮಾಡಿದ್ದಾನೆ. ಈ ಮೂಲಕ ಕಳೆದುಹೋಗಿದ್ದ ಎಮ್ಮೆಗಳು ಫೇಸ್'ಬುಕ್' ಸಹಾಯದಿಂದ ವಾಪಸ್ ಬಂದಿವೆ.
