ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ  ಯಡಿಯೂರಪ್ಪ ಹೈಕಮಾಂಡ್ ಗೆ ಮೌಖಿಕ ವರದಿ ನೀಡಿದ್ದಾರೆ. ಪ್ರಕರಣದ ಹಿಂದೆ ಹಲವರ ಕೈವಾಡದ ಇರುವ ಬಗ್ಗೆ ಬಿಎಸ್'ವೈ ಸಂಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.20): ಯಡಿಯೂರಪ್ಪ ಹಾಗೂ ಈಶ್ವರಪ್ಪ ಪಿಎಗಳ ಕಿತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಹೈಕಮಾಂಡ್ ಗೆ ಮೌಖಿಕ ವರದಿ ನೀಡಿದ್ದಾರೆ. ಪ್ರಕರಣದ ಹಿಂದೆ ಹಲವರ ಕೈವಾಡದ ಇರುವ ಬಗ್ಗೆ ಬಿಎಸ್'ವೈ ಸಂಶಯ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ತೇಜೋವಧೆ ಮಾಡುವ ದುರುದ್ದೇಶ ಇದರ ಹಿಂದಿದೆ ಎಂದಿರುವ ಬಿಎಸ್'ವೈ ಸರ್ಕಾರದ ಪಿತೂರಿಯ ಬಗ್ಗೆಯೂ ವಿವರ ನೀಡಿದ್ದಾರೆ. ಇದರಿಂದ ಪಕ್ಷದ ಇಮೇಜ್'ಗೆ ಡ್ಯಾಮೇಜ್ ಆಗಲ್ಲ, ಆದರೆ ವೈಯುಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶವಿದೆ ಎಂದು ಮೌಖಿಕವಾಗಿ ಕೆಲ ಹೈಕಮಾಂಡ್ ನಾಯಕರಿಗೆ ಲೋಕಸಭಾ ಅಧಿವೇಶನದ ನಡುವೆ ಬಿಎಸ್'ವೈ ವರದಿ ನೀಡಿದ್ದಾರೆ.

ಪ್ರಕರಣದ ಸಂಬಂಧ ಮೊನ್ನೆಯಷ್ಟೇ ಅಮಿತ್ ಶಾ ವರದಿ ಕೇಳಿದ್ದರು. ಪ್ರಕರಣದ ಬಗ್ಗೆ ಆರ್'ಎಸ್ಎಸ್ ಕೂಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬೆನ್ನಲ್ಲೇ ಬಿಎಸ್ ವೈ ರಿಂದ ಹೈಕಮಾಂಡ್ ಗೆ ಮೌಖಿಕ ವರದಿ ಸಲ್ಲಿಕೆಯಾಗಿದೆ.