Asianet Suvarna News Asianet Suvarna News

ಬಿಎಸ್'ವೈ ಸಿಡಿಸಿದ ಹೊಸ ಬಾಂಬ್: ಮತ್ತೊಬ್ಬ ಐಎಎಸ್ ಅಧಿಕಾರಿಗೆ ಜೀವ ಬೆದರಿಕೆ

ನಿನ್ನೆ ರಾತ್ರಿ ಫೈಲ್'ನೊಂದಿಗೆ ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

BSY Speak about IAS Officer
  • Facebook
  • Twitter
  • Whatsapp

ಬಾಗಲಕೋಟೆ(ಮೇ.22): ರಾಜ್ಯದಲ್ಲಿ ಕೆಲಸ ಮಾಡಲು ಭಯಭೀತರಾಗಿರುವ ಐಎಎಸ್ ಅಧಿಕಾರಿಗಳು ತಮ್ಮ ಮುಂದೆ  ಗೋಳು ಹೇಳಿಕೊಂಡಿದ್ದಾರೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಲು ಭಯಭೀತರಾಗಿರುವ ಐಎಎಸ್ ಅಧಿಕಾರಿಯೊಬ್ಬರು ನಿನ್ನೆ ರಾತ್ರಿ ಫೈಲ್'ನೊಂದಿಗೆ ತಮ್ಮನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಯನ್ನು ಸಹ ನೀಡಿದ್ದಾರೆ. ನೋವು ತೋಡಿಕೊಂಡಿರುವ ಅಧಿಕಾರಿ ತಮ್ಮ ಹೆಸರನ್ನು ಹೇಳಲು ಸಮ್ಮತಿಸಿದರೆ ಮಾತ್ರ ಬಹಿರಂಗ ಪಡಿಸುವುದಾಗಿ ತಿಳಿಸಿದರು.

ಅನುರಾಗ್ ತಿವಾರಿ ಸಾವಿನ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದ್ದು, ಬಿಎಸ್'ವೈ ಅವರ ಹೇಳಿಕೆ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios