ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಎಸ್’ವೈ ಬಹಿರಂಗ ಸವಾಲ್..

First Published 6, Mar 2018, 12:55 PM IST
BSY Slams CM Siddaramaiah
Highlights

ಸಿಎಂ ಸಿದ್ದರಾಮಯ್ಯ ಓರ್ವ ಭ್ರಷ್ಟ ಮುಖ್ಯಮಂತ್ರಿ. ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ತೋರಿಸಲಿ ಎಂದು ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ಭ್ರಷ್ಟರು ಯಾರು ಎಂದು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿದ್ದ ಸಿದ್ದರಾಮಯ್ಯ ಕರೆಗೆ ಯಡಿಯೂರಪ್ಪ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರು : ಸಿಎಂ ಸಿದ್ದರಾಮಯ್ಯ ಓರ್ವ ಭ್ರಷ್ಟ ಮುಖ್ಯಮಂತ್ರಿ. ಈ ಬಾರಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ತೋರಿಸಲಿ ಎಂದು ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ಭ್ರಷ್ಟರು ಯಾರು ಎಂದು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸಿದ್ದ ಸಿದ್ದರಾಮಯ್ಯ ಕರೆಗೆ ಯಡಿಯೂರಪ್ಪ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಅವರ ಬಳಿ ಯಾವುದೇ ರೀತಿಯಾದ ಚರ್ಚೆಗೂ ಹೋಗುವುದಿಲ್ಲ. ಅವರಿಗೆ ನನ್ನ ಬಳಿ ಮಾತನಾಡುವಂತಹ ನೈತಿಕತೆ ಇಲ್ಲ. ಅವರು ಮಾಡಿರುವ ಹಗರಣಗಳ ಬಗ್ಗೆ ಈಗಾಗಲೇ ಚಾರ್ಜ್’ಶೀಟ್ ಪ್ರಿಂಟ್ ಮಾಡಿ ಹಂಚುತ್ತಿದ್ದೇನೆ. ಸಿದ್ದರಾಮಯ್ಯ ರಾಜ್ಯದ ಕಾಂಗ್ರೆಸ್’ನ ಕೊನೆಯ ಮುಖ್ಯಮಂತ್ರಿ. ಅವರು ಕಾಂಗ್ರೆಸ್ ಪಕ್ಷವನ್ನು ಮುಳುಗಿಸಿ ಹೋಗುತ್ತಾರೆ.

ಪ್ರಧಾನಿ ಅವರ ಕಾಂಗ್ರೆಸ್ ಮುಕ್ತ ಮಾಡುವ ಗುರಿಯನ್ನು ಮಾಡಿಯೇ ಮಾಡುತ್ತೇವೆ.  ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಇನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ನೆಲಕಚ್ಚುವುದೂ ಕೂಡ ಖಚಿತ ಎಂದಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿದ  ಅವರು ಕಾಂಗ್ರೆಸ್’ಗೆ ಖೇಣಿ ಸೇರ್ಪಡೆ ಬಗ್ಗೆಯೂ ಕೂಡ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಉಪೇಂದ್ರ ಬಿಜೆಪಿ ಸೇರ್ಪಡೆ ಬಗ್ಗೆ ಸುದ್ದಿಯಾಗುತ್ತಿದ್ದು, ಈ ಬಗ್ಗೆ ನನಗೆ ಯಾವುದೇ ರೀತಿ ಮಾಹಿತಿ ಇಲ್ಲ ಎಂದಿದ್ದಾರೆ.

loader