2008ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿದ ಸಂದರ್ಭ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ 8 ಕೋಟಿ ಹಣ ಪಡೆದಿದ್ದರು ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೊಸಬಾಂಬ್ ಸಿಡಿಸಿದ್ದಾರೆ.

ಮುದ್ದೇಬಿಹಾಳ (ಡಿ.23): 2008ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿದ ಸಂದರ್ಭ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ 8 ಕೋಟಿ ಹಣ ಪಡೆದಿದ್ದರು ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೊಸಬಾಂಬ್ ಸಿಡಿಸಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ನಡೆದ ೮ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದ್ದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಈ ಮೊತ್ತ ಪಡೆದಿದ್ದಾರೆ ಆರೋಪಿಸಿದರು. ಡಿ.20ರಂದು ಮುದ್ದೇಬಿಹಾಳ ದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಈ ಭಾಗದಲ್ಲಿ ಸಂಘಟನೆ ಮಾಡುತ್ತಿರುವ ನನ್ನನ್ನೇ ಗುರಿಯಾಗಿಸಿ ಕೊಂಡು ಮಾತನಾಡಿ ಬಿಜೆಪಿ ಏಜೆಂಟ್ ಎಂದೆಲ್ಲಾ ಜರೆದಿದ್ದಾರೆ.

ಆದರೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿದ್ದು, ಬಿಜೆಪಿ ಏಜೆಂಟರಾಗಿ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

‘ಜೆಡಿಎಸ್‌ನಿಂದ 2006ರಲ್ಲಿ ಹೊರಬಂದಾಗ ದೆಹಲಿಯಲ್ಲಿ ನೀವು ಯಾರ ಮನೆಗೆ ಹೋಗಿದ್ರಿ ಅನ್ನೋದನ್ನು ಜ್ಞಾಪಿಸಿಕೊಳ್ಳಿ. ಎಲ್.ಕೆ. ಆಡ್ವಾಣಿ, ಯಡಿಯೂರಪ್ಪರನ್ನೆಲ್ಲ ಭೇಟಿ ಮಾಡಿ ಬಿಜೆಪಿ ಸೇರೋ ಆತುರದಲ್ಲಿದ್ರಿ. ಆದರೆ ಅಲ್ಲಿ ನಿಮಗೆ ಅವಕಾಶ ಸಿಗಲಿಲ್ಲ ಅನ್ನೋದನ್ನು ಮರೆತಿದ್ದೀರಾ?’ ಎಂದರು.