ಶುಕ್ರವಾರ ಸಂಜೆ 5 ಗಂಟೆಗೆ ಬ್ರೇಕಿಂಗ್‌ ಸುದ್ದಿ ಕೊಡಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಟ್ವೀಟ್‌ ಸಂದೇಶ ಸಾಕಷ್ಟುಕುತೂಹಲ ಮೂಡಿಸಿದೆ. ಈ ಸಂದೇಶದ ಬೆನ್ನಲ್ಲೇ ನಾನಾ ರೀತಿಯ ವದಂತಿಗಳು ಹೊರಬೀಳುತ್ತಿದ್ದು, ಶುಕ್ರವಾರವೇ ಸ್ಪಷ್ಟಚಿತ್ರಣ ಸಿಗಲಿದೆ.
ಬೆಂಗಳೂರು : ಶುಕ್ರವಾರ ಸಂಜೆ 5 ಗಂಟೆಗೆ ಬ್ರೇಕಿಂಗ್ ಸುದ್ದಿ ಕೊಡಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಟ್ವೀಟ್ ಸಂದೇಶ ಸಾಕಷ್ಟುಕುತೂಹಲ ಮೂಡಿಸಿದೆ. ಈ ಸಂದೇಶದ ಬೆನ್ನಲ್ಲೇ ನಾನಾ ರೀತಿಯ ವದಂತಿಗಳು ಹೊರಬೀಳುತ್ತಿದ್ದು, ಶುಕ್ರವಾರವೇ ಸ್ಪಷ್ಟಚಿತ್ರಣ ಸಿಗಲಿದೆ.
ವದಂತಿ 1-ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಹಗರಣವನ್ನು ಬಯಲಿಗೆ ತರುವ ಸಾಧ್ಯತೆಯಿದೆ. ಈಗಾಗಲೇ ಹಲವು ಇಲಾಖೆಗಳ ವಿರುದ್ಧ ದಾಖಲೆ ಸಮೇತ ಆರೋಪಗಳನ್ನು ಮಾಡಿರುವ ಬಿಜೆಪಿ ನಾಯಕರು ಮತ್ತೊಂದು ಹಗರಣವನ್ನು ಪ್ರಸ್ತಾಪಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ, ಯಾವ ಇಲಾಖೆಗೆ ಸೇರಿದ ಹಗರಣ ಎಂಬುದರ ಬಗ್ಗೆ ಬಿಜೆಪಿ ಮುಖಂಡರಲ್ಲಿ ಮಾಹಿತಿಯಿಲ್ಲ.
ವದಂತಿ 2-ಶುಕ್ರವಾರ ವಿಶ್ವ ನಿದ್ರಾ ದಿನ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ಹೊಸತೊಂದು ಜಾಲತಾಣ ಅಭಿಯಾನ ಆರಂಭಿಸುವ ಸಾಧ್ಯತೆಯಿದೆ. ಸಿದ್ದರಾಮಯ್ಯ ಅವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕೆಲವು ಬಾರಿ ನಿದ್ರೆ ಮಾಡಿದ್ದನ್ನು ಲೇವಡಿ ಮಾಡುತ್ತಿದ್ದ ಬಿಜೆಪಿಯು ಈಗ ಅದನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡುವ ಸಂಭವವಿದೆ.
ವದಂತಿ 3-ಅನ್ಯ ಪಕ್ಷದ ಪ್ರಮುಖ ನಾಯಕರೊಬ್ಬರು ಬಿಜೆಪಿಗೆ ಪಾದಾರ್ಪಣೆ ಮಾಡಬಹುದು. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಇತರ ಪಕ್ಷಗಳಿಂದ ಪ್ರಭಾವಿ ಮುಖಂಡರನ್ನು ಸೆಳೆಯುವ ಬಗ್ಗೆ ತೆರೆಮರೆಯಲ್ಲಿ ಪ್ರಯತ್ನ ಆರಂಭವಾಗಿದೆ. ಹೀಗಾಗಿ, ಆ ಕುರಿತ ಸುದ್ದಿ ಶುಕ್ರವಾರ ಹೊರಬೀಳಬಹುದು ಎನ್ನಲಾಗುತ್ತಿದೆ.
