ಆರೆಸ್ಸೆಸ್ ನಿಷೇಧ ಇಂದಿರಾಗೆ ಆಗಲಿಲ್ಲ ಬಚ್ಚಾ ಸಿದ್ದು ಕೈಲಿ ಆಗುತ್ತಾ..? :ಬಿಎಸ್’ವೈ

First Published 12, Jan 2018, 1:00 PM IST
BSY Attack CM
Highlights

ಪಿಎಫ್‌ಐ ಬದಲು ಆರೆಸ್ಸೆಸ್ ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರನ್ನು ಬಚ್ಚಾ ಎಂದು ಜರಿದಿದ್ದಾರೆ.

ಬೆಂಗಳೂರು (ಜ.12): ಪಿಎಫ್‌ಐ ಬದಲು ಆರೆಸ್ಸೆಸ್ ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರನ್ನು ಬಚ್ಚಾ ಎಂದು ಜರಿದಿದ್ದಾರೆ.

ಶಿರಾದಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಬ್ಯಾನ್ ಮಾಡಲು ನೆಹರು, ಇಂದಿರಾ ಗಾಂಧಿ ಕೈಯಲ್ಲೇ ಆಗಲಿಲ್ಲ. ಇನ್ನು ಬಚ್ಚಾ ಸಿದ್ದರಾಮಯ್ಯನವರ ಕೈಲಿ ಆಗುತ್ತಾ ಎಂದರು.

ಮುಖ್ಯಮಂತ್ರಿಗಳದ್ದು ರಾವಣನ ನಡವಳಿಕೆಯಾಗಿದ್ದು, ಸಿದ್ದರಾಮಯ್ಯ ಹೆಸರಲ್ಲಿ ರಾಮ ಇಲ್ಲ ಬದಲಾಗಿ ರಾವಣ ಇದ್ದಾನೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ದೇಶದಲ್ಲೇ ಧೂಳಿಪಟ ವಾಗಿದ್ದು ಈ ರೀತಿ ಸಿದ್ದರಾಮಯ್ಯ ಮಾತನಾಡಿ ಉಳಿದಿರುವ ಅಲ್ಪಸ್ವಲ್ಪ ಗೌರವವನ್ನೂ ಹಾಳು ಮಾಡಿಕೊಳ್ಳುತ್ತಿ ದ್ದಾರೆ. ಇಂತಹ ವರನ್ನು ಮನೆಗೆ ಕಳುಹಿಸಿ ಆರೂವರೆ ಕೋಟಿ ಜನ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

loader