ನಿನ್ನೆ ಪತ್ರಿಕಾಗೋಷ್ಠಿ ವೇಳೆ ಈಶ್ವರಪ್ಪ ಬೆಂಬಲಿಗರು ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಎಸ್​ವೈ ಬೆಂಬಲಿಗರು ಆರೋಪಿಸಿದ್ದು, ಈಶ್ವರಪ್ಪ ಬೆಂಬಲಿಗರಾದ ದತ್ತಾತ್ರಿ, ಚನ್ನಬಸಪ್ಪ, ಜ್ಞಾನೇಶ್ವರ್​, ಗಿರೀಶ್​ ಪಟೇಲ್​​ ಉಚ್ಚಾಟನೆಗೆ  ಆಗ್ರಹಿಸಿದರು. ಬಿಎಸ್`ವೈ ಬೆಂಬಲಿಗ ಪುರುಷೋತ್ತಮ್​ ಸಲ್ಲಿಸಿದ ಈ ಮನವಿಗೆ ಈಶ್ವರಪ್ಪ ಬೆಂಬಲಿಗರಿಂದ ಆಕ್ಷೇಪ ವ್ಯಕ್ತವಾಗಿ ಮಾತಿನ ಚಕಮಕಿ ನಡೆಯಿತು.

ಶಿವಮೊಗ್ಗ(ಜ.17): ಬಿಎಸ್​ವೈ - ಈಶ್ವರಪ್ಪ ಬಣಗಳ ನಡುವೆ ಕುದಿಯುತ್ತಿದ್ದ ಆಂತರಿಕ ಬೇಗುದಿ ಕಟ್ಟೆ ಒಡೆದಿದೆ. ಶಿವಮೊಗ್ಗದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ರುದ್ರೇಗೌಡರ ಸಮ್ಮಖದಲ್ಲೇ ಎರಡು ಬಣಗಳ ನಡುವೆ ಮಾರಾಮಾರಿ ನಡೆದಿದೆ.