ಲೋಕಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಸಮಾಜವಾದಿ ಪಾರ್ಟಿ ಜೊತೆಗಿನ ಮೈತ್ರಿ ಕಟ್| ಇನ್ನೇನಿದ್ದರೂ ಏಕಾಂಗಿ ಹೋರಾಟ ಎಂದು ಅಧಿಕೃತವಾಗಿ ಮೈತ್ರಿ ಮುರಿದ BSP ನಾಯಕಿ| ಸರಣಿ ಟ್ವಿಟ್‌ಗಳ ಮೂಲಕ SP ಜೊತೆಗೆ ಬ್ರೇಕಪ್ ಮಾಡಿಕೊಂಡ 'ಆನೆ'

ಲಕ್ನೋ[ಜೂ.24]: ಲೋಕಸಭಾ ಚುನಾವಣಾ ಫಲಿತಾಂಶದಿಂದ ಅಸಮಾಧಾನಗೊಂಡಿರುವ BSP ನಾಯಕಿ ಮಾಯಾವತಿ, ಸೋಮವಾರದಂದು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಾರ್ಟಿ ಜೊತೆಗಿನ ಮೈತ್ರಿಯನ್ನು ಅಧಿಕೃತವಾಗಿ ಮುರಿದುಕೊಂಡಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, SP ಜೊತೆ ಮೈತ್ರಿ ಮುಂದುವರೆಸಿದರೆ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯ. ಹೀಗಾಗಿ ಮುಂದಿನ ಎಲ್ಲಾ ಚುನಾವಣೆಗಳಲ್ಲೂ BSP ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. 

Scroll to load tweet…
Scroll to load tweet…

ತಮ್ಮ ಟ್ವಿಟರ್ ಖಾತೆಯಲ್ಲಿ ಅಖಿಲೇಶ್ ನೇತೃತ್ವದ ಸಮಾಜವಾದಿ ಪಾರ್ಟಿ ವಿರುದ್ಧ ಕಿಡಿ ಕಾರಿರುವ ಮಾಯಾ '2012 ರಿಂದ 17ರವರೆಗೆ ಸಮಾಜವಾದಿ ಪಾರ್ಟಿ ನೇತೃತ್ವದ ಸರ್ಕಾರ ತೆಗೆದುಕೊಂಡ ದಲಿತ ವಿರೋಧಿ ನಿರ್ಧಾರ, ಕಾರ್ಯಕ್ರಮಗಳನ್ನು ಕಡೆಗಣಿಸಿದೆವು. ಹಳೆಯದನ್ನೆಲ್ಲ ಮರೆತು ಸಮಾಜವಾದಿ ಪಾರ್ಟಿ ಜತೆ ಮೈತ್ರಿ ಮಾಡಿಕೊಂಡೆವು. ಇಷ್ಟೇ ಅಲ್ಲದೇ ದೇಶದ ಹಾಗೂ ಜನ ಹಿತಕ್ಕಾಗಿ ಸಮಾಜವಾದಿ ಪಾರ್ಟಿ ಜೊತೆಗಿನ ಮೈತ್ರಿ ಧರ್ಮಕ್ಕೆ ನಾವು ಬದ್ಧರಾಗಿ ನಡೆದುಕೊಂಡೆವು'

Scroll to load tweet…

ಆದರೆ ಲೋಕಸಭಾ ಚುನಾವಣೆಯ ಬಳಿಕ ಸಮಾಜವಾದಿ ಪಾರ್ಟಿ ನಾಯಕರ ವರ್ತನೆ ನೋಡಿದರೆ, ಇನ್ನು ನಾವು ಮೈತ್ರಿ ಮುಂದುವರೆಸಿದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಪಕ್ಷ ಹಾಗೂ ಸಂಘಟನೆಯ ಹಿತದೃಷ್ಟಿಯಿಂದ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ನಾವು ಏಕಾಂಗಿಯಾಗಿ, ನಮ್ಮ ಸ್ವಂತ ಶಕ್ತಿಯಿಂದ ಸ್ಪರ್ಧಿಸುತ್ತೇವೆ ಎಂದಿದ್ದಾರೆ.

Scroll to load tweet…

ಬಿಎಸ್ಪಿ ಮೈತ್ರಿಗೆ ಎಸ್‌ಪಿ ವಿದಾಯ: 2020ಕ್ಕೆ ಏಕಾಂಗಿ ಹೋರಾಟ!

ಈ ಮೂಲಕ ಮಾಯಾವತಿ ಸಮಾಜವಾದಿ ಪಕ್ಷಚದ ಜೊತೆಗಿನ ಮೈತ್ರಿಗೆ ವಿದಾಯ ಹಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಸುದ್ದಿಗೋಷ್ಟಿಯೊಂದನ್ನು ನಡೆಸಿ '2022ರಲ್ಲಿ ತನ್ನ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ಈಗಿಂದಲೇ ತೊಡಗಿಕೊಳ್ಳಬೇಕಿದೆ' ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದರು ಎಂಬುವುದು ಉಲ್ಲೇಖನೀಯ.