ಫೆ.1ರಿಂದ ರದ್ದಾಗಲಿದೆ ಬಿಎಸ್ಎನ್ಎಲ್ ನೀಡಿದ ಈ ಸೇವೆ..!

news | Monday, January 29th, 2018
Suvarna Web Desk
Highlights

ಸ್ಥಿರ ದೂರವಾಣಿಗಳಿಗೆ ಭಾನುವಾರ ಕಲ್ಪಿಸಲಾಗುತ್ತಿದ್ದ ಉಚಿತ ಕರೆ ಸೌಲಭ್ಯವನ್ನು ಫೆ.1ರಿಂದ ಹಿಂಪಡೆದುಕೊಳ್ಳಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತಿಳಿಸಿದೆ.

ಕೊಲ್ಕತಾ: ಸ್ಥಿರ ದೂರವಾಣಿಗಳಿಗೆ ಭಾನುವಾರ ಕಲ್ಪಿಸಲಾಗುತ್ತಿದ್ದ ಉಚಿತ ಕರೆ ಸೌಲಭ್ಯವನ್ನು ಫೆ.1ರಿಂದ ಹಿಂಪಡೆದುಕೊಳ್ಳಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತಿಳಿಸಿದೆ.

ರಾಷ್ಟ್ರವ್ಯಾಪಿ ಈ ನಿಯಮ ಅನ್ವಯ ವಾಗಲಿದೆ. ರಾತ್ರಿಯ ಉಚಿತ ಕರೆಗಳನ್ನು ಕಡಿತಗೊಳಿಸಲು ಬಿಎಸ್ ಎನ್‌ಎಲ್ ಮುಂದಾದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಬಿಎಸ್‌ಎನ್‌ಎಲ್ ಈಗಾಗಲೇ ರಾತ್ರಿ ಉಚಿತ ಕರೆಗಳ ವೇಳೆಯನ್ನು 9 ಗಂಟೆಯ ಬದಲು 10.30ಕ್ಕೆ ಬದಲಿಸಿದೆ.

ಉಚಿತ ರಾತ್ರಿ ಕರೆ ಮತ್ತು ಭಾನುವಾರದಂದು ಉಚಿತ ಕರೆ ನೀಡುವ ಸೌಲಭ್ಯವನ್ನು 2016 ಆ.21ರಂದು ಆರಂಭಿಸಲಾಗಿತ್ತು. ಹೊಸ ಕರೆ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments 0
Add Comment

    ಹೆಚ್ಡಿಕೆಗೆ ಮಲೇಷಿಯಾದಲ್ಲಿ ಆಸ್ತಿ ಇದೆಯೆ? ಇಡಿ, ತೆರಿಗೆ ಅಧಿಕಾರಿಗಳಿಂದ ಬೆದರಿಕೆ

    karnataka-assembly-election-2018 | Friday, May 25th, 2018