ಅಹ್ಮದಾಬಾದ್(ಅ. 05): ಭಾರತೀಯ ಗಡಿ ಭದ್ರತಾ ಪಡೆ ಬುಧವಾರ ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದನ್ನು ವಶಪಡಿಸಿಕೊಂಡಿದ್ದಾರೆ. ಕಚ್ಛ್ ಜಿಲ್ಲೆಯಾಚೆ ಭಾರತೀಯ ಸಾಗರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಈ ದೋಣಿಯಲ್ಲಿ 9 ಮಂದಿ ಇದ್ದರು. ಪ್ರಾಥಮಿಕ ತನಿಖೆಯ ಪ್ರಕಾರ ಇವರೆಲ್ಲರೂ ಮೀನುಗಾರರಾಗಿದ್ದಾರೆನ್ನಲಾಗಿದೆ. ವಶಪಡಿಸಿಕೊಂಡ ಈ ದೋಣಿಯಲ್ಲಿ ಮೀನುಗಾರಿಕೆಯ ಸಲಕರಣೆ ಹೊರತುಪಡಿಸಿ ಬೇರಾವುದೇ ವಸ್ತುಗಳು ಪತ್ತೆಯಾಗಿಲ್ಲ. ಆದರೆ, ಈ ದೋಣಿಯಲ್ಲಿದ್ದ ಜನರು ಗುಪ್ತಚಾರಿಕೆ ಕಾರ್ಯ ಮಾಡುತ್ತಿದ್ದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೆಲ ಭದ್ರತಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮೂರು ದಿನಗಳಲ್ಲಿ ಇದು ಮೂರನೇ ಬಾರಿ ಪಾಕಿಸ್ತಾನದ ದೋಣಿ ಭಾರತದ ಜಲ ವ್ಯಾಪ್ತಿಗೆ ಬಂದು ಸಿಕ್ಕಿಕೊಂಡಿರುವುದು. ಗಾಂಧಿ ಜಯಂತಿಯಾದ ಅ.2ರಂದು ಪೋರ್ಬಂದರ್ ಕರಾವಳಿ ಭಾಗದಲ್ಲಿ 9 ಮಂದಿ ಇದ್ದ ಪಾಕ್ ದೋಣಿಯೊಂದನ್ನು ಕರಾವಳಿ ಕಾವಲು ಪಡೆಯವರು ಹಿಡಿದಿದ್ದರು. ನಿನ್ನೆ ಮಂಗಳವಾರ ಪಾಕಿಸ್ತಾನ್ ರೇಂಜರ್ಸ್'ಗೆ ಸೇರಿದ ಖಾಲಿ ದೋಣಿಯೊಂದು ಪಂಜಾಬ್'ನ ತೀರ ಪ್ರದೇಶದ ಬಳಿ ಬಂದಿತ್ತು.