ಈದ್ ಹಬ್ಬದ ವೇಳೆಯಲ್ಲಿಯೇ ಭಾರತದೊಳಗೆ ನುಸುಳಿದ್ದ ಇಬ್ಬರು ಯುವಕರನ್ನು ಬಿ ಎಸ್ ಎಫ್ ಯೋಧರು ಬಂಧಿಸಿದ್ದಾರೆ. ಪಾಕ್ ಯುವಕರ ಬಂಧನವನ್ನು ಬಿಎಸ್ಎಫ್ ದೃಢಪಡಿಸಿದೆ.
ಶ್ರೀನಗರ [ಜೂನ್ 16] ಈದ್ ಹಬ್ಬದ ವೇಳೆಯಲ್ಲಿಯೇ ಭಾರತದೊಳಗೆ ನುಸುಳಿದ್ದ ಇಬ್ಬರು ಯುವಕರನ್ನು ಬಿ ಎಸ್ ಎಫ್ ಯೋಧರು ಬಂಧಿಸಿದ್ದಾರೆ. ಪಾಕ್ ಯುವಕರ ಬಂಧನವನ್ನು ಬಿಎಸ್ಎಫ್ ದೃಢಪಡಿಸಿದೆ.
ಜಮ್ಮು ಮತ್ತು ಕಾಶ್ಮೀರದ ನಾರ್ವಾಲ್ ಜಿಲ್ಲೆಯಲ್ಲಿ ಸೋಹಿಲ್ ಕುಮಾರ್ ಹಾಗೂ ಶೈಲ್ಕೊಟ್ ಪ್ರದೇಶದಲ್ಲಿ ಅಹಮ್ಮದ್ ಎಂಬುವವರನ್ನು ಬಂಧಿಸಲಾಗಿದೆ. ಸುದ್ದಿ ಸಂಸ್ಥೆಗಳಿಗೂ ಬಂಧಿತ ಯುವಕರ ಫೋಟೋ ಬಿಡುಗಡೆ ಮಾಡಲಾಗಿದೆ.
ದೀಪಾವಳಿ ಮತ್ತು ರಂಜಾನ್ ಹಬ್ಬಗಳ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಸಾರಿ ಪಾಕಿಸ್ತಾನ ಸೈನಿಕರು ನೀಡಿದ ಸಿಹಿಯನ್ನು ಭಾರತೀಯ ಯೋಧರು ಸ್ವೀಕರಿಸಿರಲಿಲ್ಲ. ಇದೀಗ ಇಬ್ಬರು ಯುವಕರನ್ನು ವಶಕ್ಕೆ ಪಡೆದಿರುವ ಸೇನೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
