ಯಡಿಯೂರಪ್ಪ ಕ್ಯಾಬಿನೆಟ್ ರೆಡಿ: ಇಲ್ಲಿದೆ ನೂತನ ಸಚಿವರ ಸಂಭಾವ್ಯ ಖಾತೆ
ಪ್ರಮಾಣ ವಚನ ಸ್ವೀಕಾರ ಆಯ್ತು, ಈಗ ಖಾತೆ ಕಸರತ್ತು| ಯಾರಿಗೆ ಯಾವ ಖಾತೆ?| ಇಲ್ಲಿದೆ ನೂತನ ಸಚಿವರ ಸಂಭಾವ್ಯ ಖಾತೆ
ಬೆಂಗಳೂರು[ಆ.20]: ಕೆ. ಎಸ್. ಈಶ್ವರಪ್ಪ, ಮಾಧುಸ್ವಾಮಿ, ಆರ್. ಅಶೋಕ್ ಸೇರಿದಂತೆ 17 ಮಂದಿ ಶಾಸಕರು ಕರ್ನಾಟಕದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಬೆನ್ನಲ್ಲೇ ಖಾತೆ ಹಂಚಿಕೆ ಕಸರತ್ತು ಕೂಡಾ ಆರಂಭವಾಗಿದೆ. ಸದ್ಯಕ್ಕೀಗ ಯಾರಿಗೆ ಯಾವ ಖಾತೆ ಸಿಗಲಿದೆ ಎಂಬ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಇಂದು, ಮಂಗಳವಾರ ಸಂಜೆಯೊಳಗೆ ಖಾತೆ ಹಂಚಕೆಯಾಗಲಿದೆ ಎನ್ನಲಾಗಿದೆ. ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ ಸಿಗುತ್ತೆ? ಇಲ್ಲಿದೆ ಸಂಭಾವ್ಯ ಪಟ್ಟಿ
ರಾಜಭವನದಲ್ಲಿ ಪ್ರಮಾಣ ವಚನ: ಸಿಎಂ ಯಡಿಯೂರಪ್ಪ ಸಂಪುಟ ಸೇರಿದ ಸಚಿವರಿವರು!
* ಗೋವಿಂದ ಕಾರಜೋಳ -ಮುಧೋಳ- ಲೋಕೋಪಯೋಗಿ -ಕಂದಾಯ
* ಅಶ್ವತ್ಥ್ ನಾರಾಯಣ್-ಮಲ್ಲೇಶ್ವರಂ- ಆರೋಗ್ಯ
* ಲಕ್ಷ್ಮಣ್ ಸವದಿ-ಅಥಣಿ- ಸಹಕಾರ
* ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ-ಗೃಹ
* ಆರ್.ಅಶೋಕ್-ಪದ್ಮನಾಭನಗರ -ನಗರಾಭಿವೃದ್ಧಿ
* ಜಗದೀಶ್ ಶೆಟ್ಟರ್-ಹುಬ್ಬಳ್ಳಿ ಕೇಂದ್ರ- ಗ್ರಾಮೀಣಾಭಿವೃದ್ಧಿ
* ಶ್ರೀರಾಮುಲು-ಮೊಳಕಾಲ್ಮೂರು-ಸಮಾಜ ಕಲ್ಯಾಣ
* ಸುರೇಶ್ ಕುಮಾರ್-ರಾಜಾಜಿನಗರ ಕ್ಷೇತ್ರ- ಕೈಗಾರಿಕೆ
* ವಿ.ಸೋಮಣ್ಣ-ಗೋವಿಂದರಾಜನಗರ-ವಸತಿ
* ಸಿ.ಟಿ.ರವಿ-ಚಿಕ್ಕಮಗಳೂರು- ಉನ್ನತ ಶಿಕ್ಷಣ- ಯುವಜನ
* ಬಸವರಾಜ ಬೊಮ್ಮಾಯಿ-ಶಿಗ್ಗಾವಿ-ಜಲಸಂಪನ್ಮೂಲ
* ಕೋಟಾ ಶ್ರೀನಿವಾಸ್ ಪೂಜಾರಿ-ಎಂಎಲ್ಸಿ- ಮುಜರಾಯಿ ಇಲಾಖೆ/ ಪ್ರಾಥಮಿಕ ಶಿಕ್ಷಣ ಇಲಾಖೆ
* ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ-ಕಾನೂನು-ಸಂಸದೀಯ/ ಕೃಷಿ
* ಸಿ.ಸಿ.ಪಾಟೀಲ್-ನರಗುಂದ-ಸಣ್ಣ ನೀರಾವರಿ
* ಎಚ್.ನಾಗೇಶ್-ಮುಳಬಾಗಿಲು- ತೋಟಗಾರಿಕೆ
* ಪ್ರಭು ಚವ್ಹಾಣ್-ಔರಾದ್- ಪೌರಾಡಳಿತ
* ಶಶಿಕಲಾ ಜೊಲ್ಲೆ-ನಿಪ್ಪಾಣಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ
ನೂತನ ಸಚಿವರ ಪ್ರಮಾಣವಚನ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ!