ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಿದ್ದಗಂಗಾ ಶ್ರೀಗಳ ವಿಚಾರನ್ನ ಪ್ರಸ್ತಾಪಿಸಿರುವ ಎಂ.ಬಿ.ಪಾಟೀಲ್ರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಪಶ್ಚಾತ್ತಾಪಕ್ಕಾಗಿಯೇ ನಿನ್ನೆ ಕೂಡಲಸಂಗಮದಲ್ಲಿ ಧ್ಯಾನ ಮಾಡಲು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ , ಸಚಿವ ಎಂ. ಬಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು(ಸೆ.13): ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಿದ್ದಗಂಗಾ ಶ್ರೀಗಳ ವಿಚಾರನ್ನ ಪ್ರಸ್ತಾಪಿಸಿರುವ ಎಂ.ಬಿ.ಪಾಟೀಲ್ರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಪಶ್ಚಾತ್ತಾಪಕ್ಕಾಗಿಯೇ ನಿನ್ನೆ ಕೂಡಲಸಂಗಮದಲ್ಲಿ ಧ್ಯಾನ ಮಾಡಲು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ , ಸಚಿವ ಎಂ. ಬಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ವೀರಶೈವ- ಲಿಂಗಾಯತ ವಿಚಾರಗಳ ಪ್ರಸ್ತಾಪದಲ್ಲಿ ಸುಮ್ಮನಿರಲು ನಿರ್ಧರಿಸಿದ್ದೇನೆ. ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಧಾರದಂತೆ ಮುನ್ನಡೆಯುತ್ತೇವೆ. ಇದರ ಮಧ್ಯೆ ಎಂ.ಬಿ.ಪಾಟೀಲ್ ಸಿದ್ದಗಂಗಾ ಶ್ರೀಗಳ ಹೆಸರು ಪ್ರಸ್ತಾಪಿಸದೇ ಮೌನದಿಂದರೋದು ಒಳ್ಳೆಯದು ಎಂದು ಹೇಳಿದ್ರು.
