Asianet Suvarna News Asianet Suvarna News

ಚಿಕನ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ

ಕೋಳಿ ಮಾಂಸದ ಖಾದ್ಯ ಪ್ರಿಯರಿಗೆ ಇಲ್ಲಿದೆ ಒಂದು ಕಹಿ ಸುದ್ದಿ.  ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಾಂಸದ ಕೋಳಿ, ಫಾರಂ ಕೋಳಿ ಬೆಲೆ ಏಕಾಏಕಿ ಪ್ರತಿ ಕೆಜಿಗೆ 30 ರಿಂದ 40 ರು. ಹೆಚ್ಚಾಗಿದ್ದು, ಕೋಳಿ ಮಾಂಸ ಪ್ರಿಯರು ಖರೀದಿಗೆ ಹಿಂದೇಟು ಹಾಕುವಂತಾಗಿದೆ. 

Broiler Chicken Price Hike Once Again Troubles Citizens
Author
Bengaluru, First Published Oct 29, 2018, 8:20 AM IST

ಬೆಂಗಳೂರು :  ಚಿಕ್ಕನ್ ಬಿರಿಯಾನಿ, ಕಬಾಬ್ ಸೇರಿದಂತೆ ಇನ್ನಿತರ ಕೋಳಿ ಮಾಂಸದ ಖಾದ್ಯ ಪ್ರಿಯರಿಗೆ ಇದು ಕಹಿ ಸುದ್ದಿ! ಕಳೆದ ಮೂರ್ನಾಲ್ಕು ದಿನಗಳಲ್ಲಿ ಮಾಂಸದ ಕೋಳಿ (ಬ್ರಾಯ್ಲರ್), ಫಾರಂ ಕೋಳಿ ಬೆಲೆ ಏಕಾಏಕಿ ಪ್ರತಿ ಕೆಜಿಗೆ 30 ರಿಂದ 40 ರು. ಹೆಚ್ಚಾಗಿದ್ದು, ಕೋಳಿ ಮಾಂಸ ಪ್ರಿಯರು ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಇದಕ್ಕೆ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಕೋಳಿ ಪೂರೈಕೆ ಯಾಗದಿರುವುದೇ ಕಾರಣವೆನ್ನಲಾಗಿದೆ.

ಕಳೆದ ವಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಂಸದ ಕೋಳಿ (ಬ್ರಾಯ್ಲರ್) ಕೆ.ಜಿ.ಗೆ 120 ರು., ಫಾರಂ ಕೋಳಿ ಕೆ.ಜಿಗೆ 115 ರಿಂದ 125 ರು. , ನಾಟಿ ಕೋಳಿ ಕೆಜಿಗೆ 350 ರು., ವಿತ್‌ಸ್ಕಿನ್ ಕೆಜಿಗೆ 165ರಿಂದ 180 ರು.  ಹಾಗೂ ವಿತ್‌ಔಟ್ ಸ್ಕಿನ್ ಕೆಜಿಗೆ 180 ರಿಂದ 190 ರು.  ಇತ್ತು. ಆದರೆ ಇದೀಗ ಪ್ರತಿ ಕೆಜಿಗೆ 40 ರಿಂದ 50 ರು. ಹೆಚ್ಚಾಗಿದ್ದು, ಬ್ರಾಯ್ಲರ್ ಕೋಳಿ ಕೆಜಿಗೆ 155 ರಿಂದ 160 ರು. , ಫಾರಂ ಕೆಜಿಗೆ 125ರಿಂದ 135 ರು., ವಿತ್‌ಸ್ಕಿನ್ 220, ಸ್ಕಿನ್‌ಔಟ್ 240 ರು.ಗೆ ಏರಿಕೆಯಾಗಿದೆ. ಇದು ಕೋಳಿ ಮಾಂಸ ಪ್ರಿಯರ ಜೇಬಿಗೆ ಭಾರವಾಗಿದೆ.

ರಿಯಾಯಿತಿ ಮಾರುಕಟ್ಟೆಯಲ್ಲೇ ಬ್ರಾಯ್ಲರ್ ಕೋಳಿ ಕೆಜಿಗೆ 130ರಿಂದ 132 ರು., ಫಾರಂ 100 ರಿಂದ 110 ರು. ಇದೆ. ಆದ್ದರಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿ ಬೆಲೆ ಹೆಚ್ಚಿಸಬೇಕಾಗಿದೆ. ಬೆಲೆ ಹೆಚ್ಚಳವಾಗಿದ್ದರಿಂದ ಗ್ರಾಹಕರಲ್ಲಿ ಕೋಳಿ ಮಾಂಸ ಖರೀದಿ ಮಾಡುವವರ ಸಂಖ್ಯೆ ಶೇ.20 ರಿಂದ 25 ರಷ್ಟು ಕಡಿಮೆ  ಯಾಗಿದೆ. ಈ ಹಿಂದೆ ಕೋಳಿ ಮಾಂಸದ ಬೆಲೆ ಕುಸಿತ ಕಂಡಾಗ 20 ರಿಂದ 30 ನಷ್ಟ ಮಾಡಿಕೊಂಡು ಮಾರಾಟ ಮಾಡಿದ್ದೇವೆ. 

ಕೆಲವೊಮ್ಮೆ ಲಾಭ ನಷ್ಟ ಉದ್ಯಮದಲ್ಲಿ ಸಾಮಾನ್ಯವಾಗಿದೆ. ಇಂದಿರುವ ಬೆಲೆ ನಾಳೆ ಇರುವುದಿಲ್ಲ, ಹದಿನೈದರಿಂದ ಇಪ್ಪತ್ತು ದಿನಗಳ ನಂತರ ಪುನಃ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕಳೆದ 35 ವರ್ಷಗಳಿಂದ ಕೋಳಿ ಮಾಂಸದ ಉದ್ಯಮ ನಡೆಸುತ್ತಿರುವ ನಾಗಶೆಟ್ಟಿ ಹಳ್ಳಿಯ ದೇವರಾಜ್. 

ಕೇರಳ ಪ್ರವಾಹ ಕಾರಣ: ಕಳೆದ ತಿಂಗಳು ಹಿಂದೆಂದೂ ಕಂಡರಿಯದ ಪ್ರವಾಹಕ್ಕೆ ತುತ್ತಾದ ಕೇರಳದಲ್ಲಿ ಕುಕ್ಕುಟೋದ್ಯಮ ಸಂಪೂರ್ಣ ನೆಲಕ್ಕಚ್ಚಿದೆ. ನೂರಾರು ಕೋಳಿ ಫಾರಂಗಳು ಬಂದ್ ಆಗಿವೆ. ಇದರಿಂದ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಕೋಳಿಗಳ ಸಂಖ್ಯೆ ಶೇ.30 ರಷ್ಟು ಕಡಿತಗೊಂಡಿದೆ. ತಮಿಳುನಾಡಿನ ಬಹುತೇಕ ಕೋಳಿಗಳು ಕೇರಳಕ್ಕೆ ಹೋಗುತ್ತಿವೆ. ರಾಜ್ಯದಲ್ಲಿದ್ದ ಕೋಳಿಗಳು ಖಾಲಿಯಾ ಗಿದ್ದು, ಬೇಡಿಕೆ ಹೆಚ್ಚಿದೆ. ಪ್ರತಿ ದಿನ ಬೆಂಗಳೂರಿಗೆ ಅಂದಾಜು 50ರಿಂದ 60 ಲಕ್ಷ ಕೆಜಿ ಕೋಳಿ ಮಾಂಸದ ಅವಶ್ಯಕತೆ ಇದೆ. ರಾಜ್ಯ ದಲ್ಲಿ ಇದರ ಪ್ರಮಾಣ 1.50 ಕೋಟಿಯಿಂದ 2 ಕೋಟಿ ಕೆಜಿ ಕೋಳಿ ಮಾಂಸ ಬೇಕು. 

ಈ ನಡುವೆ ರಾಜ್ಯದಿಂದ ಗೋವಾಕ್ಕೆ ಶೇ. 70 ಕೋಳಿ ರಫ್ತಾಗುತ್ತದೆ. ಅಲ್ಲದೇ ಹಬ್ಬಗಳು ಇರುವುದರಿಂದ ಈ ಪ್ರಮಾಣದಲ್ಲಿ ಅಲ್ಪಸ್ವಲ್ಪ ಏರಿಳಿತವಾಗುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳಿನಿಂದ ಕೋಳಿ ಮಾಂಸದ ಬೆಲೆ ಕಡಿಮೆ ಇತ್ತು. ಆದ್ದರಿಂದ ಕೋಳಿ ಮರಿ ಉತ್ಪಾದನೆಯಲ್ಲಿ ಶೇ.5ರಿಂದ 10ರಷ್ಟು ಕಡಿಮೆ ಮಾಡಲಾಗಿತ್ತು. ಈ ಎಲ್ಲ ಕಾರಣಗ ಳಿಂದ ಚಿಲ್ಲರೆ ಮತ್ತು ರಿಯಾಯಿತಿ ಮಾರು ಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಕಾಂತರಾಜು ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios