Asianet Suvarna News Asianet Suvarna News

ಜಲಿಯನ್ ವಾಲಾಭಾಗ್ ಘಟನೆಗೆ ವಿಷಾದ: ಬ್ರಿಟನ್ ಪ್ರಧಾನಿ!

ಜಲಿಯನ್ ವಾಲಾಭಾಗ್ ಘಟನೆಗೆ ಕ್ಷಮೆ ಕೋರಿದ ಬ್ರಿಟನ್| ಬ್ರಿಟನ್ ಸಂಸತ್ತಿನಲ್ಲಿ ಕ್ಷಮೆ ಕೋರಿದ ಪ್ರಧಾನಿ ಥೆರೆಸಾ ಮೇ| 1919ರಲ್ಲಿ ಬ್ರಿಟಿಷ್ ಪಡೆಗಳು ಅಮೃತ್ಸರ್ದಲ್ಲಿ ನಡೆಸಿದ್ದ ನರಮೇಧ| ನಿಸ್ಸಂದಿಗ್ಧ ಕ್ಷಮಾಪಣೆ ಕೋರಿದ ಬ್ರಿಟನ್ ವಿರೋಧ ಪಕ್ಷದ ನಾಯಕ| ಜನರ ಮೇಲೆ ಗುಂಡಿನ ಮಳೆಗರೆದಿದ್ದ ಜನರಲ್ ಡಯರ್ ನೇತೃತ್ವದ ಬ್ರಿಟಿಷ್ ಪಡೆಗಳು| 

British PM Theresa May Says Deeply Regret Jallianwala Bagh
Author
Bengaluru, First Published Apr 10, 2019, 6:26 PM IST

ಲಂಡನ್(ಏ.10): 1919ರಲ್ಲಿ ಬ್ರಿಟಿಷ್ ಸರ್ಕಾರ ಭಾರತದ ಅಮೃತ್ಸರ್ನಲ್ಲಿ ನಡೆಸಿದ ಜಲಿಯನ್ ವಾಲಾಭಾಗ್ ನರಮೇಧಕ್ಕೆ ಬ್ರಿಟನ್ ಪ್ರಧಾನಿ ಥೆರಾಸಾ ಮೇ ವಿಷಾದ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಪಾರ್ಲಿಮೆಂಟ್ನಲ್ಲಿ ಮಾತನಾಡಿದ ಥೆರೆಸಾ ಮೇ, ಅಮೃತ್ಸರ್ನಲ್ಲಿ ಬೈಸಾಕಿ ಹಬ್ಬದ ದಿನದಂದು ನಡೆದ ನರಮೇಧಕ್ಕೆ ಬ್ರಿಟನ್ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

ಅದರಂತೆ ಬ್ರಿಟನ್ ವಿರೋಧ ಪಕ್ಷ ಲೇಬರ್ ಪಾರ್ಟಿ ನಾಯಕ ಜೆರೆಮಿ ಕಾರ್ಬಿನ್ ಕೂಡ ಜಲಿಯನ್ ವಾಲಾಭಾಗ್ ಘಟನಗೆ ಬ್ರಿಟನ್ ನಿಸ್ಸಂದಿಗ್ಧವಾಗಿ ಕ್ಷಮಾಪಣೆ ಕೋರಲಿದೆ ಎಂದು ಹೇಳಿದ್ದಾರೆ.

British PM Theresa May Says Deeply Regret Jallianwala Bagh

1919ರ ಏ.13ರಂದು ಬೈಸಾಕಿ ಹಬ್ಬದ ನಿಮಿತ್ತ ಅಮೃತ್ಸರ್ ನಗರದ ಜಲಿಯನ್ ವಾಲಾಭಾಗ್ ನಲ್ಲಿ ಸೇರಿದ್ದ ಸಿಖ್ ಸಮುದಾಯದ ಜನರ ಮೇಲೆ, ಜನರಲ್ ಡಯರ್ ನೇತೃತ್ವದ ಪಡೆಗಳು ಗುಂಡಿನ ಮಳೆಗರೆದಿದ್ದವು. 

ದುರ್ಘಟನೆಯಲ್ಲಿ 400ಕ್ಕೂ ಅಧಿಕ ಜನರು ಮರಣಹೊಂದಿದ್ದರು. ಇದು ಸ್ವಾತಂತ್ರ್ಯದ ಅಗ್ನಿಕುಂಡದಲ್ಲಿದ್ದ ಭಾರತದಲ್ಲಿ ಭಾರೀ ಆಕ್ರೋಶ ಭುಗಿಲೇಳುವಂತೆ ಮಾಡಿತ್ತು. ಮಹಾತ್ಮಾ ಗಾಂಧಿಜೀ ಕೂಡ ಜಲಿಯನ್ ವಾಲಾಭಾಗ್ ಘಟನೆ ಖಂಡಿಸಿ ತಮ್ಮ ನೈಟ್ ಹುಡ್ ಪ್ರಶಸ್ತಿ ಮರಳಿಸಿದ್ದರು.

Follow Us:
Download App:
  • android
  • ios