ಕಳೆದ ಸೋಮವಾರ ಕೇಂದ್ರ ಗೃಹ ಇಲಾಖೆಯು ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದ ಕೋರ್ಟ್ ಮನವಿಯನ್ನು ವಿದೇಶಾಂಗ ವ್ಯವಹಾರ ಇಲಾಖೆಗೆ ರವಾನಿಸಿದೆ.

ನವದೆಹಲಿ (ಫೆ.21): ಬ್ಯಾಂಕುಗಳಿಗೆ ಸಾವಿರಾರು ಕೋಟಿ ಸಾಲ ಮರು ಪಾವತಿಸದೇ ಲಂಡನ್’ನಲ್ಲಿ ನೆಲಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ವಿಚಾರದಲ್ಲಿ ಭಾರತವು ಮಾಡಿರುವ ಮನವಿಗೆ ಬ್ರಿಟನ್ ಧನಾತ್ಮಕವಾಗಿ ಸ್ಪಂದಿಸಿದೆಯೆಂದು ವರದಿಯಾಗಿದೆ.

ಜತೆಗೆ, ಐಪಿಎಲ್ ಹಗರಣದಲ್ಲಿ ಬೇಕಾಗಿರುವ ಲಲಿತ್ ಮೋದಿ, 1993 ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಟೈಗರ್ ಮೆಮನ್ ಅವರ ವಿರುದ್ಧವೂ ಬ್ರಿಟನ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆಯೆಂದು ಹೇಳಲಾಗಿದೆ.

ಕಳೆದ ಸೋಮವಾರ ಕೇಂದ್ರ ಗೃಹ ಇಲಾಖೆಯು ವಿಜಯ್ ಮಲ್ಯ ಗಡಿಪಾರಿಗೆ ಸಂಬಂಧಿಸಿದ ಕೋರ್ಟ್ ಮನವಿಯನ್ನು ವಿದೇಶಾಂಗ ವ್ಯವಹಾರ ಇಲಾಖೆಗೆ ರವಾನಿಸಿದೆ.

ಭಾರತ- ಬ್ರಿಟನ್ ಪರಸ್ಪರ ಕಾನೂನು ನೆರವು ಒಪ್ಪಂದ (MLAT)ಯ ಆಧಾರದಲ್ಲಿ ಮಲ್ಯರನ್ನು ಭಾರತಕ್ಕೆ ವಾಪಾಸು ಕರೆ ತರಲು ಜಾರಿ ನಿರ್ದೇಶನಾಲಯವು (ಇ.ಡಿ) ಮಾಡಿರುವ ಮನವಿಗೆ ಮುಂಬೈ ವಿಶೇಷ ನ್ಯಾಯಾಲಯವು ಸಮ್ಮತಿಸಿದ್ದು, ಆ ವಿವರಗಳನ್ನು ಗೃಹ ಇಲಾಖೆಯು ವಿದೇಶಾಂಗ ಇಲಾಖೆಗೆ ಒದಗಿಸಿದೆ. ಆ ದಾಖಲೆಗಳನ್ನು ವಿದೇಶಾಂಗ ಇಲಾಖೆಯು ಬ್ರಿಟನ್ ಸರ್ಕಾರಕ್ಕೆ ಸಲ್ಲಿಸಿದೆ.