ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಸಂಪಾದನೆ ಮಾಡಿದ್ದಾರೆನ್ನುವ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸಿ ಎಂದು ಸುಪ್ರೀಂ ಕೋರ್ಟ್ ಎನ್ ಜಿಓಗೆ ಸೂಚಿಸಿದೆ.

ನವದೆಹಲಿ (ಡಿ.14): ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಸಂಪಾದನೆ ಮಾಡಿದ್ದಾರೆನ್ನುವ ಆರೋಪಕ್ಕೆ ಸೂಕ್ತ ಪುರಾವೆ ಒದಗಿಸಿ ಎಂದು ಸುಪ್ರೀಂ ಕೋರ್ಟ್ ಎನ್ ಜಿಓಗೆ ಸೂಚಿಸಿದೆ.

ನಾವು ಉನ್ನತ ಹುದ್ದೆಯಲ್ಲಿರುವವರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಹಾಗಾಗಿ ನೀವು ಬಲವಾದ ಸಾಕ್ಷಿಯನ್ನು ತರಬೇಕು ಎಂದು ನ್ಯಾ. ಜಗದೀಶ್ ಸಿಂಗ್ ಖೇಹರ್ ಹಾಗೂ ಅರುಣ್ ಮಿಶ್ರಾ ಪೀಠವು ಎನ್ ಜಿಓ ಪರ ವಕೀಲ ಪ್ರಶಾಂತ್ ಭೂಷಣ್ ಗೆ ಹೇಳಿದೆ. ಜೊತೆಗೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಸೂಕ್ತ ಪುರಾವೆ ಒದಗಿಸಲು ಪ್ರಶಾಂತ್ ಭೂಷಣ್ ಕಾಲಾವಕಾಶ ಕೇಳಿದ್ದಾರೆ.

ಕಳೆದ ಬಾರಿ ನಡೆದ ವಿಚಾರಣೆಯಲ್ಲಿ ಹಿರಿಯ ವಕೀಲ ಶಾಂತಿ ಭೂಷಣ್ ಮತ್ತು ರಾಮ್ ಜೇಠ್ಮಲಾನಿ ಕಾಲಾವಕಾಶ ಕೇಳಿದ್ದರು. ನಾವು ಡಿ.11 ರವರೆಗೆ ಸಮಯ ನೀಡಿದ್ದೆವು. ನಮ್ಮ ಬಳಿ ಸಾಕ್ಷಿ ಇದೆ ಎಂದು ಜೇಠ್ಮಲಾನಿ ಹೇಳಿದ್ದಾರೆ. ಆದರೆ ಇಂದು ಅವರು ಹಾಜರಾಗಿಲ್ಲ. ನೀವು ಇನ್ನಷ್ಟು ಸಮಯ ಕೇಳುತ್ತಿದ್ದೀರಿ ಎಂದು ನ್ಯಾ. ಖೇಹರ್ ಪ್ರಶಾಂತ್ ಭೂಷನ್ ಗೆ ಕೇಳಿದ್ದಾರೆ.