ಏಕಾಏಕಿ ಕುಸಿದು ಬಿದ್ದ ಮೇಲ್ಸೇತುವೆ! ಅವಶೇಷಗಳಡಿ ಹತ್ತಾರು ವಾಹನಗಳು! ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಘಟನೆ! ನಗರದ ಅತ್ಯಂತ ಹಳೆಯ ಮೇಲ್ಸೇತುವೆ! 6 ಜನರಿಗೆ ಗಂಭೀರ ಗಾಯ, ಓರ್ವ ಸಾವು

ಕೋಲ್ಕತ್ತಾ(ಸೆ.4): ದಕ್ಷಿಣ ಕೋಲ್ಕತ್ತಾದಲ್ಲಿ ಮೇಲ್ಸೇತುವೆಯೊಂದು ಏಕಾಏಕಿ ಕುಸಿದುಬಿದ್ದಿದೆ. ಆಲಿಪೋರ್ ನಲ್ಲಿರುವ ಈ ಸೇತುವೆ ನಗರದ ಅತ್ಯಂತ ಹೆಚ್ಚಿನ ಸಂಚಾರ ಹೊಂದಿರುವ ಸೇತುವೆಗಳಲ್ಲಿ ಒಂದು.

Scroll to load tweet…

ಈ ಮೇಲ್ಸುತುವೆ ರೈಲ್ವೆ ಹಳಿಯ ಮೇಲೆ ಕುಸಿದಿದ್ದು, ಅನೇಕ ವಾಹನಗಳು ಅಸವಶೇಷಗಳ ಅಡಿಯಲ್ಲಿ ಸಿಲುಕಿವೆ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. 

Scroll to load tweet…

ಹಲವರು ಸೇತುವೆಯ ಅವಶೇಷಗಳಡಿ ಕುಸಿದಿರುವ ಶಂಕೆ ಇದೆ. ದುರಂತ ನಡೆದ ಸ್ಥಳ ನಿರ್ಮಾಣ ಹಂತದ ಕಟ್ಟಡಗಳಿಂದ ಕೂಡಿದೆ. ಸದ್ಯ 6 ಜನಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದಾಗ ಓರ್ವ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

Scroll to load tweet…

ಇನ್ನು ಸುದ್ದಿ ತಿಳಿಯುತ್ತಿದ್ದಂತೇ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ, ರಕ್ಷಣಾ ಕಾರ್ಯಾಚರಣೆಯ ಕುರಿತು ಮಾಹಿತಿ ಪಡೆದಿದ್ದಾರೆ.

Scroll to load tweet…