ಬಿಹಾರದಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಿಶನ್ ಗಂಜ್ ಪ್ರದೇಶದ ಬಳಿ ನದಿವೊಂದು ತುಂಬಿ ಹರಿಯುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ನದಿಯಲ್ಲಿನ ಚಿಕ್ಕ-ಪುಟ್ಟ ಗಿಡಗಳು ಸಹ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿದ್ದವು, ಗ್ರಾಮದ ಹತ್ತಾರು ಜನರು ನೀರಿನ ರಭಸ ನೋಡಲು ನದಿಗೆ ಇರುವ ಸೇತುವೆ ಬಳಿ ನಿಂತುಕೊಂಡಿದ್ರು.
ಬಿಹಾರ(ಆ.18): ಬಿಹಾರದಲ್ಲಿ ಕಳೆದ ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಕಿಶನ್ ಗಂಜ್ ಪ್ರದೇಶದ ಬಳಿ ನದಿವೊಂದು ತುಂಬಿ ಹರಿಯುತ್ತಿತ್ತು. ಈ ವೇಳೆ ನೀರಿನ ರಭಸಕ್ಕೆ ನದಿಯಲ್ಲಿನ ಚಿಕ್ಕ-ಪುಟ್ಟ ಗಿಡಗಳು ಸಹ ನೀರಿನೊಂದಿಗೆ ಕೊಚ್ಚಿಕೊಂಡು ಹೋಗುತ್ತಿದ್ದವು, ಗ್ರಾಮದ ಹತ್ತಾರು ಜನರು ನೀರಿನ ರಭಸ ನೋಡಲು ನದಿಗೆ ಇರುವ ಸೇತುವೆ ಬಳಿ ನಿಂತುಕೊಂಡಿದ್ರು.
ಇದೇ ವೇಳೆ ಜನರು ನೀರಿನ ರಭಸ ಕಂಡು ಭಯಬೀತರಾಗಿ ಸೇತುವೆದಾಡಲು ಹಿಂದೇಟು ಹಾಕುತ್ತಲ್ಲೇ ಓಡಿ ಓಡಿ ಸೇತುವೆ ದಾಟಿದರು. ಮಹಿಳೆಯೊಬ್ಬಳು ಮಗುವಿನೊಂದಿಗೆ ತಲೆ ಮೇಲೆ ಸೌದೆ ಇಟ್ಟುಕೊಂಡು ಸೇತುವೆ ದಾಟಲು ಮುಂದಾಗಿದ್ದಳು. ಆ ವೇಳೆ ಏಕಾಏಕಿ ಸೇತುವೆ ಕುಸಿದು ಮಹಿಳೆ ಮತ್ತು ಮಗು ನೀರು ಪಾಲಾಗಿದ್ರು. ಈ ದೃಶ್ಯ ನೋಡುಗರನ್ನು ಬೆಚ್ಚಿಬೀಳಿಸಿದೆ.
