ಕೇರಳ ಮೂಲದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದದು, ಈವರೆಗೆ ಈಕೆಗೆ ಬರೋಬ್ಬರಿ 11 ಮದುವೆಗಳಾಗಿವೆ. ಮದುವೆಯಾದ ಬಳಿಕ ಅವರನ್ನು ದೋಚಿ ಮತ್ತೊಂದು ಮದುವೆಯಾಗುವುದೇ ಇವಳ ಕೆಲಸ. ಪೊಲೀಸರು ಈ ಯುವತಿಯೊಂದಿಗೆ ಆಕೆಗೆ ಸಹಕಾರ ನೀಡುತ್ತಿದ್ದ ಅಕ್ಕ ಹಾಗೂ ಭಾವನನ್ನೂ ಬಂಧಿಸಿದ್ದಾರೆ.
ಕೇರಳ(ಡಿ.19): ಮದುವೆಯಾಗಿ ತನ್ನ ಸಂಸಾರ ನಿಭಾಯಿಸಬೇಕೆಂಬುವುದು ಪ್ರತಿಯೊಬ್ಬ ಹೆಣ್ಣಿನ ಕನಸು. ಆದರೆ ಪೊಲೀಸರು ಬಲೆಗೆ ಬಿದ್ದಿರುವ ಓರ್ವ ಯುವತಿಗೆ ಮದುವೆಯಾಗಿ ಸಂಸಾರ ನಿಭಾಯಿಸುವುದು ಕನಸಲ್ಲ ಬದಲಾಗಿ ದರೋಡೆ ಮಾಡುವ ದಂಧೆಯಾಗಿದೆ.
ಕೇರಳ ಮೂಲದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದದು, ಈವರೆಗೆ ಈಕೆಗೆ ಬರೋಬ್ಬರಿ 11 ಮದುವೆಗಳಾಗಿವೆ. ಮದುವೆಯಾದ ಬಳಿಕ ಅವರನ್ನು ದೋಚಿ ಮತ್ತೊಂದು ಮದುವೆಯಾಗುವುದೇ ಇವಳ ಕೆಲಸ. ಪೊಲೀಸರು ಈ ಯುವತಿಯೊಂದಿಗೆ ಆಕೆಗೆ ಸಹಕಾರ ನೀಡುತ್ತಿದ್ದ ಅಕ್ಕ ಹಾಗೂ ಭಾವನನ್ನೂ ಬಂಧಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಪೊಲೀಸರು 'ಕೊಚ್ಚಿ ಮೂಲದ ಲಾರೆನ್ ಜಸ್ಟಿನ್ ಎಂಬಾತ ಅಕ್ಟೋಬರ್'ನಲ್ಲಿ ತನ್ನ ಪತ್ನಿ ಮೇಘಾ ಬಾರ್ಗವ್ ವಿರುದ್ಧ ದೂರು ದಾಖಲಿಸಿದ್ದ. ತಾನು ನೀಡಿದ್ದ ದೂರಿನಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಪತ್ನಿ 15 ಲಕ್ಷ ಮೌಲ್ಯದ ಆಭರಣಗಳೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದ. ತನಿಖೆ ನಡೆಸಿದಾಗ ಈ ರೀತಿ ಮೋಸ ಹೋದವರಲ್ಲಿ ಜಸ್ಟಿನ್ ನಾಲ್ಕನೆಯವನೆಂಬ ಮಾಹಿತಿ ಸಿಕ್ಕಿತ್ತು. ಕೇರಳದಲ್ಲಿ ಆಕೆಯೊಂದಿಗೆ ಮದುವೆಯಾಗಿದ್ದ ನಾಲ್ವರು ಮದುವೆಯಾದ ಕೆಲವೇ ದಿನಗಳಲ್ಲಿ ಮೋಸ ಹೋಗಿದ್ದರು' ಎಂದಿದ್ದಾರೆ.
ಇನ್ನು ಈ ಮೇಘಾ ಎಂಬಾಕೆ ಈವರೆಗೆ ಕೇರಳ, ಮುಂಬೈ, ಪುಣೆ, ರಾಜಸ್ಥಾನ ಹಾಗೂ ಇಂದೋರ್'ನ 11 ಯುವಕರೊಂದಿಗೆ ಮದುವೆಯಾಗಿದ್ದಾಳೆ. ಈಕೆಯ ಬಲೆಗೆ ಬಿದ್ದವರಲ್ಲಿ ಬಹುತೇಕರು ವಿಚ್ಛೇದಿತರು ಹಾಗೂ ವಿಕಲಚೇತನರಾಗಿದ್ದಾರೆ. ಮದುವೆಯಾದ ಕೆಲ ದಿನಗಳಲ್ಲೇ ಅಮಲು ಪದಾರ್ಥ ನೀಡಿ ಕುಟುಂಬದ ಸದಸ್ಯರನ್ನು ಪ್ರಜ್ಞಾಹೀನರನ್ನಾಗಿಸುತ್ತಿದ್ದ ಈಕೆ ಬಳಿಕ ಅಲ್ಲಿದ್ದ ಸಂಪತ್ತಿನೊಂದಿಗೆ ಪರಾರಿಯಾಗುತ್ತಿದ್ದಳು.
ಈ ಎಲ್ಲಾ ವಿಚಾರಗಳು ಲಭ್ಯವಾದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಆಕೆ ನೋಯ್ಡಾದ ಅಮೃಪಾಲ್ ಜೋಡಿಯಾಕ್ ಸೊಸೈಟಿಯಲ್ಲಿರುವ ಒಂದು ಮನೆಯಲ್ಲಿದ್ದಾಳೆಂದು ತಿಳಿಯುತ್ತದೆ. ಈ ಮಾಹಿತಿಯನ್ವಯ ಶನಿವಾರದಂದು ದಾಳಿ ನಡೆಸಿದ ಪೊಲೀಸರು ಮೇಘಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಆಕೆಯೊಂದಿಗಿದ್ದ ಅಕ್ಕ ಹಾಗೂ ಭಾವನನ್ನೂ ಬಂಧಿಸಿದ್ದಾರೆ. ಇಲ್ಲೂ ಈಕೆ ವರನ ಅನ್ವೇಷಣೆಯಲ್ಲಿ ಬಂದಿದ್ದಳು ಎಂದು ಪೊಲೀಸರು ಅನುಮಾನಿಸಿದ್ದಾರೆ.
