Asianet Suvarna News Asianet Suvarna News

ಫಸ್ಟ್‌ ನೈಟ್‌ ರೂಮ್‌ನಲ್ಲೇ ನೇಣು ಬಿಗಿದುಕೊಂಡ ಗಂಡ, ಹಾಲು ಹಿಡ್ಕೊಂಡು ಬಂದ ವಧುವಿಗೆ ಶಾಕ್‌!


ತವರು ಮನೆಗೆ ವಿದಾಯ ಹೇಳಿ ಗಂಡನ ಮನೆಗೆ ಬಂದಿದ್ದ ವಧು ಮೊದಲ ರಾತ್ರಿಯ ಖುಷಿಯಲ್ಲಿದ್ದಳು. ಹಾಲು ಹಿಡಿದುಕೊಂಡು ರೂಮ್‌ನ ಬಾಗಿಲು ತೆಗೆದಾಗ ಆಕೆಗೆ ಆಕಾಶವೇ ಕುಸಿದು ಬಿದ್ಧಂತ ಅನುಭವವಾಗಿದೆ.

Uttar Pradesh Etawah groom died before First night was found hanging bride was shocked san
Author
First Published Jul 4, 2024, 6:54 PM IST

ನವದೆಹಲಿ (ಜು.4): ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ನವವಿವಾಹಿತ ವ್ಯಕ್ತಿ ತಮ್ಮ ಮೊದಲ ರಾತ್ರಿಯ ದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ತವರಿನ ಮನೆಗೆ ವಿದಾಯ ಹೇಳಿ, ಗಂಡನ ಮನೆಗೆ ಬಂದ ಕೆಲವೇ ಸಮಯದಲ್ಲಿ ಪತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ನವವಿವಾಹಿತ ಆತ್ಯಹತ್ಯೆ ಎರಡೂ ಕುಟುಂಬದಲ್ಲಿ ಆತಂಕಕ್ಕೆ ಕಾರಣವಾಯಿತು. ಇನ್ನು ಹೊಸ ಬದುಕಿನ ಆಸೆಯಲ್ಲಿ ಗಂಡನ ಮನೆಗೆ ಬಂದಿದ್ದ ಪತ್ನಿ, ಕೋಣೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಸೀಟ್‌ ಕಂಡು ಆಘಾತಕ್ಕೆ ಒಳಗಾಗಿದ್ದಾಳೆ. ಘಟನೆಯ ಮಾಹಿತಿ ಪಡೆದುಕೊಂದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ.. ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮರಣೋತ್ತರ ಪರೀಕ್ಷೆ ಕಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಅನ್ನೋದರ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಎರಡೂ ಕುಟುಂಬದ ಸದಸ್ಯರನ್ನು ವಿಚಾರಣೆ ಮಾಡುತ್ತಿದ್ದಾರೆ.

ಇಡೀ ಘಟನೆ ಇಟವಾ ಪೊಲೀಸ್‌ ಸ್ಟೇಷನ್‌ನ ಉಶ್ರಾಹರ್‌ ಪ್ರದೇಶದಲ್ಲಿ ನಡೆಸಿದೆ. ನಿವೃತ್ತಸೈನಿಕ ಗ್ಯಾನ್‌ ಸಿಂಗ್‌ ಅವರ ಕಿರಿಯ ಪುತ್ರ ಸತ್ಯೇಂದ್ರ ಅವರ ಮದುವೆಯ ಮುನ್ನದ ಮೆರವಣಿಗೆ ಜುಲೈ 2 ರಂದು ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ರಾತ್ರಿಯಿಡೀ ಅದ್ದೂರಿಯಾಗಿ ಬ್ಯಾಂಡ್‌ ಬಾಜಾ ನಡೆದಿತ್ತು. ಆ ಬಳಿಕ ವಿಧಿವಿಧಾನ ಪ್ರಕಾರ ಸತ್ಯೇಂದ್ರ ಅವರ ವಿವಾಹ ನೆರವೇರಿತ್ತು. ಜುಲೈ 3 ರಂದು ವಧು ತನ್ನ ತವರು ಮನೆಗೆ ವಿದಾಯ ಹೇಳಿ ಮೆರವಣಿಗೆಯಲ್ಲಿ ಗಂಡನ ಮನೆಗೆ ಬಂದಿದ್ದರು.

ಈ ಹಂತದಲ್ಲಿ ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಮದುವೆಯ ನಂತರದ ವಿಧಿವಿಧಾನಗಳು ಕೂಡ ನಿಗದಿಯಂತೆ ಮಾಡಲಾಗಿತ್ತು. ಸಂಜೆಯ ವೇಳೆ ವರನ ಮನೆಯಲ್ಲಿ ಅದ್ದೂರಿಯಾಗಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರನೊಂದಿಗೆ ವರನ ಸ್ನೇಹಿತರು ಕೂಡ ಮದುವೆಯನ್ನು ಸಂಭ್ರಮಿಸಿದ್ದರು. ಕಾರ್ಯಕ್ರಮದ ಬಳಿಕ ಡಿಜೆಗೆ ಸ್ವತಃ ವರ ಸತ್ಯೇಂದ್ರ ಹಣವನ್ನೂ ನೀಡಿದ್ದಾರೆ. ಆದರೆ, ಈ ಸಂಭ್ರಮ ಹೆಚ್ಚಿನ ಕಾಲ ಇದ್ದಿರಲಿಲ್ಲ. ಇನ್ನೇನು ಮೊದಲ ರಾತ್ರಿಗೆ ಸಜ್ಜಾಗಬೇಕು ಎನ್ನುವ ಸಮಯದಲ್ಲಿ 2ನೇ ಮಹಡಿಯಲ್ಲಿ ತನ್ನ ಕೋಣೆಯಲ್ಲಿ ಸತ್ಯೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಲು ತೆಗೆದುಕೊಂಡು ವಧು ಕೋಣೆಗೆ ಬಂದಾಗ ಎಷ್ಟೇ ಬಡಿದರು ಬಾಗಿಲು ತೆಗೆದಿರಲಿಲ್ಲ. ಅನುಮಾನ ಬಂದು ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.  ತಕ್ಷಣವೇ ಬಾಗಿಲನ್ನು ಒಡೆದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆ ವೈದ್ಯರು ಈತ ಸಾವು ಕಂಡಿದ್ದಾನೆ ಎಂದು ಘೋಷಣೆ ಮಾಡಿದ್ದಾರೆ. ಸಾವು ಅಧಿಕೃತವಾದ ಬೆನ್ನಲ್ಲಿಯೇ ವರನ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ನವವಧು ತನ್ನ ಗಂಡನ ಮುಖವನ್ನು ಕೂಡ ಸರಿಯಾಗಿ ನೋಡಿರಲಿಲ್ಲ. ಮದುವೆಯ ಸಂಭ್ರಮದ ಮನೆ ಕೆಲವೇ ಹೊತ್ತಿನಲ್ಲಿ ಸಾವಿನ ಮನೆಯಾಗಿ ಮಾರ್ಪಟ್ಟಿತ್ತು.

'ನನಗೂ ವಿನಯ್‌ ರಾಜ್‌ಕುಮಾರ್‌ಗೂ ಮದುವೆಯಾಗಿಲ್ಲ..' ಸ್ಪಷ್ಟನೆ ನೀಡಿದ ಸರಳ ಪ್ರೇಮಕಥೆ ನಾಯಕಿ!

ಇಲ್ಲಿಯವರೆಗೂ ಸಾವಿನ ಕಾರಣವೇನು ಅನ್ನೋದು ಪೊಲೀಸರಿಗೆ ಗೊತ್ತಾಗಿಲ್ಲ. ಇನ್ನು ಕುಟುಂಬ ಸದಸ್ಯರು ಕೂಡ ಇಡೀ ಮದುವೆ ಕಾರ್ಯಕ್ರಮ ಚೆನ್ನಾಗಿಯೇ ನಡೆದಿತ್ತು. ಯಾವುದೇ ಸಮಸ್ಯೆ ಆಗಿರಲಿಲ್ಲ ಎಲ್ಲಾ ಅತಿಥಿಗಳು ಕೂಡ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಆತ್ಮಹತ್ಯೆ ಯಾಕೆ ಮಾಡಿಕೊಂಡ ಎನ್ನುವುದು ಅರ್ಥವಾಗಿಲ್ಲ ಎಂದಿದ್ದಾರೆ.

ಟೀಮ್‌ ಇಂಡಿಯಾ ಜೊತೆ, ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆದ Leader-Dictator!

ಶಿವರಾ ಗ್ರಾಮವು ಉಸರ್ಹರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ), ಸತ್ಯಪಾಲ್ ಸಿಂಗ್ ಹೇಳಿದ್ದಾರೆ. ಸತ್ಯೇಂದ್ರ ಎಂಬ ಯುವಕ ಜುಲೈ 2 ರಂದು ವಿವಾಹವಾಗಿದ್ದ. ಜುಲೈ 3 ರಂದು ಮದುವೆಯ ಮೆರವಣಿಗೆಯೊಂದಿಗೆ ಮರಳಿತ್ತು. ಇದಾದ ನಂತರ ಸತ್ಯೇಂದ್ರ ಮೇಲಿನ ಕೋಣೆಗೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ಅವರ ಪಂಚನಾಮೆ ನಡೆದಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರಿದಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios