ಹಸೆಮಣೆಗೇರಬೇಕಾದವಳು ಮಸಣಕ್ಕೆ

First Published 24, Jan 2018, 1:27 PM IST
Bride Died in Accident in Hassana
Highlights

ವಿವಾಹ ಪೂರ್ವ ಫೋಟೋ ಶೂಟ್'ಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಭೀಕರ ರಸ್ತೆ ಅಪಘಾತ ನಡೆದಿದ್ದು ಹಸೆಮಣೆ ಏರಬೇಕಾಗಿದ್ದ ಭಾವೀ ವಧು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪಾಳ್ಯದಲ್ಲಿ ನಡೆದಿದೆ .

ಹಾಸನ (ಜ.24): ವಿವಾಹ ಪೂರ್ವ ಫೋಟೋ ಶೂಟ್'ಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಭೀಕರ ರಸ್ತೆ ಅಪಘಾತ ನಡೆದಿದ್ದು ಹಸೆಮಣೆ ಏರಬೇಕಾಗಿದ್ದ ಭಾವೀ ವಧು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪಾಳ್ಯದಲ್ಲಿ ನಡೆದಿದೆ.

ವಿವಾಹ ನಿಶ್ಚಯವಾಗಿದ್ದ ರಾಧಿಕಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ವರ  ಸುಪ್ರೀತ್, ಗಂಭೀರ ಗಾಯಗೊಂಡಿದ್ದಾನೆ.

ತುಮಕೂರು ಜಿಲ್ಲೆ ಗುಬ್ಬಿಯ ರಾಧಿಕಾ- ಸುಪ್ರೀತ್ ನಡುವೆ ವಿವಾಹ ನಿಶ್ಚಯಗೊಂಡಿತ್ತು. ಇವರಿಬ್ಬರೂ  ಫೋಟೋ ಶೂಟನ್ನು ಹಾಸನದ ಶೆಟ್ಟಿಹಳ್ಳಿ ಚರ್ಚ್'ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ವೇಳೆ ಆಲೂರಿನ ಪಾಳ್ಯದಲ್ಲಿ ಅಸ್ವಸ್ಥ ಮಹಿಳೆಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಾದಚಾರಿ ಅಸ್ವಸ್ಥ ಮಹಿಳೆ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿದ್ದ ರಾಧಿಕಾ ಸಹ ಸಾವನ್ನಪ್ಪಿದ್ದು, ರಾಧಿಕಾ ತಾಯಿ, ಕ್ಯಾಮರಾಮನ್'ಗಳು ಸೇರಿ ಮೂವರ ಸ್ಥಿತಿ ಗಂಭೀರವಾಗಿದೆ.

loader