ಸಪ್ತಪದಿ ತುಳಿಯುತ್ತಿರುವಾಗಲೇ ಮದುಮಗಳ ಮೇಲೆ ಪ್ರಿಯಕರನಿಂದ ಹಲ್ಲೆ

Bride Attack during Wedding by her boyfriend
Highlights

ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಪ್ರಿಯಕರ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ  ಸಾಗರ ತಾಲ್ಲೂಕಿನ ಭೀಮನಕೋಣೆ ಕಾಪ್ಟೆಮನೆ  ವರನ ಸ್ವಗೃಹದಲ್ಲಿ ನಡೆದಿದೆ. 

ಶಿವಮೊಗ್ಗ (ಏ. 02): ಸಪ್ತಪದಿ ತುಳಿಯುತ್ತಿದ್ದಾಗಲೇ ಮದುಮಗಳ ಮೇಲೆ ಪ್ರಿಯಕರ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ  ಸಾಗರ ತಾಲ್ಲೂಕಿನ ಭೀಮನಕೋಣೆ ಕಾಪ್ಟೆಮನೆ  ವರನ ಸ್ವಗೃಹದಲ್ಲಿ ನಡೆದಿದೆ. 

ಭರತ್ ಎಂಬುವವರ ಜೊತೆ  ಸೀತಾ  ಎಂಬುವವರ ಮದುವೆ ನಡೆಯುತ್ತಿತ್ತು. ಭಗ್ನ ಪ್ರೇಮಿ ಮಧುಮಗಳ ಕುತ್ತಿಗೆಯನ್ನೇ ಚಾಕುವಿನಿಂದ ಇರಿದಿದ್ದಾನೆ. ತಾಳಿ ಕಟ್ಟಿದ ನಂತರ ಸಪ್ತಪದಿ ತುಳಿಯುತ್ತಿದ್ದಾಗಲೇ ಹಲ್ಲೆ ನಡೆಸಿದ್ದಾನೆ.  ತಪ್ಪಿಸಲು ಬಂದ ಹುಡುಗಿಯ ಚಿಕ್ಕಪ್ಪ ಗಂಗಾಧರಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಗಾದ ಪ್ರೇಮ ಹಾಗೂ ಗಂಗಾಧರಪ್ಪರನ್ನು  ಹೆಚ್ಚಿನ ಚಿಕಿತ್ಸೆಗಾಗಿ  ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಆರೋಪಿಯನ್ನು ಅಲ್ಲೇ ಇದ್ದ ಸಂಬಂಧಿಕರು ಪೋಲೀಸರಿಗೆ ಒಪ್ಪಿಸಿದ್ದಾರೆ.
 

loader