ಹಾಲುಣಿಸುತ್ತಿದ್ದಾಗ ಮುಚ್ಚಿಕೊಳ್ಳಲು ಹೇಳಿದ್ದಕ್ಕೆ ನಾರಿಯ ಖಡಕ್ ರೆಸ್ಪಾನ್ಸ್ ಇದು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 1:30 PM IST
Breastfeeding mother gives an epic response when asked to cover up
Highlights

ರೆಸ್ಟೋ ರೆಂಟ್ ಬಳಿ ಕುಳಿತು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದ ವೇಳೆ ತಾಯಿಯೋರ್ವಳಿಗೆ ಪುರುಷನೋರ್ವ ಎದೆ ಮುಚ್ಚಿಕೊಳ್ಳಲು ಹೇಳಿದ್ದಾನೆ. ಈ ವೇಳೆ ಆಕೆ ತಕ್ಷಣವೇ ಆತನಿಗೆ ಖಡಕ್ ಆದ ರೆಸ್ಪಾನ್ಸ್ ನೀಡಿದ್ದಾಳೆ.

ನವದೆಹಲಿ :  ಎದೆ ಹಾಲುಣಿಸುವುದು ಉಸಿರಾಡುವಷ್ಟೇ ಅತೀ ಮುಖ್ಯ ಸಂಗತಿಯಾಗಿದೆ. ತಾಯಿ ಹಾಗೂ ಮಗುವಿನ ನಡುವಿನ ಅಪೂರ್ವವಾದ ಬಮಧನಕ್ಕೆ ಅದೊಂದು ದಿವ್ಯಾನುಭೂತಿಯನ್ನು ನೀಡುವ ಸಂಗತಿಯಾಗಿದೆ. ಇಂತಹ ಸಂಗತಿಗೆ ಸಾರ್ವಜನಿಕವಾಗಿ ಇಂದಿಗೂ ಕೂಡ ಒಪ್ಪಿಗೆ ಎನ್ನುವುದು ಇಲ್ಲ. ಸಾರ್ವಜನಿಕ ಸ್ಥಳದಲ್ಲಿ ಎದೆ ಹಾಲುಣಿಸುವ ತಾಯಿಯನ್ನು ಕಂಡಾಗ ವಿಚಿತ್ರ ದೃಷ್ಟಿಯಿಂದ ನೋಡುವ ಕಣ್ಣುಗಳು ಇಂದಿಗೂ ಇದೆ. 

ಇಂತಹದ್ದೇ ಘಟನೆಯೊಂದು ಮೆಕ್ಸಿಕೋದಲ್ಲಿ ನಡೆದಿದೆ. ಮೆಲಾನಿಯಾ ಡೂಡ್ಲಿ ಎನ್ನುವ ತಾಯಿ ತನ್ನ ನಾಲ್ಕು ತಿಂಗಳ ಮಗುವಿಗೆ ಎದೆ ಹಾಲುಣಿಸುತ್ತಿದ್ದಳು. ಟೆಕ್ಸಾಸ್ ನ ರೆಸ್ಟೋರಂಟ್ ಒಂದರ ಬಳಿ ಕುಟುಂಬದೊಂದಿಗೆ ಕುಳಿತಿದ್ದ ಆಕೆ ಎದೆ ಹಾಲುಣಿಸುವ ವೇಳೆ ಬಂದ ಪುರುಷನೋರ್ವ ಆಕೆಗೆ ಎದೆಯ ಭಾಗವನ್ನು ಮುಚ್ಚಿಕೊಳ್ಳವಂತೆ ಹೇಳಿದ್ದಾನೆ. 

ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ  ಮೆಲಾನಿಯಾ ತನ್ನ ಪತಿಯ ಬಳಿ ಇದ್ದ ಒಂದು ಬಟ್ಟೆಯನ್ನು ತೆಗೆದುಕೊಂಡು ತನ್ನ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದಾರೆ. 

ಈಕೆಯ ತಕ್ಷಣದ ಖಡಕ್ ಪ್ರತಿಕ್ರಿಯನ್ನು ಕಂಡ ವ್ಯಕ್ತಿಯೋರ್ವ ತಕ್ಷಣವೇ ಅದನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

 

loader