ಹಾಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಹಕ್ಕುಚ್ಯುತಿ ಮಂಡನೆಯಾದ ಅಪರೂಪದ ಘಟನೆಗೆ ಗುರುವಾರ ವಿಧಾನಸಭೆ ಸಾಕ್ಷಿಯಾಗಿದ್ದು,  ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಸಂಬಂಧ ವಿಧಾನಸಭೆಯಲ್ಲಿ ನೀಡಿದ ಉತ್ತರ ದೋಷಪೂರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಕ್ಕುಚ್ಯುತಿ ಮಂಡನೆ ಮಾಡಿದರು.

ಬೆಂಗಳೂರು (ಮಾ.23): ಹಾಲಿ ಮುಖ್ಯಮಂತ್ರಿಯೊಬ್ಬರ ಮೇಲೆ ಹಕ್ಕುಚ್ಯುತಿ ಮಂಡನೆಯಾದ ಅಪರೂಪದ ಘಟನೆಗೆ ಗುರುವಾರ ವಿಧಾನಸಭೆ ಸಾಕ್ಷಿಯಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಸಂಬಂಧ ವಿಧಾನಸಭೆಯಲ್ಲಿ ನೀಡಿದ ಉತ್ತರ ದೋಷಪೂರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಹಕ್ಕುಚ್ಯುತಿ ಮಂಡನೆ ಮಾಡಿದರು.

ಗುರುವಾರ ಪ್ರಶ್ನೋತ್ತರ ಅವಧಿಯ ನಂತರ ಈ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಕಳೆದ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಸಂಬಂ‘ ಶೂನ್ಯವೇಳೆಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸದನದಲ್ಲಿ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ರುಪಾಯಿ ಗೌರವ ಧನ ಹೆಚ್ಚಳ ಮಾಡಲಿಲ್ಲ ಎಂದು ಹೇಳಿದ್ದರು. ಇದರಿಂದ ತಮಗೆ ಹಾಗೂ ಬಿಜೆಪಿ ಸದಸ್ಯರಿಗೆ ಹಕ್ಕುಚ್ಯುತಿಯಾಗಿದೆ. ಹೀಗಾಗಿ ಸಿಎಂ ವಿರುದ್ಧ ಹಕ್ಕು ಚ್ಯುತಿ ಮಂಡನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಆದರೆ ಸ್ಪೀಕರ್ ಕೆ.ಬಿ.ಕೋಳಿವಾಡ, 1967 ರಲ್ಲಿ ಕೆ.ಎಚ್.ಪಾಟೀಲ್ ಅವರು ಅಂದಿನ ಸಿಎಂ ಎಸ್.ಆರ್.ಕಂಠಿ ವಿರುದ್ಧ ಹಾಗೂ 1970 ರಲ್ಲಿ ಎಚ್.ಎನ್.ನಂಜೇಗೌಡ ಅವರು ಅಂದಿನ ಸಿಎಂ ವೀರೇಂದ್ರ ಪಾಟೀಲ್ ವಿರುದ್ಧ ಮಂಡಿಸಿದ್ದ ಹಕ್ಕುಚ್ಯುತಿ ಪ್ರಕರಣಗಳನ್ನು ಉಲ್ಲೇಖಿಸಿ, ಕೇವಲ ತಪ್ಪು ಅಂಕಿ-ಅಂಶ ನೀಡಿದ್ದರು ಎಂಬ ನಿರುದ್ದೇಶದ ಕಾರಣಕ್ಕೆ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಇರುವುದಿಲ್ಲ ಎಂದು ಸದನಕ್ಕೆ ತಿಳಿಸಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ ಸದಸ್ಯರು ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡದೇ, ಹಳೆದ ಘಟನೆಗಳನ್ನು ಆ‘ರಿಸಿ ಮಾತನಾಡಲು ಅವಕಾಶ ನೀಡದಿದ್ದರೆ ತಮ್ಮ ಹಕ್ಕು ಕಸಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ರಮೇಶ್‌ಕುಮಾರ್, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಯಂತಹ ಸಂಸದೀಯ ವ್ಯವಾಹರಗಳ ಚರ್ಚೆಗಳು ನಡೆದಿವೆ. ಈ ಬಗ್ಗೆ 12 ರಿಂದ 13 ಗಳಷ್ಟು ಚರ್ಚೆ ನಡೆದ ಉದಾಹರಣೆಗಳಿವೆ. ಹಿಂದೆ ಗುಂಡೂರಾವ್ ಸಿಎಂ ಆಗಿದ್ದಾಗ ಪ್ರತಿಪಕ್ಷದ ನಾಯಕ ಜೆ.ಎಚ್.ಪಟೇಲರೂ ಹಕ್ಕುಚ್ಯುತಿ ಮಂಡಿಸಿದ್ದರು. ಹಲವಾರು ಒತ್ತಡಗಳ ಮಧ್ಯೆ ಕೆಲಸ ಮಾಡುವಾಗಿ ತಪ್ಪುಗಳು ನಡೆಯುವುದು ಸಹಜ. ಹಾಗಂತ ಹಕ್ಕುಚ್ಯುತಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ವಿಷಯವನ್ನೇ ಸದನದಲ್ಲಿ ಮಂಡಿಸಲು ಅವಕಾಶ ಇಲ್ಲ ಎನ್ನುವುದು ಸರಿಯಲ್ಲ. ಕನಿಷ್ಠ ಪಕ್ಷ ವಿಪಕ್ಷಗಳಿಗೆ ಪೂರ್ವಭಾವಿ ವಿಷಯ ಮಂಡನೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಸ್ಪೀಕರ್ ಕೋಳಿವಾಡ, ನಾನು ಹಳೆಯ ಘಟನೆಗಳ ಕುರಿತಂತೆ ಸದನದ ಗಮನ ಸೆಳೆದಿದ್ದೇನೆ ಅಷ್ಟೇ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪೂರ್ವಭಾವಿ ಚರ್ಚೆ ಮಾಡಲು ತಕರಾರಿಲ್ಲ. ಹಕ್ಕುಚ್ಯುತಿ ಮಂಡಿಸಿ ವಿಪಕ್ಷಗಳು ಮಾತನಾಡಬಹುದು ಎಂದು ಅವಕಾಶ ನೀಡಿದರು.

ಆಗ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ ವಿಪಕ್ಷ ನಾಯಕ ಶೆಟ್ಟರ್, ಅಂಗನವಾಡಿ ನೌಕರರ ಮುಷ್ಕರ ಕುರಿತಂತೆ ಕಳೆದ ಮಂಗಳವಾರ ನಾವು ಸದನದಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ್ದೆವು. ಆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುವಾಗ ಸತ್ಯಕ್ಕೆ ದೂರವಾದ ವಿಷಯಗಳನ್ನು ಸದನದಲ್ಲಿ ಹೇಳಿದರು. 2008 ರಿಂದ 2013 ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅಂಗನವಾಡಿ ನೌಕರರ ಗೌರವ‘ನದಲ್ಲಿ ಒಂದು ರೂಪಾಯಿ ಹೆಚ್ಚಳ ಮಾಡಲಿಲ್ಲ ಎಂದು ಹೇಳಿದರು. ಈ ಬಗ್ಗೆ ನಾನು ಆಕ್ಷೇಪ ವ್ಯಕ್ತಪಡಿಸಿದಾಗ, ಸಿಎಂ ತಮ್ಮ ಹೇಳಿಕೆ ಸರಿಪಡಿಸಿಕೊಳ್ಳುವ ಸೌಜನ್ಯವನ್ನೇ ತೋರಲಿಲ್ಲ. ಬದಲಾಗಿ ‘ನಾನು ಹೇಳಿದ್ದು ಸುಳ್ಳಾಗಿದ್ದರೆ ಹಕ್ಕುಚ್ಯುತಿ ಮಂಡಿಸಿ’ ಎಂದು ಸವಾಲು ಹಾಕಿದರು.

ವಾಸ್ತವವಾಗಿ ನಾವು ೨೦೦೮-೦೯ರಲ್ಲಿ ೨೦೦ ರು., ೨೦೦೯-೧೦ರಲ್ಲಿ ೨೫೦, ೨೦೧೧-೧೨ರಲ್ಲಿ ೫೦೦ ರು. ೨೦೧೨-೧೩ರಲ್ಲಿ ೩ ರು.ಗಳಷ್ಟು ಕಾರ್ಯಕರ್ತೆಯರ ಗೌರವ ‘ನ ಹೆಚ್ಚಳ ಮಾಡಿದ್ದೇವೆ. ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಒಂದು ರೂಪಾಯಿ ಕೂಡ ಹೆಚ್ಚು ಮಾಡಿಲ್ಲ ಎಂದು ಸುಳ್ಳು ಹೇಳಿಕೆಯನ್ನು ಸದನದಲ್ಲಿ ನೀಡಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಮಾತನಾಡುವಾಗ ಸರಿಯಾದ ಅಂಕಿ-ಅಂಶಗಳಿಲ್ಲದೇ ರಾಜ್ಯದ ಜನತೆಯನ್ನು ದಾರಿತಪ್ಪಿಸುವ ಸುಳ್ಳು ಹೇಳಿಕೆ ನೀಡಿದರೆ ನಾವು ಸುಮ್ಮನಿರಬೇಕೆ? ಸಿಎಂ ಆದವರು ತಮ್ಮ ಸ್ಥಾನಕ್ಕೆ ಯೋಗ್ಯವಲ್ಲದ ಹೇಳಿಕೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಒಬ್ಬ ಮುಖ್ಯಮಂತ್ರಿ ಆದವರು, ಆಡಳಿತ ಪಕ್ಷದಲ್ಲಿ ಇರುವವರು ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು. ಅವತ್ತು ಸಿಎಂ ತಪ್ಪು ಅಂಕಿ-ಅಂಶ ಹೇಳಿದಾಗ ನಾನು ಮಧ್ಯಪ್ರವೇಶಿಸಿ, ಅಂಕಿ-ಅಂಶ ಸರಿಪಡಿಸಲು ಯತ್ನಿಸಿದರೂ ಅವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಈ ರೀತಿಯ ವರ್ತನೆ ಸಂಸದೀಯ ವ್ಯವಸ್ಥೆಯಲ್ಲಿ ಗೌರವ ತರುವುದಿಲ್ಲ. ಸದನದ ಗೌರವಕ್ಕೂ ‘ಕ್ಕೆ ಬರುತ್ತದೆ. ಆಡಳಿತ ಪಕ್ಷವೇ ಇರಲಿ, ವಿರೋ‘ ಪಕ್ಷವೇ ಇರಲಿ. ಎಲ್ಲರೂ ಪರಸ್ಪರ ಗೌರವ ಕೊಡಬೇಕು, ಪರಸ್ಪರ ಭಾವನೆಗಳನ್ನು ಗೌರವಿಸಬೇಕು. ಆದರೆ ಮುಖ್ಯಮಂತ್ರಿಗಳು ಅನೇಕ ಬಾರಿ ಆವೇಶದಲ್ಲೋ, ಇನ್ನಾವುದೋ ಉದ್ದೇಶದಿಂದಲೋ ಬಳಸುವ ಶಬ್ದಗಳು ಸಹನೀಯವಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
೨೦೧೦-೧೧ರಲ್ಲಿ ಬಿಜೆಪಿ ಸರ್ಕಾರ ಅಂಗನವಾಡಿ ನೌಕರರಿಗೆ ವಂತಿಗೆ ಆಧಾರಿತ ಪಿಂಚಣಿಗಾಗಿ ೧೦ ಕೋಟಿ ರು. ಅನುದಾನ, ೨೦೧೧-೧೨ರಲ್ಲಿ ೫೦೦ ರು. ಗೌರವ ‘ನ ಹೆಚ್ಚಳ, ೨೦೧೨-೧೩ರಲ್ಲಿ ಒಂದು ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಾಮಾಜಿಕ ‘ದ್ರತೆ ಯೋಜನೆ ಜಾರಿಗೊಳಿಸಿದೆ. ಈ ಎಲ್ಲ ವಿಚಾರಗಳನ್ನು ಸಿಎಂ ತಮ್ಮ ಹೇಳಿಕೆಯಲ್ಲಿ ಮುಚ್ಚಿಟ್ಟಿದ್ದಾರೆ. ಈ ರೀತಿಯ ವರ್ತನೆ ಹಕ್ಕುಚ್ಯುತಿಯಲ್ಲದೇ ಮತ್ತೇನು? ಎಂದು ಸದನವನ್ನು ಪ್ರಶ್ನಿಸಿದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆಯಲ್ಲಿ ಪಾಲು ಕೊಡುವ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ತಪ್ಪು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ವಿಚಾರದಲ್ಲೂ ತಪ್ಪು ಅಂಕಿ-ಅಂಶಗಳನ್ನೇ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷಗಳನ್ನು ಎದುರಿಸುವಾಗ ಸುಳ್ಳು ಹೇಳುವುದು ರೂಢಿಯಾಗುತ್ತಿದೆ. ದುರುದ್ದೇಶಪೂರಿತವಾಗಿಯೇ ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಆವೇಶದಲ್ಲಿ ಈ ರೀತಿ ಹೇಳಿಕೆ ನೀಡಿಲ್ಲ. ಬದಲಾಗಿ ಉದ್ದೇಶಪೂರ್ವಕವಾಗಿಯೇ, ಆಕ್ರಮಣಕಾರಿಯಾಗಿ ಮತ್ತು ನಿರ್ದಿಷ್ಟವಾಗಿಯೇ ಸುಳ್ಳು ಹೇಳಿಕೆ ನೀಡಿದ್ದಾರೆ. ಹೀಗಾಗಿ ಹಕ್ಕುಚ್ಯುತಿಯಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಆಗ ಮತ್ತೇ ಮಾತನಾಡಿದ ಸಚಿವ ರಮೇಶ್‌ಕುಮಾರ್, ಒಬ್ಬ ಮುಖ್ಯಮಂತ್ರಿ ಕೂಡ ಮನುಷ್ಯರೇ. ಅವತ್ತು ಆವೇಶದಲ್ಲಿ ತಪ್ಪು ಹೇಳಿಕೆ ನೀಡಿದ್ದಾರೆ ಎಂಬುದು ನಿಜ. ಅದಾವುದನ್ನೂ ನಾವು ಅಲ್ಲಗಳೆಯುತ್ತಿಲ್ಲ. ಆದರೆ ದುರುದ್ದೇಶಪೂರಿತವಾದ ಹೇಳಿಕೆ ಅದಾಗಿರಲಿಲ್ಲ. ಸಂಸತ್ತಿನ ನಿಯಮಾವಳಿ ಕುರಿತಂತೆ ಕೌಲ್ ಆಂಡ್ ಶಖ್ದರ್ ಕೃತಿಯಲ್ಲಿ ಉಲ್ಲೇಖಿಸಿರುವಂತೆ ‘‘ಯಾವುದೇ ಅಪಮಾನಕ್ಕೆ ಈಡು ಮಾಡದಂತಹ ತಪ್ಪು ಅಂಕಿ-ಅಂಶಗಳುಳ್ಳ ಹೇಳಿಕೆಗಳು ಹಕ್ಕುಚ್ಯುತಿ ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಈ ಪ್ರಕರಣ ಹಕ್ಕುಚ್ಯುತಿ ಆಗುವುದಿಲ್ಲ. ಹೀಗಾಗಿ ಹಕ್ಕುಚ್ಯುತಿ ಮಂಡನೆ ಕೈಬಿಡಬೇಕು ಎಂದು ಸಮರ್ಥಿಸಿಕೊಂಡು, ಸಂಸದೀಯ ಇತಿಹಾಸದ ಹಲವು ನಿದರ್ಶನಗಳನ್ನು ಸದನದ ಮುಂದಿಟ್ಟರು.
ಇದಕ್ಕೆ ಸದಸ್ಯರಾದ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಕೂಡ ನಿದರ್ಶನಗಳ ಮೂಲಕವೇ ಸಿಎಂ ವರ್ತನೆಯನ್ನು ಟೀಕಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಚರ್ಚೆ ನಡೆಯುವ ವೇಳೆ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಆ ವೇಳೆ ಸಿಎಂ ಸಿದ್ದರಾಮಯ್ಯ ಅವರು ಆವೇಶಕ್ಕೆ ಒಳಗಾಗಿ ಮಾತನಾಡಿದ್ದುದು ನಿಜ. ಆದರೆ ತಪ್ಪು ಹೇಳಿಕೆ ನೀಡಿದ ಬೆನ್ನಲ್ಲೇ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದು ಬಾರಿ ೨೦೦ ರು. ಮತ್ತು ಮತ್ತೊಂದು ಬಾರಿ ೫೦೦ ರು. ಗೌರವ‘ನ ಹೆಚ್ಚಿಸಲಾಗಿದೆ ಎಂದು ತಮ್ಮ ಹೇಳಿಕೆ ಸರಿಪಡಿಸಿಕೊಂಡಿದ್ದರು. ಆದರೆ ಗದ್ದಲದ ವಾತಾವರಣದಲ್ಲಿ ಪ್ರತಿಪಕ್ಷದ ಸದಸ್ಯರು ಅದನ್ನು ಗಮನಿಸಲಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಈ ರೀತಿಯ ಚರ್ಚೆಗಳು ಆಗಬೇಕು. ಉದ್ದೇಶಪೂರ್ವಕವಲ್ಲದ ಸಿಎಂ ಹೇಳಿಕೆ ಹಕ್ಕುಬಾ‘್ಯತೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಮಗೂ ಕೂಡ ಸಿಎಂ ಅವರನ್ನು ಹಕ್ಕುಬಾ‘್ಯತೆಗೆ ಒಳಪಡಿಸಿ ಏನೋ ಮಾಡಬೇಕೆಂಬ ಹಠ ಇಲ್ಲ. ಆದರೆ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಹೋಗಬೇಕು. ಮಾತಿನ ‘ರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಸಹಜ. ಹಾಗಂತ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಬಾರದು. ಈ ಘಟನೆ ಬಳಿಕ ಸಿಎಂ ತಮ್ಮ ವರ್ತನೆ ಹೇಗಿರಬೇಕೆಂಬುದನ್ನು ನಿ‘ರ್ರಿಸಿಕೊಳ್ಳಲಿ. ಆದರೆ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಸರ್ಕಾರ ತುರ್ತಾಗಿ ಸ್ಪಂದಿಸಲಿ ಎಂದು ಆಗ್ರಹಿಸಿದರು.
ಸ್ಪೀಕರ್ ಕೋಳಿವಾಡ, ಹಕ್ಕುಚ್ಯುತಿ ಮಂಡನೆ ಮೇಲಿನ ತೀರ್ಪು ಕಾಯ್ದಿರಿಸಿ ಕಲಾಪವನ್ನು ಭೋಜನ ವಿರಾಮದ ನಂತರ ಮುಂದೂಡಿದರು.