ಸಾವೋ ಪೌಲೋ[ಏ.29]: ಬ್ರೆಜಿಲ್‌ ದೇಶದ ರೂಪದರ್ಶಿಯೊಬ್ಬ ಕ್ಯಾಟ್‌ವಾಕ್‌ ಮಾಡುತ್ತಿರುವ ವೇಳೆಯೇ ವೇದಿಕೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಸಾವೋ ಪೌಲೋದ ಓಕ್ಸೋ ಪ್ರದರ್ಶನದಲ್ಲಿ ನಡೆದಿದೆ.

ಮೃತ ರೂಪದರ್ಶಿಯನ್ನು ಟೇಲ್ಸ್‌ ಸೋ​ರ್‍ಸ್ (26) ಎಂದು ಗುರುತಿಸಲಾಗಿದ್ದು, ರೂಪದರ್ಶಿ ವೈವಿದ್ಯಮಯ ವಿನ್ಯಾಸ ಬಟ್ಟೆಗೆ ಅಳವಡಿಸಿದ್ದ ಬಾಲದ ಮಾದರಿ ಬಟ್ಟೆವೇದಿಕೆಯಲ್ಲಿ ತಿರುಗಿದಾಗ ಅವರ ಕಾಲಿಗೆ ಸಿಲುಕಿದೆ. ಈ ವೇಳೆ ಒಂದೆರಡು ಹೆಜ್ಜೆಗಳಲ್ಲಿ ಅದನ್ನು ನಿಯಂತ್ರಿಸಲು ಯತ್ನಿಸಿ ವಿಫಲರಾದ ಅವರು ನೆಲಕ್ಕೆ ಬಿದ್ದಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಆಯೋಜಕರು ರೂಪದರ್ಶಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಆ ವೇಳೆಗಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.