ಒಂಟಿ ಮಹಿಳೆಯನ್ನೇ ಟಾರ್ಗೆಟ್​​ ಮಾಡಿ ಚಿನ್ನ ದೋಚಲು ಬಂದಿದ್ದ ಕಳ್ಳ. ಚಿನ್ನ ದೋಚಿ ಎಸ್ಕೇಪ್​​ ಆಗುತ್ತಿದ್ದ ಂತೆ   ಕ್ಷಣ ಮಾತ್ರದಲ್ಲಿ  ಹಿಡಿದು ಸರಿಯಾಗಿ ತದುಕಿ ಕಂಬಿ ಹಿಂದೆ ಕಳುಹಿಸಿದ್ದಾಳೆ.

ಆತ ಚಿನ್ನದಂಗಡಿಯಲ್ಲಿದ್ದ ಒಂಟಿ ಮಹಿಳೆಯನ್ನ ಟಾರ್ಗೆಟ್​​ ಮಾಡಿ ಬಂದಿದ್ದ. ಸಿಕ್ಕಿದ್ದೇ ಚಾನ್ಸ್​​ ಅಂಥ ಆಕೆಗೆ ಯಾಮರಿಸಿ ಅಂಗಡಿಯಲ್ಲಿದ್ದ ಚಿನ್ನವನ್ನು ದೋಚಿ ಎಸ್ಕೇಪ್​​​ ಆಗ್ತಿದ್ದ. ಆದ್ರೆ ಎಸ್ಕೇಪ್​​​ ಆಗ್ತಿದ್ದ ಕಳ್ಳನನ್ನು ರೇಡ್​​ಆ್ಯಂಡ್​ ಆಗಿ ಹಿಡಿದು ಕಂಬಿ ಹಿಂದೆ ಕಳಿಸಿದ್ದಾಳೆ ಈ ಭಲೇ ಹೆಣ್ಣು.

ಈ ಸಿಸಿಟಿವಿ ದೃಶ್ಯವನ್ನೊಮ್ಮೆ ನೋಡಿ, ಯಾರೂ ಮಾಡದ ಸಾಹಸವನ್ನು ಈ ಮಹಿಳೆ ಮಾಡಿ ತೋರಿಸಿದ್ದಾಳೆ. ಒಂಟಿ ಮಹಿಳೆಯನ್ನೇ ಟಾರ್ಗೆಟ್​​ ಮಾಡಿ ಚಿನ್ನ ದೋಚಲು ಬಂದಿದ್ದ ಕಳ್ಳ. ಚಿನ್ನ ದೋಚಿ ಎಸ್ಕೇಪ್​​ ಆಗುತ್ತಿದ್ದ ಂತೆ ಕ್ಷಣ ಮಾತ್ರದಲ್ಲಿ ಹಿಡಿದು ಸರಿಯಾಗಿ ತದುಕಿ ಕಂಬಿ ಹಿಂದೆ ಕಳುಹಿಸಿದ್ದಾಳೆ.

ಇಂಥ ಸಾಹಸಮಯ ದೃಶ್ಯ ಕಂಡು ಬಂದಿದ್ದು ವಿಜಯನಗರದಲ್ಲರೋ ಕುದೂರು ಜ್ಯುವೆಲರಿ ಶಾಪ್​ನಲ್ಲಿ. ನೋಟ್​ ಬ್ಯಾನ್​​​ ಎಫೇಕ್ಟ್​​ನ್ನೇ ಲಾಭವಾಗಿ ಮಾಡಿಕೊಂಡ ಕಳ್ಳನೊಬ್ಬ ನಿನ್ನೆ ವಿಜಯನಗರದಲ್ಲಿರೋ ಕೂದೂರು ಜ್ಯೂವಲ್ಲೆರಿ ಶಾಪ್​​ಗೆ ತೆರಳಿದ್ದಾನೆ. ಸುಮಾರು ಒಂದು ಲಕ್ಷದ 20 ಸಾವಿರ ಮೌಲ್ಯದ ಚಿನ್ನದ ಸರವನ್ನು ತೆಗೆದುಕೊಂಡ ಕಳ್ಳ , ತನ್ನ ಬಳಿಯಿದ್ದ ಡಿಟ್​ ಕಾರ್ಡ್​​ನ್ನು ಸ್ವೈಪ್​​ ಮಾಡಲು ಅಂಗಡಿ ಮಾಲಕಿಗೆ ಕೊಟ್ಟಿದ್ದಾನೆ. ಕ್ರೆಡಿಟ್​​ ಕಾರ್ಡ್​​ನ್ನು ಅಂಗಡಿ ಮಾಲಕಿ ಸ್ವೈಪ್​​ ಮಾಡುತ್ತಿದ್ದಂತೆ ಚಿನ್ನದ ಸರದ ಜೊತೆಗೆ ಕಳ್ಳ ಪರಾರಿಯಾಗಲು ಯತ್ನಿಸಿದ್ದಾನೆ. ಕಳ್ಳನ ಈ ಹೊಂಚನ್ನ ಅರಿತ ಅಂಗಡಿ ಮಾಲಕಿ ಓಡುತ್ತಿದ್ದ ಕಳ್ಳನನ್ನ ಕ್ಷಣಮಾತ್ರದಲ್ಲಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾಳೆ .

ಒಟ್ಟಿನಲ್ಲಿ ಈ ಗಟ್ಟಿಗಿತ್ತಿಯ ಸಾಹಸವನ್ನು ನೋಡಿದ ಸಾರ್ವಜನಿಕರು ​ ಅಂಗಡಿ ಮಾಲಕಿ ಶುಭಾಗೆ ಶಹಬಾಷ್ ​ಗಿರಿಯನ್ನು ಹೇಳಿದ್ದಾರೆ. ಇನ್ನು ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರೋ ವಿಜಯನಗರ ಪೊಲೀಸರು ಆರೋಪಿ ಗಿರೀಶ್​​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

ವರದಿ: ಶಶಿಶೇಖರ್, ಸುವರ್ಣ ನ್ಯೂಸ್​​