ತಾಯಿಯಿಂದ, ಹೆಣ್ಣಿಂದ(ಪತ್ನಿ) ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಅವರನ್ನು ಹೆಣ್ಣೊಬ್ಬಳು ಮೋಹಿಸಲಿದ್ದಾಳೆ. ಮೋದಿಗೆ ಇದೇ ಮುಳುವಾಗಲಿದೆ. ಗಾಂಧಿ ಕುಟುಂಬಕ್ಕೆ ಇಲ್ಲವೇ ಮೋದಿಗೆ ಸಾವು ಸಾವಿರ ಪರ್ಸೆಂಟ್ ಖಚಿತ ಎಂದರು.
ಹಾಸನ(ಅ. 12): ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ. ಇಲ್ಲಿಯ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಮೋದಿ ಅವರದ್ದು ವೃಶ್ಚಿಕ ರಾಶಿ, ಅವರಿಗೆ ಶನಿ ಚೆನ್ನಾಗಿಲ್ಲ. ಈಗ ಗುರು ತುಲಾ ರಾಶಿಗೆ ಪ್ರವೇಶ ಮಾಡಿದ್ದಾನೆ. ಹೀಗಾಗಿ ಉನ್ನತ ಸ್ಥಾನದಲ್ಲಿದ್ದು ಯಶೋಕೀರ್ತಿ ಹೊಂದಿರುವ ಸಿನಿಮಾ ಸ್ಟಾರ್ ಅಥವಾ ರಾಜಕಾರಣಿಗೆ ಘೋರ ಅಪಮೃತ್ಯು ಕಾದಿದೆ ಎಂದಿದ್ದಾರೆ.
ಪ್ರಧಾನಿ ಮತ್ತು ಹೆಣ್ಣಿನ ಮೋಹ:
ತಾಯಿಯಿಂದ, ಹೆಣ್ಣಿಂದ(ಪತ್ನಿ) ದೂರ ಇರುವ ಪ್ರಧಾನಿಗೆ ಶುಕ್ರನಿಂದಲೂ ದೋಷ ಇದೆ. ಅವರನ್ನು ಹೆಣ್ಣೊಬ್ಬಳು ಮೋಹಿಸಲಿದ್ದಾಳೆ. ಮೋದಿಗೆ ಇದೇ ಮುಳುವಾಗಲಿದೆ. ಗಾಂಧಿ ಕುಟುಂಬಕ್ಕೆ ಇಲ್ಲವೇ ಮೋದಿಗೆ ಸಾವು ಸಾವಿರ ಪರ್ಸೆಂಟ್ ಖಚಿತ ಎಂದರು. ಈ ಗಂಡಾಂತರದಿಂದ ಪಾರಾಗಬೇಕಾದ್ರೆ ದಕ್ಷಿಣದ 6 ಕ್ಷೇತ್ರಗಳ ಸುಬ್ರಹ್ಮಣ್ಯ ದೇವರನ್ನು ಆರಾಧಿಸಬೇಕು ಎಂದು ಸಲಹೆ ನೀಡಿದರು. ಜೊತೆಗೆ ನಾನೇ ಎಲ್ಲಾ ಅನ್ನೋ ಹಿಟ್ಲರ್ ಮನೋಧೋರಣೆಯನ್ನು ಮೋದಿ ಅವರು ಬಿಟ್ಟರೆ ಒಳ್ಳೆಯದು ಎಂದರು.
ಸಮ್ಮಿಶ್ರ ಸರಕಾರ:
ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬೆರಕೆ ಸರಕಾರ ಬರಲಿದೆ ಎಂದು ಭವಿಷ್ಯ ನುಡಿದ ಗುರೂಜಿ, ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಆಗುವುದರ ಜೊತೆಗೆ ಕಿಂಗ್'ಮೇಕರ್ ಆಗಲಿದ್ದಾರೆ ಎಂದರು. ಆದರೆ ಅವರು ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡು, ತಂದೆ ದೇವೇಗೌಡರ ಮಾತನ್ನು ಚಾಚೂತಪ್ಪದೆ ಕೇಳಬೇಕು. ಹಿಂದಿನ ತಪ್ಪುಗಳನ್ನು ತಿದ್ದುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್-ಬಿಜೆಪಿಗಿಂತ ಕುಮಾರಸ್ವಾಮಿ ಅವರ ಮೇಲೆ ಉತ್ತರ ಕರ್ನಾಟಕದ ಜನರು ನಂಬಿಕೆ ಇಟ್ಟಿದ್ದಾರೆ, ಅವರು ಅದನ್ನು ಉಳಿಸಿಕೊಳ್ಳಬೇಕು ಎಂದೂ ಕಿವಿಮಾತು ಹೇಳಿದರು.
ಬಿಎಸ್'ವೈ ಸ್ಥಾನಪಲ್ಲಟ?
ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಪಲ್ಲಟ ಖಚಿತ, ಅವರ ಪಕ್ಷದಲ್ಲೇ ಅವರನ್ನು ಮುಗಿಸೋ ಹುನ್ನಾರ ನಡಯುತ್ತಿದೆ. ಯಡಿಯೂರಪ್ಪ ಅವರದು ಹಿತ್ತಾಳೆ ಕಿವಿ. ವಿಷವನ್ನು ಪಕ್ಕದಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದು, ಇದನ್ನು ನಿವಾರಿಸಿಕೊಳ್ಳಬೇಕು ಎಂದು ನರೇಂದ್ರಬಾಬು ಶರ್ಮಾ ತಿಳಿಸಿದರು.
ಸಿದ್ದು ಅಕ್ಕಪಕ್ಕ ಕಚಡಾ:
ಸಿಎಂ ಸಿದ್ದರಾಮಯ್ಯ ಅಕ್ಕಪಕ್ಕ ಚೂರಿ ಹಾಕುವವರು ಇದ್ದಾರೆ. ಕೆಲವರು ಕಚಡಾ ಮಂತ್ರಿಗಳಿದ್ದಾರೆ. ಇದನ್ನು ಸರಿಪಡಿಸಿಕೊಂಡು ಹಗರಣರಹಿತ ಆಡಳಿತ ನೀಡಬೇಕು ಎಂದು ಹೇಳಿದ ಬ್ರಹ್ಮಾಂಡ ಗುರೂಜಿ ಅವರು, ಸಿದ್ದರಾಮಯ್ಯ ನಾಸ್ತಿಕರಲ್ಲ, ಬದಲಾಗಿ ಆಸ್ತಿಕರು ಎಂದು ಪ್ರತಿಪಾದಿಸಿದರು.
ವರದಿ: ಹರೀಶ್, ಸುವರ್ಣನ್ಯೂಸ್, ಹಾಸನ
