2 ಭಾಗದಲ್ಲಿ ಬಿಡುಗಡೆ, ಮೊದಲ ಭಾಗ 2020ಕ್ಕೆ ತೆರೆಗೆ ಜಾಹೀರಾತು ನಿರ್ಮಾಣದಲ್ಲಿ ಹೆಸರು ಗಳಿಸಿರುವ ವಿ.ಎ.ಶ್ರೀ ಕುಮಾರ್‌ ಮೆನನ್‌ ನಿರ್ದೇಶನ ಇದು ಇಡೀ ವಿಶ್ವಕ್ಕಾಗಿ ಮಾಡುತ್ತಿರುವ ಮೇಕ್‌ ಇನ್‌ ಇಂಡಿಯಾ ಸಿನಿಮಾ. ವಿಶ್ವಾದ್ಯಂತ ಸುಮಾರು 300 ಕೋಟಿ ಜನರನ್ನು ತಲುಪುವ ನಿರೀಕ್ಷೆ ಇದೆ.
ಕೊಚ್ಚಿ: ಭಾರತದ ಪೌರಾಣಿಕ ಧರ್ಮ ಗ್ರಂಥ ಮಹಾಭಾರತವನ್ನು ಇದೇ ಮೊದಲ ಬಾರಿಗೆ ಬೆಳ್ಳಿ ತೆರೆಯ ಮೇಲೆ ತರಲು ಸಂಯುಕ್ತ ಅರಬ್ ಸಂಸ್ಥಾನ(ಯುಎಇ)ದಲ್ಲಿ ನೆಲೆಯೂ ರಿರುವ ಕನ್ನಡಿಗ ಉದ್ಯಮಿ ಬಿ.ಆರ್. ಶೆಟ್ಟಿಅವರು ಮುಂದಾಗಿದ್ದಾರೆ.
ಮಹಾ ಭಾರತವನ್ನು ಸಿನಿಮಾ ರೂಪದಲ್ಲಿ ತರುವ ಸಲುವಾಗಿ ಉಡುಪಿ ಜಿಲ್ಲೆ ಕಾಪು ಮೂಲದ ಬಿ.ಆರ್. ಶೆಟ್ಟಿಅವರು ಬರೋಬ್ಬರಿ 1 ಸಾವಿರ ಕೋಟಿ ರು. ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಮಲಯಾಳ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮಹಾಭಾರತ ತಯಾರಾಗಲಿದೆ. ಬಳಿಕ ಭಾರತದ ಪ್ರಮುಖ ಹಾಗೂ ವಿದೇಶಿ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗುತ್ತದೆ ಎಂದು ಬಿ.ಆರ್. ಶೆಟ್ಟಿಒಡೆತನದ ಕಂಪನಿ ಯೊಂದು ಮಾಹಿತಿ ನೀಡಿದೆ. ಜಾಹೀರಾತು ತಯಾರಿಕೆ ಮೂಲಕ ಜನಪ್ರಿಯತೆ ಗಳಿಸಿರುವ ವಿ.ಎ. ಶ್ರೀಕುಮಾರ್ ಮೆನನ್ ಅವರು ಮಹಾಭಾರತವನ್ನು ನಿರ್ದೇಶಿಸಲಿದ್ದಾರೆ.
2 ಹಂತಗಳಲ್ಲಿ ಈ ಪೌರಾಣಿಕ ಧರ್ಮ ಗ್ರಂಥ ತೆರೆಗೆ ಬರಲಿದೆ. 2018ರ ಸೆಪ್ಟೆಂಬರ್ನಲ್ಲಿ ಚಿತ್ರೀಕರಣ ಆರಂಭವಾ ಗಲಿದ್ದು, 2020ರ ಆರಂಭದಲ್ಲಿ ಮೊದಲ ಭಾಗ ಬಿಡುಗ ಡೆಯಾಗಲಿದೆ. ಅದಾದ 90 ದಿನಗಳಲ್ಲಿ 2ನೇ ಭಾಗವನ್ನು ಬಿಡುಗಡೆ ಮಾಡಲು ಉದ್ದೇಶಿಸ ಲಾಗಿದೆ. ಈ ಸಿನಿಮಾದಲ್ಲಿ ಮಲೆಯಾಳಂ ನಟ ಮೋಹನ್ಲಾಲ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಇವರೊಂದಿಗೆ ವಿಶ್ವ ಸಿನಿಮಾ ದಿಗ್ಗಜರು ಹಾಗೂ ಆಸ್ಕರ್ನಂತಹ ಪ್ರಶಸ್ತಿ ವಿಜೇತರನ್ನೂ ಚಿತ್ರದ ತಾಂತ್ರಿಕ ತಂಡಕ್ಕೆ ಸೇರಿ ಸಿಕೊಳ್ಳಲು ಉದ್ದೇಶಿಸ ಲಾಗಿದೆ. ಭಾರತೀಯ ಸಿನಿಮಾದ ಘಟಾನು ಘಟಿ ನಟರು ಮಾತ್ರವೇ ಅಲ್ಲದೇ ಹಾಲಿವುಡ್ನ ಖ್ಯಾತನಾಮರನ್ನೂ ಕರೆತರುವ ಉದ್ದೇಶ ವಿದೆ. 100 ಭಾಷೆಗಳಲ್ಲಿ ಮಹಾಭಾರತವನ್ನು ತೆರೆಗೆ ತಂದು, 300 ಕೋಟಿ ಜನರಿಗೆ ತಲುಪಿಸುವ ಆಶಯವಿದೆ.
90ರ ದಶಕದಲ್ಲಿ ಧಾರಾವಾಹಿ ರೂಪದಲ್ಲಿ ಪ್ರಸಾರವಾಗಿದ್ದ ಮಹಾಭಾರತ, ಅಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು.
