ಬೆಂಗಳೂರು(ಫೆ.08): ಅನ್ನಭಾಗ್ಯ ಕಾರ್ಯಕ್ರಮದಡಿ ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಯೂನಿಟ್‌ಗೆ 5 ಕೆ.ಜಿ.ಯಿಂದ 8 ಕೆ.ಜಿ.ಗೆ ಹೆಚ್ಚಳ ಮಾಡಿದ್ದು, ಏಪ್ರಿಲ್ ತಿಂಗಳಿಂದ ಹೆಚ್ಚುವರಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ
ಬೆಂಗಳೂರು(ಫೆ.08): ಅನ್ನಭಾಗ್ಯ ಕಾರ್ಯಕ್ರಮದಡಿ ಬಿಪಿಎಲ್ ಕಾರ್ಡ್ದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು ಯೂನಿಟ್ಗೆ 5 ಕೆ.ಜಿ.ಯಿಂದ 8 ಕೆ.ಜಿ.ಗೆ ಹೆಚ್ಚಳ ಮಾಡಿದ್ದು, ಏಪ್ರಿಲ್ ತಿಂಗಳಿಂದ ಹೆಚ್ಚುವರಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ
ಬುಧವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲ ಶಾಸಕರ ಈ ಬಗೆಗಿನ ಆಗ್ರಹಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಪಿಎಲ್ ಕಾರ್ಡ್ದಾರರಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು 5 ಕೆ.ಜಿ.ಯಿಂದ 8 ಕೆ.ಜಿ.ಗೆ ಹೆಚ್ಚಳ ಮಾಡಲಾಗುವುದು. ಈ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ಜತೆಗೆ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಾರದ ಐದು ದಿನಗಳ ಕಾಲ ಹಾಲು ವಿತರಣೆ ಮಾಡಲಾಗುವುದು. ಪಡಿತರ ಚೀಟಿಯನ್ನು ಆಧಾರ್ಗೆ ಲಿಂಕ್ ಮಾಡಿಕೊಳ್ಳದ ಬಿಪಿಎಲ್ ಕಾರ್ಡ್ದಾರರಿಗೂ ತಕ್ಷಣಕ್ಕೆ ಪಡಿತರ ವಿತರಣೆ ನಿಲ್ಲಿಸದೆ ಎರಡು ತಿಂಗಳು ಪಡಿತರ ವಿತರಣೆ ಮುಂದುವರಿಸಲಾಗುವುದು. ಈ ಮೂಲಕ ಆಧಾರ್ ಲಿಂಕ್ ಮಾಡಿಸಲು ಸೂಕ್ತ ಕಾಲಾವಕಾಶ ನೀಡಲಾಗುವುದು. ಜತೆಗೆ ಗ್ಯಾಸ್ ಸಂಪರ್ಕ ಹೊಂದಿರುವವರಿಗೂ ಸೀಮೆ ಎಣ್ಣೆ ನೀಡಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪಡಿತರ ಬದಲಿಗೆ ಹಣ ಅಥವಾ ಕೂಪನ್ ವಿತರಣೆ ನೀಡುತ್ತೇವೆಂದು ಸೃಷ್ಟಿಯಾಗಿರುವ ಗೊಂದಲವನ್ನು ಬಗೆಹರಿಸಲಾಗುವುದು ಎಂದು ಪಡಿತರ ಚೀಟಿದಾರರಿಗೆ ಸಾಲು-ಸಾಲು ಕೊಡುಗೆ ಘೋಷಿಸಿದರು.
